ಗಣಿಬಾಧಿತ ಜನರ ಬೃಹತ್ ಸಮಾವೇಶ ನಾಳೆ

0
91

ಸಂಡೂರು ಗಣಿಬಾಧಿತ ಪ್ರದೇಶದ ಅಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ಕಾರ್ಪೊರೇಷನ್ (KMERC) ಸಂಸ್ಥೆಯಲ್ಲಿ ರೂಪಾಯಿ 21 ಸಾವಿರ ಕೋಟಿ ಹಣ ಸಂಗ್ರಹವಾಗಿದೆ.

ಈ ಹಣದ ಸದ್ಬಳಕೆ ಮತ್ತು ಗಣಿ ಬಾಧಿತರ ಪ್ರದೇಶದ ಜನರ ಬೇಡಿಕೆಗಳು ಮತ್ತು ಪರಿಸರ ಪುನಶ್ಚೇತನಗೊಳಿಸುವ ಕುರಿತಂತೆ ಕ್ರಿಯಾಯೋಜನೆ ರೂಪಗೊಳ್ಳಬೇಕಿದೆ.
ಈ ಕುರಿತಂತೆ ಚರ್ಚಿಸಲು ಮತ್ತು ಜನರ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅಕ್ಟೋಬರ್ 29 ರಂದು ಸಂಡೂರಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಗಣಿಬಾದಿತ ಜನರ ಅಭಿವೃದ್ಧಿ ಸಮಿತಿ ಮುಖಂಡರು ತಿಳಿಸಿದರು.

ಕೆರೆ ಹೂಳೆತ್ತುವುದು, ಕೆರೆಗಳಿಗೆ ನೀರು ತುಂಬಿಸುವುದು, ಜನರಿಗೆ ವಸತಿ ಯೋಜನೆ ಕಲ್ಪಿಸುವುದು, ಹೈನುಗಾರಿಕೆ ಕೃಷಿ ಸ್ವಯಂ ಉದ್ಯೋಗ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲು ಜನರು ಇಚ್ಛೆ ವ್ಯಕ್ತ ಪಡಿಸಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದರು.
ಈ ನಿಧಿಯ ಬಳಕೆಗಾಗಿ ಗಣಿಬಾದಿತ ಪ್ರದೇಶಗಳಲ್ಲಿ ಜನರನ್ನು ಜಾಗೃತಗೊಳಿಸಲು ಸಮಿತಿವತಿಯಿಂದ ಅಕ್ಟೋಬರ್ 2ರಿಂದ ಒಟ್ಟು 24 ದಿನಗಳ ಕಾಲ ಸುಮಾರು 80 ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಜನರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೂ ಕೂಡ ಇದರ ಮಾಹಿತಿಯೇ ಇರಲಿಲ್ಲ.

ಅವ್ಯಾಹತವಾಗಿ 2001ರಿಂದ 2011ರ ವರೆಗೆ ನಡೆದ ಮಿತಿಮೀರಿದ ಮತ್ತು ಅಕ್ರಮ ಗಣಿಗಾರಿಕೆಯಿಂದಾಗಿ ಈ ಭಾಗದ ಜನರು ಮತ್ತು ಪರಿಸರ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಸಂತೋಷ್ ಹೆಗಡೆಯವರು ನೀಡಿದ ಲೋಕಾಯುಕ್ತ ವರದಿಯಂತೆ ಸರ್ವೋಚ್ಚ ನ್ಯಾಯಾಲಯ ಗಣಿಬಾದಿತ ಪರವಾಗಿ KMERC ಸ್ಥಾಪಿಸಲು ಆದೇಶ ನೀಡಿತ್ತು. ಇದರ ಶ್ರೇಯಸ್ಸು ಎಸ್ಆರ್ ಹಿರೇಮಠ ಅವರಿಗೆ ಸಲ್ಲಬೇಕು.

ಎಂಟು ವರ್ಷಗಳು ಕಳೆದು ಹೋಗಿದ್ದರು ಯೋಜನೆ ರೂಪಿಸುವಲ್ಲಿ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹೆಚ್ಚಿದೆ.

ಯೋಜನೆ ಸದುಪಯೋಗವಾಗಲು ವಿದ್ಯಾವಂತರು, ಬುದ್ಧಿಜೀವಿಗಳು, ವಿಶೇಷವಾಗಿ ಯುವ ವರ್ಗ ಸಮೂಹ ಶ್ರಮವಹಿಸಿ ದುಡಿಯಬೇಕಿದೆ .

LEAVE A REPLY

Please enter your comment!
Please enter your name here