ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ.

0
145

ಜಗತ್ತಿನಲ್ಲಿ ಅನ್ನದಾನಕ್ಕಿಂತ ಶ್ರೇಷ್ಠದಾ‌ನ ಮತ್ತೊಂದು ಇಲ್ಲಿ, ಹೀಗಾಗಿ ಪ್ರತಿಯೊಬ್ಬರು ದಾನ ಮಾಡುವ ಮೂಲಕ ಮಾನವೀಯತೆಯ ಮೆಟ್ಟಿಲು ಆಗಬೇಕು ಎಂದು ಶ್ರೀರಾಮ ರಂಗಾಪುರಂ ಗ್ರಾಮದ ಸುಬ್ಬು ಸನತ್ ಅವರು ಅಭಿಪ್ರಾಯ ಪಟ್ಟರು.

ಬಳ್ಳಾರಿ ನಗರದ ವಿಮ್ಸ್ ಆವರಣದಲ್ಲಿ ಬಡರೋಗಿ ಕುಟುಂಬದವರಿಗೆ ಅನ್ನಸಂತರ್ಪಣೆ ನೇರವೇರಿದ ನಂತರ ಭಾನುವಾರ ಅವರು ಮಾತನಾಡಿದರು.

ಮನುಷ್ಯ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ದಾನ ಮಾಡುವ ಗುಣ ಹೊಂದಿರಬೇಕು‌. ದಾನ ಮಾಡುವ ಕೈಗಳು ಎಂದಿಗೂ ಇಂಜೆರಿಯಬಾರದು. ಇದರಿಂದ ಮಾನಸಿಕ ನೆಮ್ಮದಿ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ರಂಗಾಪುರಂ ಗ್ರಾಮದ ಹರಿಕಿಶೋರ್, ಅಮರ್, ಮುರಳಿ, ಶಿವಪ್ರಸದ್ ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here