ಆಮ್ ಆದ್ಮಿ ಕೊಟ್ಟೂರು ತಾಲೂಕು ಕಚೇರಿ ಉದ್ಘಾಟನೆ

0
604

“ಬದಲಾವಣೆಗಾಗಿ ನಿಮ್ಮ ವೋಟ್ ಆಮ್ ಆದ್ಮಿಪಕ್ಷಕ್ಕೆ “
ಕೊಟ್ಟೂರು:ಸೆ:೧೫:-ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿ ಉದ್ಘಾಟನೆಯು ಸೆಪ್ಟೆಂಬರ್ 15 ಗುರುವಾರದಂದು ಬೆಳಗ್ಗೆ ರೇಣುಕ ಟಾಕಿಸ್ ಎದುರುಗಡೆ ಆಮ್ ಆದ್ಮಿ ಪಕ್ಷ ಕಚೇರಿ ಉದ್ಘಾಟನೆಯನ್ನು ವಿಜಯನಗರ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜೆ.ಎನ್ . ಕಾಳಿದಾಸರವರು ಉದ್ಘಾಟನೆಯನ್ನು ನೆರವೇರಿಸಿ.

ನಂತರ ಮಾತನಾಡಿದರು ನಮ್ಮ ಆಮ್ ಆದ್ಮಿ ಪಕ್ಷವು ದೇಶದ ಇತಿಹಾಸದಲ್ಲಿ ತನ್ನದೇ ಆದ ಸಿದ್ಧಾಂತಗಳ ಮೂಲಕ ಅಧಿಕಾರವನ್ನು ಪಡೆದುಕೊಂಡಿದೆ ಈಗಾಗಲೇ ಡೆಲ್ಲಿ ಹಾಗೂ ಪಂಜಾಬಿನಲ್ಲಿ ನಮ್ಮ ಆಮ್ ಆದ್ಮಿ ಪಕ್ಷ ಸರಕಾರ ಹೊಂದಿದೆ ಆಮ್ ಆದ್ಮಿ ಪಕ್ಷವು ದೆಹಲಿ ಉತ್ತಮ ಆಡಳಿತವನ್ನು ನೀಡುತ್ತಿದೆ , ಮಾದರಿ ಉಚಿತ ಶಿಕ್ಷಣ ಸರ್ವರಿಗೂ ಒಂದರಿಂದ 12ನೇ ತರಗತಿವರೆಗೂ ಉಚಿತ ಶಿಕ್ಷಣದ ವ್ಯವಸ್ಥೆ, ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಆರೋಗ್ಯದ ವ್ಯವಸ್ಥೆ , ಮನೆ ಬಾಗಿಲಿಗೆ ಲಂಚವಿಲ್ಲದ ಅಲೆದಾಟವಿಲ್ಲದ ನೂರಕ್ಕೂ ಹೆಚ್ಚು ಸೇವೆಗಳು, ಮಹಿಳೆಯರಿಗೆ ರಾಜ್ಯದ್ಯಂತ ಉಚಿತ ಬಸ್ ಪಾಸ್ ,ಪ್ರತಿಯೊಂದು ಮನೆಗೂ 200 ಯೂನಿಟ್ ವರೆಗೆ ಫ್ರೀ ಕರೆಂಟ್ ಯಾವುದೇ ಕಮಿಷನ್ ಇಲ್ಲದಿರುವ ಆಡಳಿತ ಹಾಗೂ ಉಚಿತ ಕುಡಿಯುವ ನೀರು ಯೋಜನೆಗಳು ಮತ್ತು ಗ್ರಾಮೀಣ ಭಾಗಕ್ಕೂ ವಿಸ್ತರಿಸುವಂತೆ ಗುಣಮಟ್ಟದ ರಸ್ತೆ ನೀಡಿದ್ದೇವೆ .ನಮ್ಮ ಆಮ್ ಆದ್ಮಿ ಪಕ್ಷವು ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ನೀವು ನೋಡಬಹುದು ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬರುತ್ತದೆ. ನಮ್ಮ ಆಮ್ ಆದ್ಮಿ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಬದಲಾವಣೆಗಾಗಿ ನಿಮ್ಮ ವೋಟು ಎಂದು ಹೇಳಿದರು

ನಂತರ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸ್ಪರ್ಧೆ ಆಕಾಂಕ್ಷೆ ಆಗಿರುವ ಡಾ. ವಿ .ಎಚ್ . ಹನುಮಂತಪ್ಪ ನಿವೃತ್ತಿ ಪಶುವೈದ್ಯರು ಇವರು ಸ್ವಂತ ಊರು ಜಗಳೂರು ತಾಲೂಕಿನ ಗಡಿಭಾಗವಾಗಿರುವ ಯರಲಕಟ್ಟೆ ಗ್ರಾಮದ ನಿವಾಸಿಯಾಗಿದ್ದೇನೆ. ನಂತರ ಮಾತನಾಡಿದರು ನಾನು ಕೊಟ್ಟೂರು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಾದ (ಕೊಟ್ಟೂರು ,ಕೂಡ್ಲಿಗಿ ,ಚಿಕ್ಕಜೋಗಹಳ್ಳಿ ,ಇಟಿಗಿ ಒಳಗೊಂಡಂತೆ) ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸೇವೆಯನ್ನು ಮಾಡಿದ್ದೇನೆ ಈಗ ಮುಂಬರುವ ವಿಧಾನಸಭಾ ಚುನಾವಣೆ ಆಮ್ ಆದ್ಮಿ ಪಕ್ಷದ ಸ್ಪರ್ಧೆ ಆಕಾಂಕ್ಷಿಯಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ . ನಮ್ಮ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಅಂದರೆ ಜೆ.ಸಿ.ಪಿ ಎಂದು ಕರೆಯುತ್ತಾರೆ ಈ ಮೂರು ಪಕ್ಷದ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ ಇಂಥ ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ ಲಂಚ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ನಮಗೊಂದು ಅವಕಾಶ ಕೊಡಿ ಬದಲಾವಣೆಗಾಗಿ ನಿಮ್ಮ ಮತ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಹಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜೆಎನ್ ಕಾಳಿದಾಸ ,ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾದ ರಾಜೇಶ್ ,ಹಾಗೂ ಕೂಡ್ಲಿಗಿ ಕ್ಷೇತ್ರದ ಅಧ್ಯಕ್ಷರಾದ ನಾರಿ ಶ್ರೀನಿವಾಸ್, ಹರಪನಹಳ್ಳಿ ಕ್ಷೇತ್ರದ ಹೊಸಕೋಟೆ ನಾಗರಾಜ್, ಮರಮನಹಳ್ಳಿ ರೇವಣ್ಣ, ಆಲಬೂರು ಹಾಗೂ ಪಕ್ಷದ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here