ಕರ್ನಾಟಕ ಬಾಲವಿಕಾಸ ಅಕಾಡೆಮಿ ಜು.2 ರಂದು ಬೆಳಗಾವಿ ವಿಭಾಗ ಮಟ್ಟದಲ್ಲಿ ವಿಶೇಷ ಸಾಧನೆಗೈದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಅಧ್ಯಕ್ಷ ಈರಣ್ಣ ಜಡಿ

0
83

ಧಾರವಾಡ : ಜು.01: ಕಳೆದ ನಾಲ್ಕು ವರ್ಷಗಳಿಂದ ಬಾಲ ವಿಕಾಸ ಅಕಾಡಮಿಯು ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಆಧ್ಯತೆ ನೀಡಿ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ, ಬರುವ ಜುಲೈ 2 ರಂದು ನಗರದ ಆಲೂರು ವೆಂಕಟರಾವ ಸಾಂಸ್ಕøತಿಕ ಸಭಾಭವನದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ ಹೇಳಿದರು.

ಅವರು ಇಂದು ಬೆಳಿಗ್ಗೆ ಬಾಲ ವಿಕಾಸ ಅಕಾಡೆಮಿ ಸಭಾಭವನದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದರು.

ಪ್ರಸ್ತುತ ಅಕಾಡಮಿಯು ರಾಜ್ಯದಲ್ಲಿರುವ ಒಟ್ಟು 34 ಶೈಕ್ಷಣಿಕ ಜಿಲ್ಕೆಗಳಲ್ಲಿಯೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಮೊದಲ ಐದು ಮಕ್ಕಳಿಗೆ 5 ಸಾವಿರ ನಗದು ಬಹುಮಾನ ನೀಡಿ, ಗೌರವಿಸಲಾಗುವುದು.

ಬೆಳಗಾವಿ ವಿಭಾಗದ ಮಟ್ಟದ 9 ಶೈಕ್ಷಣಿಕ ಜಿಲ್ಲೆಗಳಿಂದ ಈಗ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ. ಉಳಿದ ಮೂರು ವಿಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಅಕಾಡೆಮಿಯಿಂದ ವಿವಿಧೋದ್ದೇಶ ಸಭಾಭವನ ಕಟದಟಡ ಕಾಮಗಾರಿಯು ಕೊನೆಯ ಹಂತದಲ್ಲಿದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಅದನ್ಬು ನಾಡಿನ ಮಕ್ಕಳ ಚಟುವಟಿಕೆ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಬಾಲ ವಿಕಾಸ ಅಕಾಡಮಿ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಹಲವಾರು ಕಾರ್ಯಕ್ರಮಗಳ ಕ್ರಯಾಯೋಜನೆ ರೂಪಿಸಲಾಗಿದೆ. ಅಕಾಡೆಮಿಯಿಂದ ಕಥಾಕಮ್ಮಟ,ವಿಭಾಗ ಮಟ್ಟದ ಮಕ್ಕಳ ಹಬ್ಬ, ದಕ್ಷಿಣ ರಾಜ್ಯಗಳ ಮಕ್ಕಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ರಾಜ್ಯದ ಎಲ್ಲ ವಿಭಾಗಗಳಲ್ಲಿ ಮಕ್ಕಳ ಪ್ರತಿಭೋತ್ಸವ, ಮಕ್ಕಳ ಹಬ್ಬ, ಪಾಲೋತ್ಸವ, ಗಡಿಭಾಗದ ಮಕ್ಕಳಿಗೆ ಪ್ರತಿಭೋತ್ಸವ, ಮಕ್ಕಳ ರಂಗೋತ್ಸವ, ಕ್ರೀಡೋತ್ಸವ, ಕಾವ್ಯೊತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿಲು ಯೋಜನೆ ಸಿದ್ದಗೊಳಿಸಲಾಗಿದೆ. ಬಾಲ ಮಂದಿರ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜನೆ ಮತ್ತು ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಪ್ರತಿಭೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಈರಣ್ಣ ಜಡಿ ಅವರು ತಿಳಿಸಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಒಂದು ಸಂಸ್ಥೆಯಾಗಿ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಕಾಡೆಮಿಯಿಂದ 0-18 ವರ್ಷದ ಒಳಗಿನ ಮಕ್ಕಳಿಗೆ ವಿವಿಧ ಬಗೆಯ ವೈವಿಧ್ಯಮಯ ಕಾರ್ಯಕ್ರಮವನ್ನು, ಚಟುವಟಿಕೆಗಳನ್ನು ಅನುದಾನ ಹಂಚಿಕೆ ಮತ್ತು ಆಧಾರದ ಮೇಲೆ ಕ್ರಿಯಾ ಯೋಜನೆಯನ್ನು ರೂಪಿಸಿ ಸರ್ಕಾರದಿಂದ ಅನುಮೋದನೆಯನ್ನು ಪಡೆದು ಅನುμÁ್ಠನಗೊಳಿಸಲಾಗುತ್ತಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಕ್ರಿಯಯೋಜನೆ ಅನುಸಾರ ಮೊದಲಿನಿಂದಲೂ ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗರಿಷ್ಠ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಮರಸ್ಕಾರವನ್ನು ಮಾಡುತ್ತಾ ಬರಲಾಗುತ್ತಿದೆ ಎಂದರು.

 ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಗೌರವಿಸುವುದರಿಂದ ಆ ಮಗುವು ಓದಿದ ಶಾಲೆ, ಕಲಿಸಿದ ಗುರುಗಳು  ಮಾತೆಯರು, ತಂದೆ-ತಾಯಿಯವರಿಗೆ ಆ ಗ್ರಾಮಕ್ಕೆ ಕೀರ್ತಿಗೆ ಒಳಗಾಗುತ್ತಾರೆ. ಇದರಿಂದ ಇತರ ಮಕ್ಕಳು ಸಹ ಪ್ರಭಾವಿತರಾಗಿ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರಣಾದಾಯಕವಾಗುತ್ತದೆ. ಕೋವಿಡ್-19 ವೈರಾಣುವಿನ ಹರಡುವಿಕೆಯ ಭಯದಲ್ಲಿಯೂ ಸಹ ಮಕ್ಕಳು ಎದೆಗುಂದದೆ ಶಿಕ್ಷಕರು ಮತ್ತು ಗುರುಮಾತೆಯರು ಹೇಳಿದ ಮಾರ್ಗದಲ್ಲಿ ನಡೆದು ಉತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಎನ್ನುವುದು ಪ್ರಶಂಸನೀಯ ಎಂದರು.

ಕೋವಿಡ್ -19 ವೈರಾಣುವಿನ ಹರಡುವಿಕೆಯ ಭಯದಲ್ಲಿಯೂ ಸಹ ಸರ್ಕಾರ ಮಕ್ಕಳ ಪರೀಕ್ಷೆಗೆ ಹಾಗೂ ಆರೋಗಕ್ಕೆ ತೊಂದರೆ ಆಗದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ವಿಶ್ವಾಸ ಮೂಡಿಸುವಂತಹ ಕ್ರಮಗಳನ್ನು ಅನುಸರಿಸಿದ್ದರ ಪರಿಣಾಮವಾಗಿ ಇಂದು ನಾವು ಉತ್ತಮವಾದ ಫಲಿತಾಂಶವನ್ನು ಕಾಣಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವರು ಅಧಿಕಾರಿಗಳು, ಶಿಕ್ಷಕರು, ಗುರುಮಾತೆಯರು ಇತರ ಎಲ್ಲ ಶಾಲಾ ಸಿಬ್ಬಂದಿಯವರು ಅಭಿನಂದನಾರ್ಹರು ಎಂದು ಅಧ್ಯಕ್ಷ ಈರಣ್ಣ ಜಡಿ ಹೇಳಿದರು.

ಬಾಲ ವಿಕಾಸ ಅಕಾಡಮಿ ಜಂಟಿ ನಿರ್ದೇಶಕಿ ಭಾರತಿ ಶಟ್ಟರ ಅವರು ಸ್ವಾಗತಿಸಿ, ಗೋಷ್ಠಿ ನಿರ್ವಹಿಸಿದರು

ಮಕ್ಕಳ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜುಲೈ 2 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕುಲಾಪುರೋಹಿತ ಆಲೂರು ವೆಂಕಟರಾವ ಭವನದಲ್ಲಿ ಬೆಳಗಾವಿ ವಿಭಾಗ ಮಟ್ಟದ ಮಕ್ಕಳ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ ಅವರ ಉಪಸ್ಥಿತಿಯಲ್ಲಿ ,ರಾಜ್ಯದ ಗಣಿ,ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಕಾರ್ಯಕ್ರಮ ಉದ್ಘಾಟಿಸುವರು.

ಕೈಮಗ್ಗ, ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಶೇಷ ಅತಿಥಿಗಳಾಗಿ ಆಗಮಿಸುವರು. ಶಾಸಕ ಜಗಧೀಶ ಶೆಟ್ಟರ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು.

ಜಿಲ್ಲೆಯ ಶಾಸಕರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು.

LEAVE A REPLY

Please enter your comment!
Please enter your name here