ಕೃಷಿ ವಿಜ್ಞಾನ ಕೇಂದ್ರ; ವಿಶ್ವ ಆಹಾರ ದಿನಾಚರಣೆ

0
71

ಧಾರವಾಡ: ಅ.17: ಭಾರತೀಯ ಕೃಷಿ ಅನುಸಂಧಾನ ಪರಿಷತ್ತು- ಕೃಷಿ ವಿಜ್ಞಾನ ಕೇಂದ್ರ ಧಾರವಾಡ, ಕೃಷಿ ತಂತ್ರಜ್ಞರ ಸಂಸ್ಥೆ, ಇನಿಷಿಯೇಟಿವ್ ಪಾರ್ಮ ಡೆವಲಪಮೆಂಟ್ ಫಂಡ, ಗಾರ್ಡನ ಸಿಟಿ ಫಾರ್ಮರ್ಸ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 16.10.2022 ರಂದು ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು. ಕೃಷಿ ವಿಶ್ವವಿದ್ಯಾಲಯ ಆವರಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ತಾರಸಿ ತೋಟ ಮಾಹಿತಿಯನ್ನೊಳಗೊಂಡ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. 2022 ನೇ ಸಾಲಿನ ಘೋಷವಾಕ್ಯ “ಯಾರನ್ನೂ ಹಿಂದೆ ಬಿಡಬೇಡಿ” (Leave no one behind)ಆಶಯದಂತೆ ಎಲ್ಲರನ್ನು ಒಳಗೊಳ್ಳುವ ಸಮಗ್ರ ಅಭಿವೃದ್ಧಿ ಕುರಿತಾದ ಚಿಂತನೆಯನ್ನು ನಡೆಸಲಾಯಿತು.

ಬೆಂಗಳೂರಿನ ಗಾರ್ಡನ ಸಿಟಿ ಪಾರ್ಮರ್ಸ ಸಂಸ್ಥೆಯ ಟ್ರಸ್ಟಿಗಳಾದ ಡಾ. ರಾಜೇಂದ್ರ ಹೆಗಡೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನಗರ ಪ್ರದೇಶದ ನಿವಾಸಿಗಳು ತಮ್ಮ ವಾಸಸ್ಥಳದಲ್ಲಿ ಆರೋಗ್ಯಪೂರ್ಣ ಆಹಾರ ಬೆಳೆಯುವ ಹತ್ತು ಹಲವು ಕ್ರಮಗಳನ್ನು ತಿಳಿಸಿದರು. ಶಹರಗಳಲ್ಲಿ ಮನೆ ಆವರಣದಲ್ಲಿ ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಹೂ-ಹಣ್ಣು ತರಕಾರಿಗಳನ್ನು ಬೆಳೆಯುವ ಮಾದರಿಗಳನ್ನು ತೋರಿಸಿಕೊಟ್ಟರು. ಮದ್ಯಮವರ್ಗದ ಜನರು ತಮ್ಮ ಕುಟುಂಬದ ಅವಶ್ಯಕತೆಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಖರೀದಿಸುವ ಸಾಮಥ್ರ್ಯವನ್ನು ಹೊಂದಿದ್ದರು ಕೂಡ ಸ್ವತಃ ಬೆಳೆದುಕೊಳ್ಳುವ ತೃಪ್ತಿ ಬೇರೆಯಾಗಿರುತ್ತದೆ. ಎಂಬ ಅಂಶವನ್ನು ತಿಳಿ ಹೇಳಿದರು. ಪ್ರಸ್ತುತ ಕೃಷಿ ಪರಿಸರದಲ್ಲಿ ಬೆಳೆದ ಆಹಾರ ಉತ್ಪನ್ನಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಆದ್ದರಿಂದ ದೊಡ್ಡ-ದೊಡ್ಡ ನಗರದಲ್ಲಿರುವ ಮತ್ತು ಪಟ್ಟಣದ ನಾಗರೀಕರು ತಮ್ಮ ಮನೆಯ ಸುತ್ತಮುತ್ತ ಲಭ್ಯವಿರುವಷ್ಟು ಜಾಗದಲ್ಲಿಯೇ ಸಸ್ಯಗಳನ್ನು ಬೆಳೆಸಿಕೊಳ್ಳುವ ವಿಶೇಷ ಪದ್ದತಿಗಳು ಜಾರಿಗೆ ಬಂದಿವೆ. ಹುಬ್ಬಳ್ಳಿ-ಧಾರವಾಡಗಳಂತಃ ಮಹಾನಗರಗಳಲ್ಲಿ ಕೂಡ ಜನರು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಇಷ್ಟವಾಗುವ ಗಿಡ-ಮರಗಳನ್ನು ಬೆಳೆಸಿ ಪರಿಸರ ಕಾಳಜಿಯನ್ನು ತೋರಬಹುದಾಗಿದೆ. ಸಸ್ಯದೊಂದಿಗೆ ಒಡನಾಟ ಮಾಡುವ ಜನರ ಮನಸ್ಸು ತಿಳಿಯಾಗಿ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಈ ಕುರಿತಂತೆ ಹುಬ್ಬಳ್ಳಿ-ಧಾರವಾಡದಲ್ಲಿ “ನಮ್ಮ ತೋಟ ನಮ್ಮ ಊಟ” ತತ್ವದನುಸಾರ ನಡೆಯುತ್ತಿರುವ ಕಾರ್ಯಕ್ರಮ ಮತ್ತು ಚಟುವಟಿಕೆಗಳು ಪ್ರೇರಣಾದಾಯಕವಾಗಿವೆ. ಪ್ರತಿಯೊಂದು ಬಡಾವಣೆಯಲ್ಲಿ ಈ ಬಗ್ಗೆ ಅರಿವು ಮೂಡಿಸಿ ನಗರ ಪ್ರದೇಶದ ಹಸರೀಕರಣಕ್ಕೆ ಶ್ರಮಿಸಬೇಕಾಗಿದೆ. ಆ ಮೂಲಕ ಆರೋಗ್ಯಪೂರ್ಣವಾದ ಮತ್ತು ಸುರಕ್ಷಿತವಾದ ಜೀವನವನ್ನು ನಡೆಸಲು ಪ್ರಯತ್ನಿಸಬಹುದಾಗಿದೆ ಎಂದರು. ಕೈತೋಟ, ತಾರಸಿತೋಟ, ಬಾಲ್ಕನಿತೋಟ, ಕುಂಡದಲ್ಲಿ ಸಸ್ಯ ಬೆಳೆಯುವುದು, ಕಂಪೌಂಡ ಸಸ್ಯಗಳು ಮುಂತಾದ ವಿಷಯಗಳನ್ನು ಕುರಿತಾದ ಕಾರ್ಯಾಗಾರವು ಶಿಕ್ಷಣಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಉದ್ಘಾಟಣೆಯನ್ನು ಐ.ಡಿ.ಎಫ್. ಟ್ರಸ್ಟಿ ಎನ್.ಎಮ್.ಪಾಟೀಲ ನೆರೆವೇರಿಸಿದರು. ವಿಜ್ಞಾನಿಗಳಾದ ಡಾ. ಎಸ್.ಎ. ಬಿರಾದಾರ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಆರ್. ಎ. ಬಾಳಿಕಾಯಿ, ಕಾರ್ಯಕ್ರಮದ ಸಂಯೋಜಕರಾದ ಆರ್.ಬಿ. ಹಿರೇಮಠ ಉಪಸ್ಥಿತರಿದ್ದರು. ಚನ್ನಪ್ಪ ಅಂಗಡಿಯವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ವಿ.ಕೆ. ವಿಜ್ಞಾನಿಗಳಾದ ಗೀತಾ ನಿರೂಪಿಸಿದರು, ಅಕ್ಕಮಹಾದೇವಿ ವಂದಿಸಿದರು.

ಇದೇ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ ಸ್ಪರ್ಧೆಯಲ್ಲಿ ಉಧ್ಯಾನ ಪ್ರಶಸ್ತಿ ಪಡೆದ ರಾಘವೇಂದ್ರ ಕೊಣ್ಣೂರ, ಲಲಿತಾ ಪಾಟೀಲ್, ಪಂಡಿತ ಮುಂಜಿ, ರೇಣುಕಾ ಸುರೇಶ ಇವರನ್ನು ಸತ್ಕರಿಸಲಾಯಿತು.

LEAVE A REPLY

Please enter your comment!
Please enter your name here