ಕೂಡ್ಲಿಗಿ ಅರಣ್ಯ ಇಲಾಖೆಯಿಂದ ಸೋಲಾರ್ ಹೊಮ್ ಲೈಟ್ ವಿತರಣೆ

0
469

ವಿಜಯನಗರ:ಮೇ10:- ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅರಣ್ಯ ಇಲಾಖೆ ವತಿಯಿಂದ ಕರಡಿ ದಾಳಿಗೆ ಒಳಗಾಗಿರುವ ಹಳ್ಳಿಗಳಿಗೆ ಸೋಲಾರ್ ಹೊಮ್ ಲೈಟ್ ವಿತರಣೆ ಕಾರ್ಯಕ್ರಮ ಹಾಗೂ ಕಂದಾಯ ಇಲಾಖೆ ವತಿಯಿಂದ ಎರಡು ದಿನಗಳ ಇಂದೆ ಜರ್ಮಲಿ, ರಾಮಸಾಗರ ಹಟ್ಟಿ ಹಾಗೂ ಚಿಕ್ಕಜೋಗಿಹಳ್ಳಿ ತಾಂಡಾ ಸಿಡಿಲಿಗೆ ಮೃತವಾದ ಕುರಿ-ಮೇಕೆ ಎತ್ತುಗಳ ವಾರಸುದಾರರಿಗೆ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮವನ್ನು ಇಂದು ಗುಡೇಕೋಟೆ ವಲಯ ಅರಣ್ಯ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕರಾದ ಏನ್.ವೈ ಗೋಪಾಲಕೃಷ್ಣ ಅವರು ಹಾಗೂ ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಗೋವಿಂದಪ್ಪ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಶಾಸಕರಾದ ಎನ್.ವೈ ಗೋಪಾಲಕೃಷ್ಣ ಅವರು ಮಾತನಾಡಿನಾವುಗಳು ಬರೀ ಕರಡಿಯಿಂದ ತುತ್ತಾಗಿರುವ ಜನರಿಗೆ ಪರಿಹಾರ ಕೊಡುವುದು ಮುಖ್ಯವಲ್ಲ ಇಡೀ ಗ್ರಾಮಕ್ಕೆ ಸೋಲಾರ್ ಲೈಟ್ಕೊಟ್ಟರೆ ಬಗೆಹರಿಯುವುದಿಲ್ಲ,ಜನರಿಗೆ ಜಾಗೃತಿ ಮೂಡಿಸಬೇಕು, ಇನ್ನು ಮುಂದೆ ಕರೆಂಟಿನ ವ್ಯವಸ್ಥೆ ರಾತ್ರಿಯ ವೇಳೆ ರೈತರ ಹೊಲದಲ್ಲಿ ಕರೆಂಟ್ ಕೊಡಲು ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಭರವಸೆ ಕೊಟ್ಟರು.

ಇದೇ ಸಂದರ್ಭದಲ್ಲಿ ಕಡಕೋಳ ಗ್ರಾಮದ 183 ಮನೆಗಳಿಗೆ ಸೋಲಾರ್ ಹೊಮ್ ಲೈಟ್ ವಿತರಣೆ ಮಾಡಲಾಯಿತು. ಹಾಗೂ ಇತ್ತೀಚಿಗೆ ಸಿಡಿಲಿಗೆ ಮೃತವಾದ ಕುರಿ-ಮೇಕೆ ಎತ್ತುಗಳ ವಾರಸುದಾರರಿಗೆ ಸರ್ಕಾರದ ಪರಿಹಾರ ಚೆಕ್ ವಾರಸುದಾರರಿಗೆ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜಗದೀಶ್ ಟಿ, ಬಿಜೆಪಿ ಮುಖಂಡರಾದ ರಾಧಾ ಕೆ.ಎಹ್ ವೀರಣ್ಣಗೌಡ, ಟಿಜಿ ಮಲ್ಲಿಕಾರ್ಜುನಗೌಡ, ಮಂಜುನಾಥ್, ಕೆ ತಿಪ್ಪೇಸ್ವಾಮಿ, ಹಾಗೂಅರಣ್ಯಧಿಕಾರಿ ರೇಣುಕಮ್ಮ, ತಾಲೂಕು ಆಡಳಿತ ಅಧಿಕಾರಿಗಳು, ಸಾರ್ವಜನಿಕರು ಬಿಜೆಪಿ ಮುಖಂಡರು, ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here