ಸಂತ ಸೇವಾಲಾಲ್ ಅವರ ತತ್ವಗಳು ಇಡೀ ಸಮಾಜಕ್ಕೆ ಪೂರಕ

0
91

ಸಂತ ಸೇವಾಲಾಲ್ ಅವರ ತತ್ವಗಳು ಇಡೀ ಸಮಾಜಕ್ಕೆ ಪೂರಕವಾಗಿದೆ ಎಂದು ಗ್ರಾಮ ಪಂಚಾಯಿ ಅಧ್ಯಕ್ಷ ಎನ್ ಕೃಷ್ಣ ಹೇಳಿದರು.
ಗುಡೆಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಪ್ಪರ್ಚನೆ ಸಲ್ಲಿಸಿ ಅವರು ಮಾತನಾಡಿದರು

ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದ್ದಾರೆ.ಬಂಜಾರ ಸಮುದಾಯದವರು ಶ್ರಮಜೀವಿಗಳಾಗಿದ್ದು, ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ವಿಶಿಷ್ಟ ಶೈಲಿಯ ನೃತ್ಯ, ಭಾಷೆ ವಿಭಿನ್ನವಾಗಿದ್ದು ಸಂಸ್ಕøತಿಯ ಜೊತೆಗೆ ಬಂಜಾರ ಸಮುದಾಯ ಸಾಗುತ್ತಿದೆ ಎಂದರು. ಸಮುದಾಯ ಪ್ರತಿ ಹಬ್ಬಗಳು ವಿಶೇಷ ಆಚರಣೆಯಿಂದ ಕೂಡಿದ್ದು, ಉತ್ಸಾಹದೊಂದಿಗೆ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ .ಎಂ.ಮಹಾಂತೇಶಯ್ಯ ಮಾತನಾಡಿ ಸಮಾಜದಲ್ಲಿ ಮೂಢನಂಬಿಕೆ, ಕಟ್ಟುಪಾಡುಗಳನ್ನು ಹೋಗಲಾಡಿಸಿ, ಸಮಾಜದ ಒಗ್ಗಟ್ಟು ಮತ್ತು ಏಳಿಗೆಗಾಗಿ ಸಂತ ಸೇವಾಲಾಲ್ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.ಸಂತ ಸೇವಾಲಾಲ್ ಅವರು ವಿಶಿಷ್ಟವಾದ ಸಂಸ್ಕøತಿಯ ಅಸ್ಮಿತೆಯನ್ನು ಸಾರಿ ಬಂಜಾರ ಸಮುದಾಯವನ್ನು ಒಗ್ಗೂಡುವಿಕೆಗೆ ಕಾರಣರಾಗಿದ್ದಾರೆ. ಸೇವಾಲಾಲ್ ಅವರ ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೊಣ ಎಂದರು.

ಕಾರ್ಯಕ್ರಮದಲ್ಲಿ ,ಗ್ರಾಮ ಪಂಚಾಯಿತಿ ಮಾಜಿ ಉಪಧ್ಯಾಕ್ಷ ಯಲಕಲ ಬೋರಯ್ಯ,ಕಾಂಗ್ರೇಸ್ ಮುಖಂಡ ಪೇಯಿಂಟ್ ತಿಪ್ಪಣ್ಣ, ಗುತ್ತಿಗೆದಾರ ಅಂಬರೀಶ ನಾಯಕ್, ಗ್ರಾ.ಪಂ. ಸದಸ್ಯ ಮಂಜುನಾಥ, ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ತಾಲ್ಲೂಕು ಅಧ್ಯಕ್ಷ ಮುರುಳಿಕೃಷ್ಣ, ಗ್ರಾಮ ಪಂಚಾಯಿತಿ ಸಅಧ್ಯಕ್ಷ.ಗಳಾದ ಬೀಮನಾಯಕ್ ,ಶಿವಕುಮಾರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ವರದಿ:-ನಂದೀಶ್ ನಾಯಕ

LEAVE A REPLY

Please enter your comment!
Please enter your name here