ತಾಲೂಕು ಮಟ್ಟದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

0
72

ಮಡಿಕೇರಿ ಮೇ.05 :-ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ 8 ದಿನಗಳ ಕಾಲ ಮೂರ್ನಾಡುವಿನಲ್ಲಿ ನಡೆದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭವನ್ನು ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳ ತಾಯಂದಿರ ಪಾದ ಪೂಜೆ ಮಾಡುವುದರೊಂದಿಗೆ ವಿನೂತನವಾಗಿ ಹಮ್ಮಿಕೊಳ್ಳಲಾಯಿತು.

ಮೇ, 08 ರಂದು ತಾಯಂದಿರ ದಿನಾಚರಣೆ ಇರುವುದರಿಂದ ಡಾ.ಮಹಾಬಲೇಶ್ವರ ಗಾವಂಕರ್ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಾದಪೂಜೆ ಕಾರ್ಯಕ್ರಮವು ನೆರವೇರಿತು, ಮಕ್ಕಳು ವಿವಿಧ ರೀತಿಯ ನೃತ್ಯಗಳೊಂದಿಗೆ ಸಬಿಕರನ್ನು ಮನೋರಂಜನೆ ಗೊಳಿಸಿದರು. 8 ದಿನದಲ್ಲಿ ತಯಾರಿಸಿದ ಕ್ರಾಪ್ಟ್, ಚಿತ್ರಕಲೆ, ಕಸದಿಂದ ರಸ ತಯಾರಿಸಿದ ವಸ್ತುಗಳ ಪ್ರದರ್ಶನ ಕೂಡ ನೆರವೇರಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಯನ್ನು ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಾತ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ, ಪಿಡಿಒ ಚಂದ್ರಮೌಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಂಧತಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಕುಮಾರಸ್ವಾಮಿ, ಮಹೇಶ್ ಕುಮಾರ್, ಕುಮಾರಿ ವರ್ಷಿಣಿ, ಮೇಲ್ವಿಚಾರಕಿ ಸವಿತ ಕೀರ್ತನ್, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಚೈತ್ರ, ಭವ್ಯ, ಪ್ರಮೀಳ, ಭವಾನಿ, ಉಮಾವತಿ, ಸಹಾಯಕಿಯರಾದ ಜಯಂತಿ, ಪ್ರೇಮ, ಸರಸ್ವತಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here