ಶುಶ್ರೂಷಕ ವೃತ್ತಿ ಅತ್ಯಂತ ಗೌರಯುತ:ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ

0
95

ಬಳ್ಳಾರಿ,ಮೇ 09: ಭಾರತದಲ್ಲಿ ತರಬೇತಿ ಪಡೆದ ಶುಶ್ರೂಷಕ ಸಂಘದ ರಾಜ್ಯ ಶಾಖೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶುಶ್ರೂಷಕ ಮಹಾವಿದ್ಯಾಲಯಗಳು ಹಾಗೂ ಶುಶ್ರೂಶಕ ಶಾಲೆಗಳ ಸಹಯೋಗದೊಂದಿಗೆ ಭಾನುವಾರದಂದು ವಲಯ ಮಟ್ಟದ ಶುಶ್ರೂಕರ ಸಮ್ಮೇಳನವನ್ನು ವಿಮ್ಸ್‍ನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಮ್ಸ್‍ನ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಅವರು, ಸಮಾಜದಲ್ಲಿ ಶುಶ್ರೂಷಕ ವೃತ್ತಿ ಅತ್ಯಂತ ಗೌರವಯುತವಾದ ವೃತಿಯಾಗಿದ್ದು,್ತ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಮಹತ್ವ ಮತ್ತು ಅವರು ಇತ್ತೀಚಿನ ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಪಾತ್ರವನ್ನು ಅವರು ವಿವರಿಸಿದರು.
ಭಾರತೀಯ ಶುಶ್ರೂಷಕ ಪರಿಷತ್ತಿನ ಅಧ್ಯಕ್ಷರಾದ ಡಾ.ದಿಲೀಪ್ ಕುಮಾರ್ ಅವರು ಶುಶ್ರೂಕರ ಜವಾಬ್ದಾರಿಗಳು, ಸಮಾಜದಲ್ಲಿ ಅವರ ಪಾತ್ರ, ಶುಶ್ರೂಕರ ಸ್ಥಿತಿಗತಿ, ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು, ಮುಂದುವರೆದ ನರ್ಸಿಂಗ್ ಶಿಕ್ಷಣದ ಮಹತ್ವ ಹಾಗೂ ಸಂಘಟನಾ ಕೌಶಲ್ಯದ ಕುರಿತು ಅಂಕಿ ಅಂಶಗಳ ಸಮೇತ ಸುಧೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ, ವಿಮ್ಸ್ ನಸಿರ್ಂಗ್ ಶಾಲೆಯ ಪ್ರಾಂಶುಪಾಲರಾದ ಜ್ಯೋತಿ, ವಿಮ್ಸ್ ನ ಶುಶ್ರೂಷಕ ಅಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶುಶ್ರೂಷಕ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here