ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ಕಾರ್ಯಗಾರ.

0
130

ಮಡಿಕೇರಿ ಮಾ.25 :-ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸದಸ್ಯತ್ವ ಪಡೆದ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ಅರಣ್ಯೀಕರಣ ಹಾಗೂ ತೋಟಗಾರಿಕೆ ಸಸಿ ನರ್ಸರಿ ಅಭಿವೃದ್ಧಿಪಡಿಸುವ ತರಬೇತಿ ಕಾರ್ಯಗಾರವು ಶುಕ್ರವಾರ ನಡೆಯಿತು.
ವಿರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ಮಧು ಕುಮಾರ್ ಅವರು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ನರ್ಸರಿಯನ್ನು ನಿರ್ಮಿಸಲು ಸೂಕ್ತವಾದ ಸ್ಥಳ, ಸಸಿಗಳು, ಗಿಡಗಳನ್ನು ಹೇಗೆ ಪೆÇೀಷಣೆ ಮಾಡಬೇಕು, ಬೀಜ ಬಿತ್ತನೆ ವಿಧಾನ, ನಾಟಿ ಮಾಡುವ ವಿಧಾನ, ಮತ್ತು ಅವುಗಳಿಗೆ ಎಷ್ಟು ಪ್ರಮಾಣದಲ್ಲಿ ಗೊಬ್ಬರ, ನೀರನ್ನು ಬಳಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಮನರೇಗಾದ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಸ್ವ ಸಹಾಯ ಸಂಘಗಳಿಗೆ ನರ್ಸರಿ ನಿರ್ಮಿಸಿಕೊಳ್ಳಲು ಅವಕಾಶವಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮನರೇಗಾದ ತಾಂತ್ರಿಕ ಸಂಯೋಜಕರು ನಿರಂಜನ್, ಎಸ್‍ಬಿಎಂ ತಾಲ್ಲೂಕು ಸಂಯೋಜಕರಾದ ಸೂರಜ್, ಎನ್‍ಆರ್‍ಎಲ್‍ಎಂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್, ತಾಂತ್ರಿಕ ಸಹಾಯಕ ಅರಣ್ಯೀಕರಣ ವಿವೇಕ್, ಹಾಗೂ ತಾಲ್ಲೂಕು ಐಇಸಿ ಸಂಯೋಜಕ ನರೇಂದ್ರ ಇದ್ದರು.

LEAVE A REPLY

Please enter your comment!
Please enter your name here