ಕೊಟ್ಟೂರು: ಅಭಿವೃದ್ಧಿ ಎಂಟು ವರ್ಷ ಕಳೆದರೂ ಶಾಸಕರು ಅಭಿವೃದ್ಧಿಯತ್ತ ಮುಖ ಮಾಡುತ್ತಿಲ್ಲ: ಕಾಮಗಾರಿಗಳು ಕಳಪೆ- ಆರೋಪ..!!

0
426

ಕೊಟ್ಟೂರು:ಜೂನ್:02:-
ಪಟ್ಟಣದಲ್ಲಿ ಪ್ರಮುಖರಸ್ತೆಗಳಂದರೆ ಬಸ್ಟ್ಯಾಂಡ್ ರಸ್ತೆ ಹಾಗೂ ಗ್ರಾಮಗಳಿಗೆ ಓಡಾಡುವ ರಸ್ತೆ ಎಂದರೆ ಸಿರಿಬಿ ಗಂಗಾನಹಳ್ಳಿ ರಸ್ತೆ ಇನ್ನು ಕೆಲ ಪಟ್ಟಣದಲ್ಲಿ ಪ್ರತಿ ವಾರ್ಡ್ಗಳಲ್ಲಿ ಅಭಿವೃದ್ಧಿನೇ ಮಾಯವಾಗಿದೆ.

ಐತಿಹಾಸಿಕ ಸ್ಥಳ ಎಂದರೆ ಕೊಟ್ಟೂರು ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ತರ ಸ್ಥಾನ ಹೊಂದಿರುವ ಈ ಕೊಟ್ಟೂರು ತಾಲೂಕಲ್ಲಿ ಅಭಿವೃದ್ಧಿ ಪಥವೇ ಮಾಯವಾಗಿದೆ.
ಸರ್ಕಾರ ಕೋಟಿ ಕೋಟಿ ಗಟ್ಟಲೆ ಪ್ರತಿ ತಾಲೂಕು ಗ್ರಾಮಗಳಿಗೆ ಅಭಿವೃದ್ಧಿಪಡಿಸಲು ಅನುದಾನವನ್ನು ನೀಡುತ್ತಾರೆ ಆದರೆ ಇಲ್ಲಿನ ಶಾಸಕರು ಅಭಿವೃದ್ಧಿಗಳನ್ನು ಕೇಳಿದರೆ ಸುಳ್ಳು ಭಾಷಣ ಬಿಗಿದು ಹೋಗುತ್ತಾರೆ.

ಈ ತಾಲೂಕಲ್ಲಿ ಕುಡಿಯಲು ನೀರಿಲ್ಲ ಶುದ್ಧ ನೀರಿನ ಘಟಕ ಇಲ್ಲ ಹೆಸರಿಗೆ ಮಾತ್ರ ಖಾಲಿ ಡಬ್ಬಿಯಾಗೆ ಉಳಿದಿದೆ ಪ್ರತಿ ವಾರ್ಡ್ಗಳಲ್ಲಿ ಸುಂದರವಾದ ರಸ್ತೆಯಾಗಲಿ ಬೀದಿ ದೀಪವಾಗಲಿ ಸ್ವಚ್ಛತೆಯಾಗಲಿ ಎಲ್ಲವೂ ಮರೀಚಿಕೆಯಾಗಿದೆ ಸಾರ್ವಜನಿಕರು ಶಾಸಕರು ಬಂದಾಗ ಅಭಿವೃದ್ಧಿಗಳನ್ನು ಕೇಳಿದರೆ ಸರ್ಕಾರವು ಹಣ ನೀಡುತ್ತಿಲ್ಲ
ಎಂದು ಜನರಿಗೆ ಸುಳ್ಳು ಹೇಳಿ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಮಾಡುತ್ತಿಲ್ಲ ಹೀಗಾದರೆ ಸಾರ್ವಜನಿಕರ ಸಮಸ್ಯೆಗಳನ್ನು ಸರಿಪಡಿಸುವವರು ಯಾರು?

ಪಟ್ಟಣದ ತುಂಬೆಲ್ಲ 24/7 ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆಗೊಳಿಸಿ ಪಟ್ಟಣದ ತುಂಬೆಲ್ಲ ತಗ್ಗು ಗುಂಡಿಗಳಂತೆ ಆಗಿದ್ದು ಇಂದಿಗೂ ಸರಿಪಡಿಸಲು ಯಾವೊಬ್ಬ ಅಧಿಕಾರಿ ಸಹ ಇತ್ತ ತಲೆ ಹಾಕುತ್ತಿಲ್ಲ. ಟೆಂಡರ್ ದಾರರಿಗೆ ಎಂಟು ಕೇಸ್ ದಾಖಲೆಯಾಗಿದ್ದು ಅವರ ಮೇಲೆ ಸರಿಯಾದ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಕಣ್ಮುಚ್ಚಿ ಕುಳಿತ ಮೇಲಾಧಿಕಾರಿಗಳು.

ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರವಾಗಿದ್ದು ಇಂದಿಗೂ ಸರ್ಕಾರದ ಡಿಗ್ರಿ ಕಾಲೇಜ್ ಇಲ್ಲ. ತಾಲೂಕು ಆಗಿ ನಾಲ್ಕು ವರ್ಷ ಕಳೆದರೂ ಇಲಾಖೆಗಳು ಇಲ್ಲ ಇವತ್ತಿಗೂ ರೈತರು ಬೇರೊಂದು ಕೆಲಸಕ್ಕೆ ಪಕ್ಕದ ಕೂಡ್ಲಿಗಿ ಕಚೇರಿ ಕೆಲಸಗಳಿಗೆ ತೆರಳು ಬೇಕಾಗುತ್ತದೆ ಹೀಗಾದರೆ ತಾಲೂಕ ಅಭಿವೃದ್ಧಿ ಯಾವಾಗ ಎಂದು ಸಾರ್ವಜನಿಕರು ಮಾದೇಶ್ ಪ್ರಕಾಶ್ . ಶಿವರಾಜ್. ಪ್ರಶ್ನೆಯಾಗಿ ಉಳಿದಿದೆ.

ಕೊಟ್ಟೂರು ಪಟ್ಟಣದಲ್ಲಿ ಹಾಗೂ ತಾಲೂಕಿನ ಸಂಬಂಧ ಪಟ್ಟ ಎಂಎಲ್ಎ ಅನುದಾನದ ಅಡಿಯಲ್ಲಿ ಕೆಲವೊಂದು ಕಾಮಗಾರಿಗಳ ಕಳಪೆಯಾಗಿದೆ ಎಂದು ಪಿ.ಚಂದ್ರಶೇಖರ ಅರೂಪಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here