ಬಾಲಕ ನಾಪತ್ತೆ: ದೂರು ದಾಖಲು

0
60

ಬಳ್ಳಾರಿ,ಮಾ.02 : ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌತಮ್ ನಗರ ನಿವಾಸಿಯಾದ ಬಿ.ಪ್ರಕಾಶ್ ನಾಯ್ಕ್ ಎನ್ನುವ 16 ವರ್ಷದ ಬಾಲಕ ಫೆ.12ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಕೌಲ್‍ಬಜಾರ್‍ನ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸ್ಟೆಲ್‍ನಿಂದ ಶಾಲೆಗೆ ಹೋಗುವುದಾಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಎಂದು ತಂದೆ ಬಿ.ಹನುಮನಾಯ್ಕ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಗುರುತು: ದುಂಡುಮುಖ, ಗೋಧಿ ಮೈಬಣ್ಣ, 4.8 ಅಡಿ ಎತ್ತರ, ಕನ್ನಡ, ಲಂಬಾಣಿ, ಹಿಂದಿ ಬಾಷೆ ಮಾತನಾಡುತ್ತಾನೆ ಮತ್ತು ಆಕಾಶ ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಕಡು ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ ಹಾಗೂ ಬಲಗೈ ಮೇಲೆ ಹೆಚ್.ಎಸ್ ಅಂತಾ ಹಜ್ಜೆ ಗುರುತು ಇರುತ್ತದೆ.

ಕಾಣೆಯಾದ ಬಾಲಕನ ಸುಳಿವು ಸಿಕ್ಕಲ್ಲಿ ಕೌಲ್‍ಜಾರ್ ಪೆÇಲೀಸ್ ಠಾಣೆಯ ದೂ.08392-240731, ಬಳ್ಳಾರಿ ಕಂಟ್ರೋಲ್ ರೂಂ.258100, ಕೌಲ್‍ಬಜಾರ್ ಠಾಣೆಯ ಪಿಐ ಮೊ.9480803047 ಹಾಗೂ ಪಿಎಸ್‍ಐ ಮೊ.9480803084 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here