ಪೂಜಾರಹಳ್ಳಿ ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಎ.ಐ.ಕೆ.ಎಸ್ ಪ್ರತಿಭಟನೆ

0
290

ವಿಜಯನಗರ:ಜುಲೈ:02:- ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಇಂದು ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ವತಿಯಿಂದ ಪೂಜಾರಹಳ್ಳಿ ಕೆರೆ ಹೋರಾಟದ ಸಮಿತಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಇಂದು ಪೂಜಾರಹಳ್ಳಿ ಕೆರೆಯಿಂದ ಗ್ರಾಮ ಪಂಚಾಯತಿಯ ವರೆಗೂ ಬೃಹತ್ ಪ್ರತಿಭಟನೆ ಮೂಲಕ ಮನವಿ ನೀಡಲಾಯಿತು. ಪೂಜಾರಹಳ್ಳಿ ಕೆರೆಯ ಸರ್ವೆ ನಂಬರ್ 257 ಹಾಗೂ ಇತರೆ ಸರ್ವೆನಂಬರಿನ ಪೂಜಾರಹಳ್ಳಿ ಕೆರೆ ಭೂಮಿಯನ್ನು ಒತ್ತುವರಿ ಮಾಡಿದ್ದು, ಒತ್ತುವರಿಯನ್ನುಕೂಡಲೇ ತೆರವುಗೊಳಿಸಲು ಹಾಗೂ ಗ್ರಾಮ ಪಂಚಾಯತಿ ಮೂಲಕ ಕೆರೆ ಜಾಗವನ್ನು ಸರ್ಕಾರ ಹಾಗೂ ಗ್ರಾಮ ಪಂಚಾಯತಿ ದಾಖಲಾತಿಗಳಲ್ಲಿ ಸೇರಿಸುವಂತೆ ಪಂಚಾಯತಿಯಿಂದ ಜಿಲ್ಲಾ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರಕ್ಕೆ ಸರ್ವ ಸದಸ್ಯರು ನಿರ್ಣಯ ಮಾಡಿಕೊಳ್ಳಲು ಪೂಜಾರಹಳ್ಳಿ ಗ್ರಾಮ ಕನ್ನಿ ಬೋರಯ್ಯನ ಹಟ್ಟಿ ಪೂಜಾರಹಳ್ಳಿ ತಂಡ ಹಾಗೂ ಇನ್ನಿತರ ಗ್ರಾಮಗಳ ರೈತರು ಗ್ರಾಮ ಪಂಚಾಯಿತಿಯ ಶಿಲ್ಪ ಬಸವರಾಜ್, ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾರಾಯಣಪ್ಪ ಮನವಿ ಸ್ವೀಕರಿಸಿದರು. ಮುಖಂಡರು ಹೆಚ್ಚು ವೀರಣ್ಣ ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ, ಮಹೇಶ್ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯಿತಿ, ಯು ಪೆನ್ನಪ್ಪ ಖಜಾಂಚಿ ಸಿಪಿಐ ಪಕ್ಷ ಕೂಡ್ಲಿಗಿ, ಎಕೆಡಿ ಮಾರೇಶ್, ದಾಸಣ್ಣ, ಗೆದ್ದಯ್ಯ, ಅಂಜನಿ, ಮಂಜುನಾಥ, ಓಬಳೇಶ, ಚಿತ್ತಣ್ಣ, ಹೇಮಣ್ಣ, ತಿಪ್ಪೇಸ್ವಾಮಿ, ಬಾಲರಾಜ್, ಭೀಮೇಶ್, ರಮೇಶ್, ಗೌಡ, ಗೂಳಿ ಬಸವರಾಜ, ವಕೀಲ ಬೋರಯ್ಯ, ಗೋಪಿ, ತಿಪ್ಪಕ್ಕ, ಗಿರಿಜಮ್ಮ, ಗಾಮಕ್ಕ, ಪ್ರೇಮ, ಓಬಮ್ಮ, ಸೇರಿದಂತೆ ಇತರರು ಇದ್ದರು.

ವರದಿ:ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here