ಸಿಂಧನೂರಿನಲ್ಲಿ ಗಾಯಗೊಂಡ ಕುದುರೆ ಮರಿಗೆ ಮಾನವೀಯತೆ ಮೆರೆದು ಚಿಕಿತ್ಸೆ ಕೊಡಿಸಿದ ವನಸಿರಿ ಫೌಂಡೇಶನ್

0
64

ಸಿಂಧನೂರು ನಗರದಲ್ಲಿ ಚಿಕ್ಕ ಕುದುರೆ ಮರಿಯೊಂದು ಗಾಯಗೊಂಡು ನರಳಾಡುತ್ತಿರುವುದನ್ನು ನೋಡಿದ ಸ್ಥಳೀಯರು ವನಸಿರಿ ಫೌಂಡೇಶನ್ ಗೆ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ವನಸಿರಿ ತಂಡ ಪಶುವೈದ್ಯ ಅಧಿಕಾರಿ ಡಾ.ಶರಣೇಗೌಡ ಪಾಟೀಲ ಅವರಿಗೆ ಕರೆಮಾಡಿ ತಿಳಿಸಿ, ಪಶು ಆಸ್ಪತ್ರೆ ಸಿಬ್ಬಂದಿಗಳನ್ನು ಕರೆಸಿ ಕುದುರೆ ಮರಿಗೆ ಚಿಕಿತ್ಸೆ ಕೊಡಿಸಿದರು.

ಈ ಘಟನೆ ಬಗ್ಗೆ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ವನಸಿರಿ ಫೌಂಡೇಶನ್ ತಂಡ ಪರಿಸರ ಜಾಗೃತಿ ಜೊತೆಗೆ ಪರಿಸರದ ಭಾಗವಾಗಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವುದು ಕೂಡ ಮುಂದಾಗುತ್ತ ಸಮಾಜಸೇವೆಯಲ್ಲಿ ಸಕ್ರಿಯವಾಗಿದೆ. ಇದರಂತೆ ಈಗಾಗಲೇ ಬಹಳಷ್ಟು ಪ್ರಾಣಿಗಳಿಗೆ ಮಾನವೀಯತೆಯ ದೃಷ್ಟಿಯಿಂದ ಚಿಕಿತ್ಸೆ ನೀಡಲಾಗಿದೆ. ಪ್ರತಿಯೊಬ್ಬರೂ ಮೂಕ ಪ್ರಾಣಗಳ ಮೇಲೆ ದಯವಿರಲಿ.ಮೂಕ ಪ್ರಾಣಿಗಳಿಗೆ ಯಾರೂ ಕೂಡ ಕಲ್ಲಿನಿಂದ ಹೊಡೆಯುವುದು, ವಾಹನಗಳಿಂದ ಹೊಡೆಯುವುದು ಮಾಡಬೇಡಿ,ಮೂಕಪ್ರಾಣಿಗಳನ್ನು ಉಳಿಸೋಣ ಪರಿಸರವನ್ನು ಬೆಳಸೋಣ ಎಂದು ಮನವಿ ಮಾಡಿದರು.ಹಾಗೂ ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಕುದುರೆ ಮರಿಗೆ ಚಿಕಿತ್ಸೆ ನೀಡಿದ ಪಶು ವೈದ್ಯರಿಗೆ ವನಸಿರಿ ಫೌಂಡೇಶನ್ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ, ವನಸಿರಿ ಫೌಂಡೇಶನ್ ಸದಸ್ಯ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಹಾಗೂ ಸ್ಥಳೀಯ ಯುವಕರು ಇದ್ದರು.

ವರದಿ: ಅವಿನಾಶ್ ದೇಶಪಾಂಡೆ ✍️

LEAVE A REPLY

Please enter your comment!
Please enter your name here