ವ್ಯಕ್ತಿ ಕಾಣೆ ದೂರು ದಾಖಲು

0
78

ಬಳ್ಳಾರಿ,ಫೆ.24: ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 56 ವರ್ಷದ ಬಾಲರಾಜು ಎನ್ನುವ ವ್ಯಕ್ತಿ ಫೆ.21ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಗಾಂಧಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ಬೆಳಗ್ಗೆ ಕಪ್ಪಗಲ್ ರಸ್ತೆಯಲ್ಲಿರುವ ಬ್ರಹ್ಮಯ್ಯ ಗುಡಿ ಹತ್ತಿರ ಹೋಗುವುದು ಅಲ್ಲೇ ಕುಳಿಕೊಂಡು ಮಧ್ಯಾಹ್ನ 12ಕ್ಕೆ ಮನೆಗೆ ವಾಪಸ್ ಬರುತ್ತಿದ್ದರು ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿ ತೇಜಸ್ವಿನಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು: 5.5 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ತೆಳ್ಳನೇಯ ಮೈಕಟ್ಟು, ಗ್ರೇ ಬಣ್ಣದ ಬಿಳಿ ಲೈನ್‍ಗಳುಳ್ಳ ಶರ್ಟ್, ಬ್ರೌನ್ ಕಲರ್ ಲುಂಗಿ ಧರಿಸಿರುತ್ತಾರೆ ಹಾಗೂ ತೆಲುಗು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ.08392-258100, ಗಾಂಧಿನಗರ ಪೆÇಲೀಸ್ ಠಾಣೆಯ ದೂ.08392-272192, ಗಾಂಧಿನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಮೊ.9480803082 ಹಾಗೂ ಗಾಂಧಿನಗರ ಪಿ.ಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here