340 ಮಂದಿಗೆ ಲಸಿಕೆ ವಿತರಣೆ

0
140

ಮಡಿಕೇರಿ -ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಗೆ ಹಾಗೂ ಕಾಲೇಜು ಸಿಬ್ಬಂದಿಯ ವರ್ಗದವರಿಗೆ ಒಟ್ಟು 340 ಮಂದಿಗೆ ಲಸಿಕೆ ವಿತರಿಸಲಾಯಿತು.

ಉಳಿದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಇದೇ ರೀತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುವುದು ಎಂದು ಪ್ರಾಂಶುಪಾಲರಾದ ಪ್ರೊ ಎಚ್.ಬಿ. ಲಿಂಗಮೂರ್ತಿ ಅವರು ತಿಳಿಸಿದರು.

ಪ್ರಾಂಶುಪಾಲರಾದ ಪ್ರೊ.ಎಚ್.ಬಿ.ಲಿಂಗಮೂರ್ತಿ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಕೋವಿಡ್ ಲಸಿಕ ಕಾರ್ಯಕ್ರಮ ಉಪಯೋಗವಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಕಾಲೇಜು ಆಡಳಿತ ಮಂಡಳಿ ಸಿದ್ಧವಾಗಿದ್ದು ಪ್ರತಿಯೊಬ್ಬರಿಗೂ ಕೂಪನ್ ನೀಡುವುದರ ಮೂಲಕ ಲಸಿಕೆ ನೀಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕಿನ ತಹಶೀಲ್ದಾರರಾದ ಗೋವಿಂದರಾಜ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ತಾಲೂಕು ಆರೋಗ್ಯ ಸಿಬ್ಬಂದಿ ವರ್ಗ, ಕಾಲೇಜಿನ ಉಪನ್ಯಾಸಕರಾದ ಹರ್ಷ ಬಿ.ಡಿ, ವಸಂತ ಕುಮಾರಿ, ಪುಟ್ಟರಾಜು, ಎನ್‍ಎಸ್‍ಎಸ್ ಅಧಿಕಾರಿಗಳಾದ ಕಾವೇರಪ್ಪ ಏ.ಕೆ ಮತ್ತು ಚರಿತ, ಆಡಳಿತ ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here