ಅಂತೂ ಅನ್ಲಾಕ್ ಕಂಡ ಕೊಡಗು: ನಿಯಮ ಪಾಲನೆ ಕಡ್ಡಾಯ

0
61

ಸೋಂಕು ಕಡಿಮೆಯಾಗದ ಹಿನ್ನಲೆ ರಾಜ್ಯದೆಲ್ಲೆಡೆ ಲಾಕ್​ಡೌನ್​ ತೆರವು ಮಾಡಿದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ನಿರ್ಬಂಧ ಮುಂದುವರೆಸಲಾಗಿತ್ತು. ಪ್ರವಾಸೋದ್ಯಮವೇ ಮೂಲ ಆದಾಯವಾಗಿರುವ ಕೊಡಗಿನಲ್ಲಿ ಲಾಕ್​ಡೌನ್​ನಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೇ, ಜನರು ಕೂಡ ಉದ್ಯೋಗ, ಆದಾಯವಿಲ್ಲದೇ ಕಂಗೆಟ್ಟಿದ್ದಾರೆ. ಈ ಹಿನ್ನಲೆ ಇಂದಿನಿಂದ ಕೊಡಗಿನಲ್ಲಿ ಹೇರಿದ್ದು ನಿರ್ಬಂಧ ತೆರೆಯಲಾಗಿದ್ದು, ಅನ್​ಲಾಕ್​ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದರು. ನಿನ್ನೆ ಕೊಡಗು ಪ್ರವಾಸ ಕೈಗೊಂಡಿದ್ದ ಸಚಿವರಿಗೆ ಈ ಕುರಿತು ಸಾಕಷ್ಟು ಮನವಿಗಳು ಬಂದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗದೆ. ಆದರೆ, ಈ ವೇಳೆ ಕೊರೋನಾ ನಿಯಮವಾಳಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಚಿವರು ತಿಳಿಸಿದ್ದಾರೆ.

ಇನ್ಮುಂದೆ ರಾಜ್ಯದಲ್ಲಿ ಒಂದೇ ಪ್ರಾದೇಶಿಕ ಆಯುಕ್ತರ ಕಚೇರಿ:

ಇದೇ ವೇಳೆ ಹಲವಾರು ವಿಷಯಗಳ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿರುವ 4 ಪ್ರಾದೇಶಿಕ ಆಯುಕ್ತರ ಕಚೇರಿ ಮುಚ್ಚಲು ನಿರ್ಧಾರ ಮಾಡಲಾಗಿದೆ. ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಚೇರಿಗಳ ಬದಲಾಗಿ, ರಾಜ್ಯದಲ್ಲಿನ್ನು ಒಂದೇ ಪ್ರಾದೇಶಿಕ ಆಯುಕ್ತರ ಕಚೇರಿ ಇರಲಿದೆ. ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ಗಳಿವೆ. ಐನ್ನೂರು ಜನ ಕೆಲಸ ಮಾಡುತ್ತಿದ್ದಾರೆ. ಕಚೇರಿಗೆ ಬಂದಿರುವ ಅಪೀಲುಗಳು ಕೇವಲ 200. ಈ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಇದರಿಂದ ಬಹಳಷ್ಟು ಹಣ ಉಳಿತಾಯ ಆಗುತ್ತದೆ. ಒಂದು ಪ್ರಾದೇಶಿಕ ಆಯುಕ್ತರ ಕಚೇರಿ ಮಾಡಿ ಒಬ್ಬರನ್ನು ಆಯುಕ್ತರನ್ನಾಗಿ ಮಾಡುತ್ತೇವೆ. ಅಲ್ಲಿನ ಸಿಬ್ಬಂದಿಯನ್ನು ಡಿಸಿ ಆಫೀಸ್ ಗೆ ಶಿಫ್ಟ್​​ ಮಾಡುತ್ತೇವೆ ಎಂದರು

ವಿಜಯ್ ಭಾಸ್ಕರ್ ಹಿಂದಿನ ಚೀಪ್ ಸೆಕ್ರಟರಿ ಆಗಿದ್ದರು. ಕಂದಾಯ ಇಲಾಖೆಯಲ್ಲಿ ಏನೇನು ಬದಲಾವಣೆ ತರಬೇಕೆಂದು ವರದಿ ನೀಡಿದ್ದಾರೆ . ಸರಲೀಕರಣದಲ್ಲಿ ಅರ್ಜಿಗಳ ವಿಚಾರಣೆಗೆ ಅವಕಾಶ ನೀಡಿ ಹಲವಾರು ಸಲಹೆಗಳನ್ನ ಕೊಟ್ಟಿದ್ದಾರೆ.

ಸಾರ್ವಜನಿಜರ ಆಕ್ಷೇಪಣೆ ಬಳಿಕ ಬಾಡಿಗೆದಾರರ ಅಧಿನಿಯಮ ಜಾರಿ:
ಬಾಡಿಗೆದಾರರ ಅಧಿನಿಯಮ ಪರಿವರ್ತನೆ ಆಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಪ್ಲಾಟ್ ಇದೆ. ಬಾಡಿಗೆದಾರರು, ಮಾಲೀಕರ ನಡುವೆ ಫೈಟ್ ಇತ್ತು. ಅವರ ನಡುವಿನ ಗೊಂದಲ ಹಾಗೇ ಉಳಿಯುತ್ತಿತ್ತು. ಕೋರ್ಟ್ ಕಚೇರಿ ಅಲೆಯ ಬೇಕಿತ್ತು. ಈಗ ಬಾಡಿಗೆದಾರ, ಮಾಲಿಕರ ನಡುವೆ ಅಗ್ರಿಮೆಂಟ್ ನಂತರ ಫೈನಲ್ ಅಗುತ್ತೆ. ಮನೆ ಮಾಲಿಕರ ಹಿತರಕ್ಷಣೆಗೆ ಮುಂದಾಗಿಲ್ಲ. ಜೂನ್ 2ರಂದು ಕೇಂದ್ರ ಸರ್ಕಾರ ಕಾನೂನು ತಂದಿದೆ. ನಾವು ಈ ಕಾನೂನನ್ನ‌ ತರುತ್ತಿದ್ದೇವೆ. ಕಾನೂನಿನಡಿ ಇಬ್ಬರಿಗೂ ಅನುಕೂಲವಾಗಲಿದೆ. ಸರ್ಕಾರದ ಆ್ಯಪ್ ನಲ್ಲಿ ಅಪ್ಲೋಡ್ ಮಾಡಬೇಕು. ಇದರ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಕಾನೂನನ್ನ ಇನ್ನೂ ಜಾರಿಗೆ ತಂದಿಲ್ಲ. ಸಲಹೆ ಸೂಚನೆಗಳನ್ನ ಕೊಟ್ಟರೆ ನಂತರ ತರುತ್ತೇವೆ ಎಂದರು.

LEAVE A REPLY

Please enter your comment!
Please enter your name here