ನಾರಾಯಣಪುರ ಐರನ್ ಮೈನ್ಸ್ ನಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ

0
111

ಸಂಡೂರು:ಅ: ದಿನಾಂಕ 18.10.2021 ರಂದು ಸಂಡೂರು ತಾಲೂಕಿನ ನಾರಾಯಣಪುರ ಐರನ್ ಮೈನ್ಸ್ ನಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕ್ಷಯ ರೋಗ ಮತ್ತು ಅದರ ಲಕ್ಷಣಗಳಾದ ಎರಡು ವಾರಕ್ಕಿಂತ ಮೀರಿದ ಕೆಮ್ಮು, ಸಾಯಂಕಾಲ ವಿಪರೀತ ಜ್ವರ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು , ದೇಹದ ತೂಕ ಕಡಿಮೆಯಾಗುವುದು ಈ ಎಲ್ಲ ಲಕ್ಷಣಗಳು ಕಂಡುಬಂದರೆ ಅದು ಕ್ಷಯರೋಗದ ಲಕ್ಷಣವಾಗಿರುತ್ತದೆ, ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ ಎಂದು ಕಾರ್ಮಿಕರಿಗೆ ತಿಳಿಸಿ ಹೇಳಲಾಯಿತು.

ನಿಕ್ಷೆಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯ ರೋಗಿಗೆ ಆರು ತಿಂಗಳವರೆಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು ರೂಪಾಯಿ 500/- ಸಹಾಯಧನ ನೀಡಲಾಗುವುದು.
ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಕ್ಷಯರೋಗಿ ಕೆಮ್ಮಿದಾಗ ಸೀನಿದಾಗ ಬ್ಯಾಕ್ಟೀರಿಯಾಗಳ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಇದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವುದರ ಮುಖಾಂತರ ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಕಾರ್ಮಿಕರಿಗೆ ಕ್ಷಯ ರೋಗದ ಬಗ್ಗೆ ಜಾಗೃತಿಯನ್ನು ನೀಡಲಾಯಿತು

ಈ ಕಾರ್ಯಕ್ರಮದಲ್ಲಿ NIOM Mines ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ಮತ್ತು ಶ್ರೀ ವೆಂಕಟೇಶ್ ಹಾಗೂ ಸಂಡೂರ್ ತಾಲೂಕ್ ಆಸ್ಪತ್ರೆಯ NTEP ಸಿಬ್ಬಂದಿ, KHPT ಸಮುದಾಯ ಸಂಯೋಜಕರಾದ ಶ್ರೀ ಸಂಗಮೇಶ್ ಮತ್ತು ಶ್ರೀ ರಾಜಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here