ನಶಿಸುತ್ತಿರುವ ಜಾನಪದ ಸಂಸ್ಕೃತಿ ಉಳಿವಿಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ನಿರ್ಧಾರ

0
203

ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಇದೇ ಮಾ.೧೬ ರಂದು ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಮಹಿಳಾ ಘಟಕ ಹಾಗೂ ಉಮೆನ್ಸ ವೇಲ್ ಪೇರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗವುದು ಎಂದು ಉಭಯ ಸಂಘಟನೆಗಳು ಮಹಿಳಾ ಮುಖಂಡರು ತಿಳಿಸಿದ್ದಾರೆ.

ಈ ಕುರಿತು ನಗರದ ಆದಿಶೇಷ ಗುಡಿಯಲ್ಲಿ ಮಾತನಾಡಿದ ಮಹಿಳಾ ಮುಖಂಡರಾದ ಶಾರದಾ ಹಿರೇಮಠಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುನಂದಾ ಹಿರೇಮಠ, ವುಮೆನ್ಸ್ ವೇಲ್ ಪೇರ್ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಪಾಟೀಲ್ ಮತ್ತು ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ, ಶ್ರೀಮತಿ ಶರಣಮ್ಮ ಪಾಟೀಲ್… ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟ ವಾಗಿ ಆಚರಣೆ ಮಾಡಲು ಉದ್ದೇಶ ಹೊಂದಿದ್ದು ಗ್ರಾಮಾಂತರ ಪ್ರದೇಶದಲಿ ಅಳಿವಿಂಚನ ಕಡೆ ಸಾಗಿರುವ. ಜನಪದ ಸಾಂಸ್ಕೃತಿಕ ಹಾಡುಗಳ ಉಳಿವಿಕೆಗಾಗಿ ನಮ್ಮ ಮೊದಲ ಹೆಜ್ಜೆ ಇದುಸುಗ್ಗಿಯ ಹಾಡು‌,
ಜೋಕಮಾರನಪದ,ಗೀಗೀಪದ,
ಜೋಗುಳ ಹಾಡು, ಹಂತಿಪದ,ಬೀಸುಕಲ್ಲಿನ ಪದ,ಗಂಗಮ್ಮ ಗೌರಮ್ಮನ ಪದ,ಕೋಲಾಟದ ಪದ,ಲಾವಣಿ,ಸೋಬಾನ‌ಪದಗಳಂತಹ ಜನಪದ ಸಿರಿವಂತಿಕೆ‌ ಮರೆಯಾಗುತ್ತಲಿದೆ..ಇವುಗಳೆಲ್ಲಾ ಬರೀ ಹಾಡುಗಳಲ್ಲ..ನಮ ವೈಭವದ ಪ್ರತೀಕ ಸಾಂಸ್ಕೃತಿಕ ಸಂಪ್ರದಾಯಿಕ ಪ್ರದರ್ಶನ ದ ಮತ್ತು ಗರತಿಯ ಬದುಕಿನ ಚಿತ್ರಣಗಳು ಇಂತಹ‌ ಹಾಡುಗಳ ಸ್ಪರ್ಧೆ ಯನ್ನು‌ ರೌಡಕುಂದಾ ಗ್ರಾಮದಲ್ಲಿ ಆಯೋಜನೆ‌ ಮಾಡಿ ಸುತ್ತಮುತ್ತಲಿನ ಹಳ್ಳಿಗಳಲಿ ನಮ್ಮ ಸಂಸ್ಥೆ ಇದೇ ೧೩ ರಂದು ನಡೆದಾಡಿ ಗ್ರಾಮೀಣ ಮಹಿಳೆಯರನು ಸಂಪರ್ಕ ಮಾಡಿ ಅವರೊಳಗಿನ ಹಾಡುಗಳಿಗೆ ಜೀವಕಳೆ ತುಂಬುವ ಕೆಲಸ ಮಾಡಲು ಮುಂದಾಗಿದ್ದು ಬಹುತೇಕರು ದಾರವಾಹಿಗಳಲ್ಲಿ ಕಳೆದು ಹೋಗುವ ಕಳವಳದ ಹಾದಿಯಲ್ಲಿ ನಾವಿದ್ದು ,ನಮ್ಮ ನಡೆ ಹಳ್ಳಿಯ ಕಡೆ ಎನ್ನುವ ಸಂಕಲ್ಪ ಮಾಡಿಕೊಳ್ಳಲಾಗಿದೆ ಬಹುತೇಕ ಲಿಖಿತ ಸಾಹಿತ್ಯ ಚರಿತ್ರೆಯಿಂದ ಹೊರಗುಳಿದ. ಸಾವಿರಾರು ಹಾಡುಗಳ ಕಣಜ ಹಳ್ಳಿಗಳು ಮಹಿಳೆಯ ಮತ್ತೋಂದು ಹೆಸರು ಸೂಕ್ಷ್ಮ ಧ್ವನಿಯ ಪ್ರಗತಿಪರ ಸಿಂಚನ ಇಂತಹ ಧ್ವನಿಗಳನ್ನು ಒಟ್ಟುಗೂಡಿಸಿ ವಿನೂತನವಾಗಿ ಅಂತರಾಷ್ಟ್ರೀಯ ಮಹಿಳಾ‌ ದಿನಾಚರಣೆ ಆಚರಣೆ ಮಾಡಲಾಗವುದು ಎಂದು ಉಭಯ ಸಂಘಟನೆಗಳು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ನೀಲಮ್ಮ,ಶ್ರೀ ಮತಿ ವಿಜಯಲಕ್ಷ್ಮಿ, ಶ್ರೀ ಮತಿ ಜಲಜಾಕ್ಷಿ, ಶ್ರೀಮತಿ ದ್ರಾಕ್ಷಯಣಿ,ಶ್ರೀಮತಿ ವೇದಾವತಿ,ಶ್ರೀಮತಿ ಪ್ರತಿಭಾ, ಶ್ರೀಮತಿ ಭಾರತಿ, ಶ್ರೀಮತಿ ರೇಣುಕಾ, ಶ್ರೀಮತಿ ಶ್ಯಾಮಲಾ
ಮುಂತಾದವರು ಇದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here