ಜನೌಷಧಿ ಮಳಿಗೆಗಳಿಂದ ಗುಣಮಟ್ಟದ ಔಷಧಿ ಖರೀದಿ ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಿ: ಡಿಎಚ್‍ಒ ಡಾ.ಜನಾರ್ಧನ್

0
87

ಬಳ್ಳಾರಿ,ಮಾ.05 : ಸಾಮಾನ್ಯ ಬಡಜನರಿಗೆ ಉತ್ತಮ ಗುಣಮಟ್ಟದ ಜನರಿಕ್ ಔಷಧಗಳನ್ನು ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ಈಗಾಗಲೇ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವ ಜನೌಷಧಿ ಅಂಗಡಿಗಳ ಮೂಲಕ ಔಷಧಿಗಳನ್ನು ಖರೀದಿಸಿ ಆರ್ಥಿಕ ಹೊರೆಯನ್ನು ಇಳಿಸಲು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ “ಜನೌಷಧಿ ಮಳಿಗೆಗಳ ಸ್ಥಾಪನೆಯ ಯೋಜನೆ” ಯನ್ನು ಕರ್ನಾಟಕ ಸರ್ಕಾರವು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದ್ದು ಜಿಲ್ಲೆಯಲ್ಲಿ ಆಯ್ದ ತಾಲ್ಲೂಕ ಮಟ್ಟದ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದ್ದು ಕೈಗೆಟುಕುವ ದರದಲ್ಲಿ ದೊರಕುವ ವ್ಯವಸ್ಥೆ ಮಾಡಲಾಗುತ್ತಿದ್ದು ಇದಕ್ಕಾಗಿ ಈ ಮಳಿಗೆಗಳ ನಿರ್ವಹಣೆ ಹಾಗೂ ಜವಾಬ್ದಾರಿಯನ್ನು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ ಹಾಗೂ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಗಳನ್ನು ನೋಡಲ್ ಸಂಸ್ಥೆಗಳನ್ನಾಗಿ ನಾಮನಿರ್ದೇಶನ ಮಾಡಲು ಸರ್ಕಾರವು ಉದ್ದೇಶಿಸಿದ್ದು. ಅರ್ಹ ಸರ್ಕಾರಿಯೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರುದ್ಯೋಗಿ ವೈದ್ಯರುಗಳು, ಹಾಗೂ ಫಾರ್ಮಸಿಸ್ಟ್‍ಗಳು ಮತ್ತು ಸ್ವಸಹಾಯ ಗುಂಪುಗಳು ಹಾಗೂ ಆರೋಗ್ಯ ರಕ್ಷಾ ಸಮಿತಿಗಳು ಈ ಮಳಿಗೆಗಳನ್ನು ತೆರೆಯಲು ಅರ್ಹರಿದ್ದು, ಇಚ್ಚಿಸಿದ ವ್ಯಕ್ತಿಗಳು ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ ಆಯ್ಕೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ಅಲ್ಲದೇ ಕರ್ನಾಟಕ ಸರ್ಕಾರವು ಆಯ್ದ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರವು ನಿರ್ಧರಿಸುವ ಬೇರೆ ಯಾವುದೇ ಸೂಕ್ತ ಸ್ಥಳಗಳಲ್ಲಿ ಈ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು ಬೇಕಾದ ಜಾಗವನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಬ್ಯೂರೋ ಆಫ್ ಫಾರ್ಮಾ ಪಿಎಸ್‍ಯುಎಸ್ ಆಫ್ ಇಂಡಿಯಾ-ಬಿಪಿಪಿಐ ಸಂಸ್ಥೆಯು ಪ್ರತಿ ಒಂದು ಜನೌಷಧಿ ಅಂಗಡಿಯನ್ನು ಪ್ರಾರಂಭಿಸಲು ನೋಡಲ್ ಸಂಸ್ಥೆಗೆ ಅಥವಾ ಕಾರ್ಯನಿರ್ವಹಿಸುವ ಸಂಸ್ಥೆಗೆ ಪ್ರಾರಂಭಿಕವಾಗಿ ರೂ.1ಲಕ್ಷದ ಮೌಲ್ಯದ ಔಷಧಿಗಳನ್ನು ಸರಬರಾಜು ಮಾಡಲು ಹಾಗೂ 1 ಲಕ್ಷ ರೂಪಾಯಿಗಳನ್ನು ಕೇಂದ್ರಗಳ ಸ್ಥಾಪನೆಗೆ ಹಾಗೂ ಪೀಠೋಪಕರಣಗಳನ್ನು ಒದಗಿಸಲು ಖರ್ಚು ಹಾಗೂ 50 ಸಾವಿರ ರೂಪಾಯಿಗಳನ್ನು ಕೇಂದ್ರಗಳ ನಿರ್ವಹಣೆಗೆ ಬೇಕಾದ ಗಣಕಯಂತ್ರ ಹಾಗೂ ಇತರ ಉಪಕರಣಗಳ ಖರೀದಿ ಸೇರಿ ಪ್ರತಿ ಕೇಂದ್ರಕ್ಕೆ 2.5 ಲಕ್ಷಗಳ ಆರ್ಥೀಕ ಸಹಾಯವನ್ನು ಒದಗಿಸುವುದು ಎಂದರು.
ಈ ಹಿನ್ನಲೆಯಲ್ಲಿ ಜನೌಷಧಿ ಮಳಿಗೆಗಳ ಮೂಲಕ ಔಷದಿಯನ್ನುü ಖರೀದಿಸಲು ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಲು ಹಾಗೂ ಜನೌಷಧಿ ಮಳಿಗೆ ಆರಂಭಿಸಲು ಇಚ್ಛೆ ಉಳ್ಳವರು ಈ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ,ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ವೀರೇಂದ್ರ ಕುಮಾರ್, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನ ಕುಮಾರಿ,
ಡಾ.ಆಶಿಯಾ ಬೇಗಮ್, ಡಾ.ಚಿತ್ರಾ ವೆರ್ಣೆಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ಹೆಚ್ ದಾಸಪ್ಪನವರ್, ಸಹಾಯಕ ಸಾಂಖ್ಯೀಕ ಅಧಿಕಾರಿ ಡಾ.ರಾಘವೇಂದ್ರ ಶಾನಬೋಗರ ಸೇರಿದಂತೆ ಆಶಾ ಕಾರ್ಯಕರ್ತೆಯರು,ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here