ವಿಮ್ಸ್‍ನ ಕೋವಿಡ್ ಲಸಿಕಾ ಕೇಂದ್ರದಲ್ಲಿ 12-14 ವರ್ಷದೊಳಗಿನ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ

0
94

ಬಳ್ಳಾರಿ,ಮಾ.24 : ಬಹುನಿರೀಕ್ಷಿತ 12ರಿಂದ 14 ವರ್ಷದೊಳಗಿನ ಮಕ್ಕಳ ಕೋವಿಡ್ ಲಸಿಕಾ ಅಭಿಯಾನ ದೇಶದಾದ್ಯಾಂತ ಪ್ರಾರಂಭವಾಗಿದ್ದು,ವಿಮ್ಸ್ ನ ಕೋವಿಡ್ ಲಸಿಕಾ ಕೇಂದ್ರದಲ್ಲಿ ಸಹ ಗುರುವಾರ ಆರಂಭಿಸಲಾಯಿತು.
ನಗರದ ವಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನಕ್ಕೆ ವಿಮ್ಸ್ ನಿರ್ದೇಶಕರಾದ ಡಾ.ಟಿ ಗಂಗಾಧರ ಗೌಡ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಿಣಿಜೀವಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ, ಕ್ಷಯರೋಗ ಹಾಗೂ ಎದೆರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸುರೇಶ್ ಸಿ.ಎಂ, ಲಸಿಕಾ ಕೇಂದ್ರದ ಪ್ರಭಾರಿ ನೋಡಲ್ ಅಧಿಕಾರಿಗಳಾದ ಡಾ.ಅನೀಸ್ ಉರ್ ರೆಹಮಾನ್ ಸೇರಿದಂತೆ ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 350 ಮಕ್ಕಳಿಗೆ ಲಸಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here