ಬಳ್ಳಾರಿ ಎಪಿಎಂಸಿ ಬದಲು ವಿವಿಧ ಸ್ಥಳಗಳಲ್ಲಿ ತಾತ್ಕಾಲಿಕ ವ್ಯಾಪಾರ: ಡಿಸಿ ಮಾಲಪಾಟಿ ಆದೇಶ

0
238

ಬಳ್ಳಾರಿ,ಜ.07: ಕೋವಿಡ್ ಸೊಂಕು ನಿಯಂತ್ರಣಗೊಳಿಸಲು ಹಾಗೂ ಸಾರ್ವಜನಿಕ ದಟ್ಟಣೆ ನಿಯಂತ್ರಿಸಿ, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಳ್ಳಾರಿಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಮತ್ತು ಹಣ್ಣುಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ಬಳ್ಳಾರಿ ನಗರದ ವಿವಿಧ ಭಾಗಗಳಿಗೆ ವಿಕೇಂದ್ರಿಕರಿಸಿ ಈ ಕೆಳಕಂಡ ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿಯ ಈದ್ಗಾ ಮೈದಾನ. ಐ.ಟಿ.ಐ. ಕಾಲೇಜ್ ಮೈದಾನ, ರೆಡಿಯೋ ಪಾರ್ಕ್. ಎನ್.ಸಿ.ಸಿ ಮೈದಾನ, ಕಂಟೋನ್ಮೆಂಟ್. ಸೆಂಟ್‍ಜಾನ್ಸ್ ಶಾಲೆಯ ಮೈದಾನ. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ, ಕಪ್ಪಗಲ್ಲುರಸ್ತೆ, ಜಿಲ್ಲಾ ಕ್ರೀಡಾಂಗಣ, ನಲ್ಲಚೆರವು, ಬಳ್ಳಾರಿ. ಸರ್ಕಾರಿ ಶಾಲೆ ಹತ್ತಿರ ಶ್ರೀರಾಂಪುರ ಕಾಲೋನಿ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಅವರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಲು ಇಡೀ ನಗರದ ಜನತೆ ಹಣ್ಣು ತರಕಾರಿ ಖರೀದಿಗಾಗಿ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಆಗಮಿಸಿದಲ್ಲಿ ಜನದಟ್ಟಣೆಯಾಗುವ ಸಂಭವವಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದುಸ್ಸಾದ್ಯವಾಗಿರುತ್ತದೆ, ಅಲ್ಲದೇ ಇದರಿಂದ ಅಔಗಿIಆ-19 ಸೊಂಕು ಹರಡುವಿಕೆಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿರುವುದರಿಂದ, ಸಾರ್ವಜನಿಕ ಆರೋಗ್ಯ ಹಾಗೂ ಅಔಗಿIಆ-19 ಸೊಂಕು ನಿಯಂತ್ರಣ ಮಾಡುವ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಠಿಯಿಂದ ಜನ ಜೀವನಕ್ಕೆ ಅಗತ್ಯ ವಸ್ತುಗಳಾದ ಹಣ್ಣು ಮತ್ತು ತರಕಾರಿಗಳನ್ನು ವ್ಯಾಪರ ಮಾಡಲು ಎ.ಪಿ.ಎಂ.ಸಿ. ಮಾರುಕಟ್ಟೆಯಿಂದ ವಿಕೇಂದ್ರಿಕರಿಸಿ ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಸೂಕ್ತವೆಂದು ಮನಗೊಂಡು ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here