ಆರ್.ಉಬ್ಬಳಗಂಡಿ ಗ್ರಾಮದಲ್ಲಿ 15-18 ವರ್ಷದ ಮಕ್ಕಳ ಕೋವಿಡ್ ಲಸಿಕಾಕರಣಕ್ಕೆ ಜಾಗೃತಿ ಆಂದೋಲನ,

0
428

ತಾಲೂಕಿನ ಆರ್. ಉಬ್ಬಳಗಂಡಿ ಗ್ರಾಮದಲ್ಲಿ ನಾಳೆ ನಡೆಯುವ ಕೋವಿಡ್ ಲಸಿಕಾಕರಣ ಇರುವ ಕಾರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಸ್ನೇಹ ಸಂಸ್ಥೆ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮೆಟ್ರಿಕಿ ವತಿಯಿಂದ ಇಂದು ಜಾಥ ಹಮ್ಮಿಕೊಳ್ಳಲಾಗಿತ್ತು,

ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಲಾಯಿತು ಜಾಥದಲ್ಲಿ 15 ವರ್ಷ ಮೇಲ್ಪಟ್ಟ ಶಾಲೆ ಮಕ್ಕಳು ಹಾಗೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಗೆ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರಲ್ಲಿ ಬಾಕಿ ಇರುವ ಎರಡನೇ ಡೋಸ್, ಇದುವರೆಗೆ ಹಾಕಿಸದೇ ಇರುವವರಿಗೆ ಮೊದಲ ಡೋಸ್, ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಹೆಲ್ತ್‌ ಕೇರ್, ಫ್ರಂಟ್ ಲೈನ್ ಕೋವಿಡ್ ವರ್ಕರ್ ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕುರಿತು ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ಜಾಗೃತಿ ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಸ್ನೇಹ ಸಂಸ್ಥೆಯ ಸಂಚಾಲಕಿ ಸುಲೋಚನ, ಆಶಾ ಕಾರ್ಯಕರ್ತೆ ಈರಮ್ಮ, ರಾಮಕ್ಕ, ಅಂಬೇಡ್ಕರ್ ಸಂಘದ ಅಧ್ಯಕ್ಷ ರಾಕೇಶ್ ಕುಮಾರ್, ಗ್ರಾಮದ ಮಹಿಳೆಯರಾದ ಹುಲಗೆಮ್ಮ, ತಾಯಮ್ಮ, ಸರೋಜಮ್ಮ ಇತರರು ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here