ಬುದ್ದಿಮಾಂದ್ಯ ಮತ್ತು ನಿರ್ಗತಿಕರಿಗೆ ಆಸರೆಯಾಗಿರುವ ಕಾರುಣ್ಯ ವೃದ್ಧಾಶ್ರಮ.

0
205

ರಾಯಚೂರು:ಜುಲೈ:06:-ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಸುಮಾರು ಮೂರು ವರ್ಷಗಳಿಂದ ಆಶ್ರಯ ಪಡೆದಿದ್ದ ನಿರ್ಗತಿಕ ಹಿರಿಯರು ವೃದ್ಧ ಜೀವಿ ಕೆ.ಹಂಚಿನಾಳ ಗ್ರಾಮದ 79 ವಯಸ್ಸಿನ ಚನ್ನಪ್ಪ ತಂದೆ ಸಿದ್ದಣ್ಣ ಉಪ್ರಾಳ್ ಅವರ ನಿಧನದ ಅಂತ್ಯಸಂಸ್ಕಾರ ಸಿಂಧನೂರಿನ ವೀರಶೈವ ಸಮಾಜದ ರುದ್ರಭೂಮಿಯಲ್ಲಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೃತರಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಂಧನೂರಿನ ಸಮಾಜಸೇವಕರಾದ ಡಾ. ನಾಗವೇಣಿ ಎಸ್ ಪಾಟೀಲ್ ಕಾರುಣ್ಯಾಶ್ರಮವು ನಮ್ಮ ಸಿಂಧನೂರಿನ ಘನತೆ ಗೌರವವನ್ನು ಹೆಚ್ಚಿಸುತ್ತಿದೆ ಈ ಆಶ್ರಮದ ಜೊತೆ ನಮ್ಮ ಸಮಾಜ ಸೇವೆಯ ಪಯಣ ಆತ್ಮತೃಪ್ತಿಯನ್ನು ತಂದಿದೆ ಇಂದು ನಿಧನರಾಗಿರುವ ಮೃತ ಯಜಮಾನರು ನಾನು ಆಶ್ರಮಕ್ಕೆ ಬಂದಾಗಲೆಲ್ಲ ನನ್ನನ್ನು ಮಗಳ ರೀತಿಯಲ್ಲಿ ಆಶೀರ್ವದಿಸುವುದು ಸಮಾಜಸೇವೆಯ ಮಾರ್ಗದರ್ಶನ ನೀಡುತ್ತಿರುವುದು ತಂದೆಯ ಸ್ಥಾನವನ್ನು ನೀಡಿ ನನಗೆ ಪ್ರೀತಿ-ವಿಶ್ವಾಸ ಗೌರವದಿಂದ ಕಾಣುತ್ತಿರುವುದನ್ನು ನೆನೆಸಿಕೊಂಡರೆ ಇಂದು ದುಃಖವಾಗುತ್ತದೆ. ಆದರೆ ದೇವರ ಲೆಕ್ಕದಲ್ಲಿ ಒಂದಿಲ್ಲ ಒಂದು ದಿನ ನಾವೆಲ್ಲಾ ಎಷ್ಟೇ ಸಂಪತ್ತಿದ್ದರೂ ಯಾವುದೇ ಸಾಧನೆಗಳಿದ್ದರೂ ಇಲ್ಲಿಯೇ ಬಿಟ್ಟು ಹೋಗುವುದು ಇದನ್ನೆಲ್ಲಾ ಪ್ರತಿಯೊಬ್ಬರು ಅರ್ಥಮಾಡಿಕೊಂಡು ತಮ್ಮ ಕಡೆಯಿಂದಾಗುವಂತಹ ಸ್ವಲ್ಪಮಟ್ಟಿಗೆ ಯಾದರೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಮಾತನಾಡಿ ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಮಾತನಾಡಿದ ಕಾರುಣ್ಯಾಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಮೂರು ವರ್ಷಗಳಿಂದ ನಮ್ಮ ತಂದೆಯ ರೂಪದಲ್ಲಿ ನಮಗೆಲ್ಲಾ ಮಾರ್ಗದರ್ಶಕರಾಗಿ ಈ ಕಾರುಣ್ಯ ಕುಟುಂಬದ ಹಿರಿಯ ಯಜಮಾನರಾಗಿ ನಮ್ಮ ಕರ್ತವ್ಯವನ್ನು ಸ್ವೀಕಾರ ಮಾಡಿರುವಂತ ಈ ಚನ್ನಪ್ಪ ಯಜಮಾನರಿಗೆ ಆ ಭಗವಂತ ನಿರಂತರ ಆತ್ಮ ಶಾಂತಿಯನ್ನು ಕರುಣಿಸಿ ಅವರ ಅಗಲಿಕೆಯ ನೋವು ಬರಿಸುವಂತಹ ಶಕ್ತಿಯನ್ನು ನಮಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇವೆ ನಮ್ಮ ಇಂತಹ ಸೇವೆಗಳಲ್ಲಿ ನಮ್ಮ ಕಾರುಣ್ಯ ಆಶ್ರಮದ ತಾಯಿಯಾಗಿ ನಮ್ಮ ಸಹೋದರಿಯಾಗಿ ನಾಗವೇಣಿ .ಎಸ್.ಪಾಟೀಲ್ ನಮ್ಮ ಸೇವೆಗೆ ಬೆನ್ನೆಲುಬಾಗಿ ಇನ್ನಿತರ ಸಮಾಜಪರ ಕಾರ್ಯಗಳಲ್ಲಿ ನಮ್ಮನ್ನು ಗುರುತಿಸಿ ಈ ಸೇವೆಗೆ ಧೈರ್ಯ ತುಂಬುತ್ತಿದ್ದಾರೆ ಇಂತಹ ಮಾತೆಯರು ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಇದ್ದರೆ ನಮ್ಮ ಸುಂದರ ಸಮಾಜದ ಕನಸು ನನಸಾಗುತ್ತದೆ ಎಂದು ಮಾತನಾಡಿ ಮೃತರಿಗೆ ಅಂತಿಮ ನಮನ ಗಳನ್ನು ಸಲ್ಲಿಸಿದರು. ಈ ಅಂತ್ಯಸಂಸ್ಕಾರದಲ್ಲಿ ಕೆ. ಹಂಚಿನಾಳ ಗ್ರಾಮಸ್ಥರುಗಳಾದ ಶಿವರಾಜಪ್ಪ ಮೇಟಿ. ಬಸವರಾಜ ಜೇರಬಂಡಿ. ಸುರೇಶ ಉಪ್ರಾಳ್. ಮಂಜುನಾಥ ಸಾಹುಕಾರ. ಆನಂದ ಶರಣಮ್ಮ.ಬಸವರಾಜ ಲಕ್ಷ್ಮಿ ಶರಬಣ್ಣ ವೀರಭದ್ರಪ್ಪ ಮತ್ತು ಅನೇಕರು ಈ ಅಂತಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ:ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here