ಯುವತಿ ಕಾಣೆ ಪ್ರಕರಣ ದಾಖಲು

0
77

ಬಳ್ಳಾರಿ,ಫೆ.03 : ಚೋರನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ.ಮಲ್ಲಾಪುರ ಗ್ರಾಮದ ನಿವಾಸಿಯಾದ ಲಕ್ಷ್ಮಿ ಎಂಬ 16 ವರ್ಷದ ಯುವತಿ ಜ.25 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಯುವತಿ ಜ.25 ರಂದು ರಾತ್ರಿ 9 ಗಂಟೆಗೆ ಮನೆಯಲ್ಲಿ ಮಲಗಿಕೊಂಡಿದ್ದು, ಬೆ.6 ಕ್ಕೆ ಎದ್ದು ನೋಡಿದರೆ ಕಂಡಿರುವುದಿಲ್ಲ ಎಂದು ಅವರ ತಂದೆ ಬಸವರಾಜ ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ಯುವತಿಯ ಚಹರೆ ಗುರುತು: 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕಪ್ಪು ಕೂದಲು, ಕಪ್ಪು ಬಣ್ಣದ ಚೂಡಿ, ಮಿಡಿ ಧರಿಸಿರುತ್ತಾಳೆ ಮತ್ತು ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ,
ಈ ಮೇಲ್ಕಂಡ ಯುವತಿ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ದೂ.08392258100, ಡಿ.ಎಸ್ ಪಿ. ತೋರಣಗಲ್ಲು ಮೊ.9480803010, ಸಿ.ಪಿ. ಐ. ಸಂಡೂರು ಮೊ.9480803036, ಪಿ.ಎಸ್.ಐ ಚೋರನೂರು ಮೊ.9480803063 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here