ಶ್ರೀ ತಿಮ್ಮಪ್ಪ ದೇವರ ಗುಗ್ಗರಿ ಹಬ್ಬ ಆಚರಣೆ ಮಹೋತ್ಸವ.!!

0
242

ವಿಜಯನಗರ: ಕೂಡ್ಲಿಗಿ ತಾಲ್ಲೂಕಿನ ಹುರಳಿಹಾಳ್ ಗ್ರಾಮದ ಛಲವಾದಿ ಸಮಾಜದ ಮಳಲೇರು ಬುಡಕಟ್ಟು ವಂಶಸ್ಥರ ಶ್ರೀ ತಿಮ್ಮಪ್ಪ ದೇವರ ಗುಗ್ಗರಿ ಹಬ್ಬ ಎರಡು ದಿನಗಳ ಕಾಲ ನೆಡೆದ ತಿಮ್ಮಪ್ಪ ದೇವರ ಉತ್ಸವ ಅದ್ದೂರಿಯಾಗಿ ನೆಡೆಯಿತು. ಮೊದನೆ ದಿನ ತಿಮ್ಮಪ್ಪ ದೇವರ ಮದುಲಿಂಗ ಶಾಸ್ತ್ರ ಹಾಗೂ ಪಟ್ಟದೇವರ ಹೊಳೆ ಪೂಜೆ ಸ್ವಾಮಿ ಮೂರ್ತಿ‌ಮೆರವಣಿಗೆ ನಂತರ ಮದುಲಿಂಗ ಶಾಸ್ತ್ರ ಎರಡನೆಯ ದಿನ ಸ್ವಾಮಿಯ ಅಭಿಷೇಕ ಪಟ್ಟದ ಪೂಜಾರಿ ಮೊದಲ ಪೂಜೆ , ಹಾಗೂ ವಶಂಸ್ಥರ ಮೆತ್ನ ಸಂಗ್ರಹ ಶ್ರೀ ತಿಮ್ಮಪ್ಪ ದೇವರ ಕಳಸ ಪೂಜೆ ಹಾಗೂ ಅಣ್ಣತಮ್ಮಂದಿರ ಕೂಡು ಪೂಜೆ ಮಹಾಮಂಗಳಾರತಿ ದೇವರ ಹರಿಕೆ ಗುಗ್ಗರಿ ಪೂಜೆ ನಂತರ ಸ್ವಾಮಿ ಹರಕೆ ನಿತ್ಯ ಪೂಜೆ ಉತ್ಸವ ನೆಡೆದು ದೇವರ ಪೂಜಾರಿ ವಾಣಿ ಅಂತಿಮವಾಗಿ ಬುಡಕಟ್ಟು ಸಂಪ್ರದಾಯಗಳೊಂದಿ ಸ್ವಾಮಿ ಗುಡಿದುಂಬುವುದು. ಈಗೆ ಹಲವು ಸಂಪ್ರದಾಯ ನಂತರ ಉತ್ಸವಕ್ಕೆ ತೆರೆ ಬೀಳಲಿದೆ ದೇವರ ಗುಗ್ಗರಿ ಹಬ್ಬಕ್ಕೆ ಬಳ್ಳಾರಿ, ದಾವಣಗೆರೆ , ಶಿವಮೊಗ್ಗ, ಚಿತ್ರದುರ್ಗ, ಕಡೆಯಿಂದ ಛಲವಾದಿ ಸಮಾಜದ ಮಳಿಲೆ ವಂಶಸ್ತರು ಭಾಗವಹಿಸುವ ಮೂಲಕ ಅದ್ದೂರು ಉತ್ಸವ ಮಾಡಲಾಯಿತು.

ಈ ವೇಳೆ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಪತ್ರಕರ್ತರ ಧನ್ಯಕುಮಾರ್ ಛಲವಾದಿ ಸಮಾಜ ತಾಲ್ಲೂಕಿನಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವು ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನ ಬಳಸಿಕೊಂಡು ಶೈಕ್ಷಣಿಕ ವಾಗಿ ಮುಂದು ಬರಬೇಕಿದೆ ದೇವಸ್ಥಾನ ಅಬಿವೃದ್ದಿಗೆ ಸರ್ವರೂ ಕೈ ಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟದ ಪೂಜಾರಿ, ಸಮಾಜದ ಅಧ್ಯಕ್ಷರು ಟಿ.ಅಜ್ಜಪ್ಪ, ಮುಖಂಡರಾದ ಹೊನ್ನೂರು ಸ್ವಾಮಿ, ಅಂಜಿನಪ್ಪ, ಶಂಕ್ರಪ್ಪ, ಮಹಾಂತೇಶ್, ಡ್ರೈವರ್ ಅಜ್ಜಣ್ಣ, ಡ್ರೈವರ್ ಹೊನ್ನೂರು ಸ್ವಾಮಿ, ಕುಂಟು ತಿಮ್ಮಜ್ಜರ ತಿಪ್ಪೇಸ್ವಾಮಿ, ಬಸವರಾಜ್, ಪುಟ್ಟಿ ತಿಪ್ಪಜ್ಜರ ಮಹಾಂತೇಶ್, ದೊಡ್ಡೀರಪ್ಪ ತಿಮ್ಮಣ್ಣ, ತೊಗರಿ ತಿಪ್ಪಣ್ಣ. ಮೂಕಜ್ಜರ ತಿಪ್ಪಣ್ಣ, ಸೇರಿದಂತೆ ಸಮಾಜದ ಮಳೆಲೆ ವಂಶಸ್ಥರು ಇದ್ದರು.

-ಮಂಜುನಾಥ್.ಹೆಚ್.

LEAVE A REPLY

Please enter your comment!
Please enter your name here