ಡಾ.ಗಂಗೂಬಾಯಿ ಹಾನಗಲ್ 109ನೇ ಜನ್ಮ ದಿನಾಚರಣೆ,ಸಂಗೀತ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

0
233

ಹುಬ್ಬಳ್ಳಿ .ಮಾ.05: ಉಣಕಲ್‍ನ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‍ನಲ್ಲಿಂದು ಡಾ.ಗಂಗೂಬಾಯಿ ಹಾನಗಲ್ 109ನೇ ಜನ್ಮ ದಿನಾಚರಣೆ ಹಾಗೂ 4 ವರ್ಷದ ಸಂಗೀತಾಭ್ಯಾಸ ಪೂರ್ಣಗೊಳಿಸಿದ ಮೂರನೇ ಬ್ಯಾಚಿನ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು.
ಸಮಾರಂಭ ಉದ್ಘಾಟಿಸಿದ ಮಾಜಿ ಸಂಸದ ಪ್ರೊ. ಐ.ಜಿ.ಸನದಿ ಮಾತನಾಡಿ, ರಷ್ಯಾ ದೇಶದ ಮಾಸ್ಕೋ ಲೈಬ್ರರಿಯಲ್ಲಿ ಡಾ.ಗಂಗೂಬಾಯಿ ಹಾನಗಲ್ ಅವರ ಭಾವಚಿತ್ರವಿದೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಕೊಡುಗೆಗಳ ವಿವರವನ್ನು ಭಾವಚಿತ್ರದಡಿ ಬರೆಯಲಾಗಿದೆ. ಕರ್ನಾಟಕ, ಭಾರತವಷ್ಟೇ ಅಲ್ಲ ವಿಶ್ವಕಂಡ ಶ್ರೇಷ್ಠ ಗಾಯಕಿ ಡಾ.ಗಂಗೂಬಾಯಿ ಹಾನಗಲ್ ಅವರು, ಸಂಗೀತ ಅಮರವಾದದ್ದು. ಭಾರತದ ಶ್ರೇಷ್ಠ ಆಡಳಿತಗಾರ ಅಕ್ಬರ್ ಆಸ್ಥಾನದಲ್ಲಿ ತಾನ್‍ಸೇನ್ ಉತ್ತಮ ಗಾಯಕರಾಗಿದ್ದರು. ಅಕ್ಬರ್ ತನ್ನ ಬಿಡುವಿನ ಸಮಯದಲ್ಲಿ ಸಂಗೀತ ಆಲಿಸುತ್ತಿದ್ದ. ಮಾನವನಿಗೆ ಲೌಕಿಕ ವಸ್ತುಗಳು ಖುಷಿ ನೀಡುವುದಿಲ್ಲ. ಸಂಗೀತ ಮಾತ್ರ ಖುಷಿ ನೀಡಲು ಸಾಧ್ಯ. ಆತ್ಮಕ್ಕೂ ಶಾಂತಿ ನೀಡಲು ಸಂಗೀತ ಬೇಕು. ಭಾμÉ ಹಾಗೂ ಗಡಿಗಳ ಚೌಕಟ್ಟು ಸಂಗೀತಕ್ಕೆ ಇಲ್ಲ. ಗಂಗೂಭಾಯಿ ಹಾನಗಲ್ ಸಾಧನೆ ದೇಶದ ಗಡಿಗಳನ್ನು ಮೀರಿದ್ದು. ಗುರುಕಲದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುವಂತೆ ಆಗಬೇಕು ಎಂದರು.
ಡಾ.ಗಂಗೂಬಾಯಿ ಹಾನಗಲ್ ಜನ್ಮದಿನಾಚರಣೆ ಅಂಗವಾಗಿ, ಗಂಗೂಬಾಯಿ ಪುತ್ಥಳಿ ಹಾಗೂ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕಲಾಶ್ರೀ ಪ್ರಶಸ್ತಿ ಪುರಸ್ಕøತರಾದ ಪಂಡಿತ ಶ್ರೀಪಾದ ಹೆಗಡೆ, ಬಾಲಚಂದ್ರ ನಾಕೋಡ, ಪುಟ್ಟರಾಜ ಸಮ್ಮಾನ ಪುರಸ್ಕೃತ ಪಂಡಿತ ರಘುನಾಥ ನಾಕೋಡ ಅವರನ್ನು ಸನ್ಮಾನಿಸಲಾಯಿತು. ಅಂತಿಮ 4 ವರ್ಷದ ಸಂಗೀತ ಅಭ್ಯಾಸ ಪೂರ್ಣಗೊಳಿಸಿದ ಅಶ್ವಿನಿ ಭಟ್, ವೈಶಾಲಿ ತೋಟೇಕರ್, ಲಕ್ಷ್ಮೀ ಪಾಟೀಲ, ಸಂಕೇತ್ ಸಪ್ರೇ, ವಿಷ್ಣುಕಾಂತ ಯಾದವ್,ಪ್ರಿಯಂ ಚಥುರ್ವೇಧಿ ಇವರನ್ನು ಸನ್ಮಾಸಿ ಬಿಳ್ಕೋಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಬಸವರಾಜ ಹೆಡಿಕೊಂಡ ಭಜಂತ್ರಿ ಹಾಗೂ ಅವರ ತಂಡ ಶಹನಾಯಿ ಸುಧೆ ಹರಿಸಿದರು. ಗುರುಕುಲದ ವಿದ್ಯಾರ್ಥಿಗಳಿಂದ ಸುಶ್ರಾವ್ಯವಾಗಿ ಹಾಡಿದರು. ಆಡಳಿತಾಧಿಕಾರಿ ಜಿ.ವಿ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪಂಡಿತ ಗಣಪತಿ ಭಟ್ ಹಾಸಣಗಿ, ವಿದೂಷಿ ವಿಜಯಾ ಜಾಧವ ಗಾಟ್ಲೇವಾರ್, ಪಂಡಿತ ಕೈವಲ್ಯಕುಮಾರ ಗುರುವ, ಪಂಡಿತ ಕೇದಾರ ನಾರಾಯಣ ಬೋಡಸ್, ಸಿತಾರ ವಾದಕ ಪಂಡಿತ ಶ್ರೀನಿವಾಸ ಜೋಶಿ, ಸಂಗೀತ ಉಪನ್ಯಾಸಕ ಡಾ.ಶಾಂತಾರಾಮ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here