ಕೋಟ್ಪಾ ಕಾಯ್ದೆ ಉಲ್ಲಂಘನೆ: 05ಪ್ರಕರಣಗಳು ದಾಖಲು
ಸಿರಗುಪ್ಪ:ವಾಣಿಜ್ಯ ಸಂಸ್ಥೆಗಳ ನೋಂದಣಿ/ನವೀಕರಣ ಪರಿಶೀಲನೆ

0
94

ಬಳ್ಳಾರಿ(ಸಿರಗುಪ್ಪ), ಮಾ.30 : ಕಾರ್ಮಿಕ ಇಲಾಖೆ,ನಗರಸಭೆ,ತಾಲೂಕು ಆಡಳಿತ,ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಅಧಿಕಾರಿಗಳು ಸಿರಗುಪ್ಪ ಪಟ್ಟಣದ ವಿವಿಧ ವಾಣಿಜ್ಯ ಮಳಿಗೆಗಳಿ(ಅಂಗಡಿ)ಗೆ ಮಂಗಳವಾರ ತೆರಳಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಶ ಸಂಸ್ಥೆಗಳ ಕಾಯ್ಥೆ 1961 ಮತ್ತು ನಿಯಮಗಳು 1963 ರಡಿ ಅಂಗಡಿ/ವಾಣಿಜ್ಯ ಸಂಸ್ಥೆಗಳ ನೋಂದಣಿ ಹಾಗೂ ನವೀಕರಣ ಮಾಡಿಸಿರುವ ಬಗ್ಗೆ ಪರಿಶೀಲಿಸಿದರು.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ರ ಅಡಿಯಲ್ಲಿ ಉಲ್ಲಂಘನೆ ಮಾಡಿದ ಅಂಗಡಿ & ಉದ್ದಿಮೆಗಳನ್ನು ಪರಿಶೀಲನೆ ನಡೆಸಿದರು ಮತ್ತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಕೋಟ್ಟಾಕಾಯ್ದೆ 2003 ರ ಸೆಕ್ಷನ್ -4ರ ಉಲ್ಲಂಘನೆಯ ಅಡಿಯಲ್ಲಿ ವಿವಿಧ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ 5 ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು ಮತ್ತು
ಮಾಲೀಕರಿಗೆ ಕರಪತ್ರಗಳನ್ನು ಮತ್ತು ಸ್ಟೀಕರ್ಸ ಅಂಟಿಸುವ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.
ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಮತ್ತು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಸಿ.ಎನ್.ರಾಜೇಶ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಬಳ್ಳಾರಿ ಕ್ಷೇತ್ರಾಧಿಕಾರಿಗಳಾದ ಪಿ.ಎಂ.ಈಶ್ವರಯ್ಯ,ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಪ್ರಸನ್ನಕುಮಾರ, ನಗರಸಭೆ ಸಿಬ್ಬಂದಿ ಮತ್ತು ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳಾದ ಅರುಣ ಮತ್ತು ಸಜನಿ ಇದ್ದರು.

LEAVE A REPLY

Please enter your comment!
Please enter your name here