ಸಂಡೂರು ಪುರಸಭೆ ಆವರಣದಲ್ಲಿ ಕುಷ್ಠರೋಗ ಕುರಿತು ಜಾಗೃತಿ ಕಾರ್ಯಕ್ರಮ,

0
657

ಸಂಡೂರು:ಪೆ:೦೯:- ತಾಲೂಕಿನ ಸಂಡೂರು ಪುರಸಭೆ ಕಛೇರಿಯ ಆವರಣದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ, ಮತ್ತು ತಾಲೂಕು ಆರೋಗ್ಯಾಧಿಕಾರಿ ಗಳ ಕಾರ್ಯಲಯ, ಸಂಡೂರು ಇವರ ವತಿಯಿಂದ ವಿಶ್ವ ಕುಷ್ಠರೋಗ ದಿನ ಆಚರಣೆ ಅಂಗವಾಗಿ ಸ್ಪರ್ಶ ಕುಷ್ಠರೋಗ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅನುಷಾ ಅವರು ಕುಷ್ಠರೋಗ ಹರಡುವ ರೀತಿ, ಲಕ್ಷಣಗಳು, ಪರೀಕ್ಷೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು, ಹಾಗೆ ಮೈಮೇಲೆ ಯಾವುದೇ ಮಚ್ಚೆ ಇದ್ದಲ್ಲಿ, ಸ್ಪರ್ಶ ಜ್ಞಾನ ಇರದೆ ಇದ್ದರೆ, ನರಗಳ ಗಡಸುತನ, ಜೋಮು ಹಿಡಿದಿರುವುದು ಕಂಡು ಬಂದಲ್ಲಿ ತಪಾಸಣೆಗೆ ಒಳಗಾಗಲು ಸೂಚಿಸಿದರು, ಮತ್ತು ಕುಷ್ಠರೋಗಿಗಳು ಇದ್ದಲ್ಲಿ ಅವರಿಗೆ ಪೂರ್ಣ ಚಿಕಿತ್ಸೆ ಕೊಡಿಸಬೇಕು, ಸಮಾಜದಲ್ಲಿ ಗೌರವಯುತವಾಗಿ ಬಾಳುವ ಅವಕಾಶ ಮಾಡಿ ಕೊಡಬೇಕು, ಕಳಂಕಿತರಂತೆ ಕಾಣುವುದು ಸರಿಯಲ್ಲ, ಅವರಿಗಾಗಿ ಸರ್ಕಾರದ ಪುನರ್ವಸತಿಯಡಿ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು,ಹಾಗೆ ಪ್ರತಿಜ್ಞೆಯನ್ನು ಬೋಧಿಸಿದರು,

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಿಮಾಮ್ ಸಾಬ್ ಅವರು ಮಾತನಾಡಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಮುತುವರ್ಜಿ ವಹಿಸಬೇಕು, ಸ್ವಚ್ಚತೆ ಕೆಲಸ ಮಾಡುವುದು ಎಷ್ಟು ಮುಖ್ಯವೋ ತಮ್ಮ ತಮ್ಮ ಆರೋಗ್ಯವೂ ಅಷ್ಟೇ ಮುಖ್ಯ, ಆರೋಗ್ಯ ರಕ್ಷಣೆ ಮಾಡಿಕೊಳ್ಳ ಬೇಕು, ಕೈಗಳನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು, ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು,

ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ವೀರೇಶ್ ಸಿಂಧೆ, ಮುಖ್ಯಾಧಿಕಾರಿ ಹಿಮಾಮ್ ಸಾಬ್, ಆರೋಗ್ಯ ನಿರೀಕ್ಷಣಾಧಿಕಾರಿ ಅನುಷಾ, ಶಿವರಂಜನಿ ಆಶಾ ಕಾರ್ಯಕರ್ತೆ ರೇಣುಕಾ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here