ಕೋವಿಡ್ ಗೆ ಬಲಿಯಾದ ಆತ್ಮಗಳಿಗೆ ಶಾಂತಿ ದೊರೆಯಲಿ: ಆರ್. ಅಶೋಕ್.

0
110

ಮಂಡ್ಯ..ಅ.04 :- ಕೋವಿಡ್ ಸಾಂಕ್ರಾಮಿಕದಿಂದ ಮೃತರಾದವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ, ಯಾರು ಅನಾಥರಲ್ಲ, ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ, ನಮ್ಮದು ಮಾನವೀಯತೆ ಮೆರೆದಂತಹ ರಾಜ್ಯವಾಗಿದೆ, ಆದ್ದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಮೂಹಿಕ ಪಿಂಡ ಪ್ರದಾನ ಮಾಡಿದೆವು ಎಂದು ಕಂದಾಯ ಸಚಿವ ಆರ್.ಅಶೋಕ್ ರವರು ತಿಳಿಸಿದರು.

ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಗೋಸಾಯಿ ಘಾಟ್ ನಲ್ಲಿ ಕೊರನಾ ವೈರಸ್ ನಿಂದ ಮೃತರಾದವರ ಆತ್ಮಕ್ಕೆ ಶಾಂತಿ ದೊರಕಿಸಲು ಪಿತೃಪಕ್ಷದ ಸಂದರ್ಭದಲ್ಲಿ ಪಿಂಡಪ್ರದಾನ ಮಾಡಲಾಗುತ್ತಿದ್ದು, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪಿಂಡ ಪ್ರದಾನ ಮಾಡಿ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ದೇಶದಲ್ಲಿ ಸರ್ಕಾರದ ವತಿಯಿಂದ ಅಸ್ಥಿ ಪ್ರಧಾನ ಮಾಡುತ್ತಿದ್ದೇವೆ ಎಂದರು.

ಕೊರೋನಾ ಸಾಂಕ್ರಮಿಕ ವೈರಸ್ ನಿಂದ ಮೃತರಾದ ವಾರಸುದಾರರಿಲ್ಲದ 1000 ಕ್ಕೂ ಅಧಿಕ ಜನರ ಅಸ್ಥಿಯನ್ನು ವಿಸರ್ಜನೆ ಮಾಡಿದ ಕಂದಾಯ ಸಚಿವರಾದ ಆರ್. ಅಶೋಕ್ ರವರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು, ಇದೀಗ ಸಾಮೂಹಿಕ ಪಿಂಡಪ್ರದಾನಕ್ಕೆ ಮುಂದಾಗಿ , ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪಿಂಡ ಪ್ರಾದಾನ ಮಾಡಿದರು.

ಇಂದು ನಡೆದ ಪಿಂಡ ಪ್ರದಾನ ಧಾರ್ಮಿಕ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಜ್ಯೋತಿಷಿ ವೇದಬ್ರಹ್ಮ ಡಾ.ವಿ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ರೂಪರೇಷ ಸಿದ್ಧಪಡಿಸಿಕೊಂಡು ಧಾರ್ಮಿಕ ಕಾರ್ಯಗಳಿಗೆ ಅಡಿಯಾಗಿ, ಸಾಮೂಹಿಕವಾಗಿ ಪ್ರೇತ ಸಂಸ್ಕಾರ, ನಾರಾಯಣ ಬಲಿ ಬಳಿಕ ಎಡೆ ಪೂಜೆಯನ್ನು ನೆರವೇರಿಸಿ ತಿಲತರ್ಪಣದೊಂದಿಗೆ ಪಿಂಡಪ್ರದಾನ ವನ್ನು ಕಾವೇರಿ ನದಿಯಲ್ಲಿ ಸಲ್ಲಿಸಿದರು.

ಹಿಂದೆ ಪುರಾತನ ಕಾಲದಲ್ಲಿ ಪ್ರವಾಹ, ನೆರೆ ಹಾವಳಿ, ಇತರೆ ಸಾಂಕ್ರಾಮಿಕ ರೋಗಗಳು ಬಂದು ಜನರು ಬಲಿಯಾದಾಗ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಧಿ-ವಿಧಾನಗಳ ಮೂಲಕ ಸಾಮೂಹಿಕ ಪಿಂಡ ಪ್ರದಾನವನ್ನು ಮಾಡಲಾಗುತ್ತಿತ್ತು. ಕೋವಿಡ್ ನಿಂದ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ಸಹ ಸಾಮೂಹಿಕ ಪಿಂಡ ಪ್ರದಾನವನ್ನು ಮಾಡಿದೆವು ಎಂದರು.

ನಮ್ಮ ದೇಶದಲ್ಲಿ ಕೋವಿಡ್ ನಿಂದ ಮೃತವಾದ ಅನೇಕ ಶವಗಳು ಗಂಗಾನದಿಯಲ್ಲಿ ತೇಲಿ ಹೋಗಿರುವುದನ್ನು ಗಮನಿಸಿರಬಹುದು .ಬಲಿಯಾದ ಅನೇಕ ಶವಗಳಿಗೆ ವಾರಸುದಾರರಿಲ್ಲ ಮತ್ತು ಚಿಕ್ಕ-ಚಿಕ್ಕ ಮಕ್ಕಳು ಪಿಂಡ ಪ್ರದಾನ ಮಾಡಲಾಗುತ್ತಿಲ್ಲ, ಆತ್ಮಗಳು ಭೂತ-ಪ್ರೇತಾತ್ಮ ಗಳಾಗಿ ಅಲೆಯದೆ , ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿಂಡ ಪ್ರಧಾನವನ್ನು ನೆರವೇರಿಸಲಾಯಿತು ಎಂದರು.

ಕೋವಿಡ್ ಎರಡನೇ ಅಲೆಯಲ್ಲಿ ಮೃತಪಟ್ಟವರ ಅಸ್ಥಿಗಳನ್ನು ಮೃತರ ಸಂಬಂಧಿಕರು ಪಡೆಯಲು ಮುಂದೆ ಬಾರದ ಹಿನ್ನೆಲೆಯಲ್ಲಿ, ಸರ್ಕಾರದಿಂದಲೇ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು. ಬಳಿಕ ಅವರ ಅಸ್ಥಿಯನ್ನು ಸಂಪ್ರದಾಯಬದ್ಧವಾಗಿ ಬೆಳಕವಾಡಿ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು ಎಂದರು.

ಸದರಿ ದಾರ್ಮಿಕ ಪೂಜಾ ಕಾರ್ಯದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ , ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ವಾರ್ತಾಧಿಕಾರಿ ಟಿ.ಕೆ ಹರೀಶ್, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ , ಭಾನುಪ್ರಕಾಶ್ ಶರ್ಮ ಹಾಗೂ ಮತ್ತಿತರರು ಧಾರ್ಮಿಕ ವಿಧಾನದಲ್ಲಿ ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here