ಕಲಾವಿದರಿಗೆ ಮಾಸಾಶನ ಸೌಲಭ್ಯ ಕಲ್ಪಿಸಿ: ಹಿರೇಮಠ ಪ್ರಶಾಂತ ಸಾಗರ ಶ್ರೀ

0
105

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀ ಹಿರೇಮಠ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಪಂ.ಪಂಚಾಕ್ಷರಿ ಗವಾಯಿ ಮತ್ತು ಪಂ.ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ ತಿಮ್ಮನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಲೆಯನ್ನು ಜೀವಂತವಾಗಿರಿಸುವ ಕಲಾವಿದರಿಗೆ ಹೆಚ್ಚಿನ ಮನ್ನಣೆ ನೀಡಿ ಕಾರ್ಯಕ್ರಮಗಳಲ್ಲಿ ಅವಕಾಶ, ಹಿರಿಯ ಕಲಾವಿದರಿಗೆ ಮಾಸಾಶನ ಸೇರಿ ಇತರೆ ಹೆಚ್ಚಿನ ಸೌಲಭ್ಯ ಕಲ್ಪಿಸಲಿ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ತಿಳಿಸಿದರು. ಕಲೆಯನ್ನು ಪ್ರದರ್ಶಿಸುತ್ತ ಪ್ರೇಕ್ಷಕರಿಗೆ ಮನರಂಜನೆ ನೀಡುವ ಅನೇಕ ಕಲಾವಿದರ ಬದುಕು ತುಂಬಾ ಕಷ್ಟಗಳಲ್ಲಿದೆ. ಅದನ್ನು ತೋರ್ಪಡಿಸದೇ ಕಲಾ ಶ್ರೀಮಂತಿಕೆ ಉಳಿಸಿ, ಬೆಳೆಸುವುದೇ ಗುರಿಯಾಗಿಸಿ ಅದರಲ್ಲೇ ಸಂತೋಷ ಪಡುತ್ತಾರೆ. ಇಂಥ ಕಲಾವಿದರಿಗೆ ಸರ್ಕಾರ, ಸಂಘ ಸಸ್ಥೆಗಳು, ಮಠ-ಮಾನ್ಯಗಳು ವೇದಿಕೆಗಳನ್ನು ಅಣಿಗೊಳಿಸಿ ಅವಕಾಶಗಳನ್ನು ನೀಡಿದರೆ ಅವರ ಜೀವನಕ್ಕೆ ಆಸರೆಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಮಾತನಾಡಿ, ಎಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಅವಕಾಶವನ್ನು ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸೋಬಾನೆ, ಕೋಲಾಟ, ಜಾನಪದ ಸೇರಿ ಅನೇಕ ಕಲೆಗಳನ್ನು ಉಸಿರಾಡುತ್ತಾ ಜೀವನ ಸವೆಸಿದ ಹಿರಿಯ ಕಲಾವಿದರನ್ನು ಗುರುತಿಸಿ ಮಾಸಾಶನ ಮಂಜೂರು ಮಾಡುವ ಅಗತ್ಯವಿದೆ ಎಂದು ತಿಳಿಸಿದರು. ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಡಿ.ಒ.ಮುರಾರ್ಜಿ ತಂಡದಿಂದ ಸುಗಮ ಸಂಗೀತ, ರಾಮಸಾಗರಹಟ್ಟಿ ಗುರುಶಂಕರಪ್ಪ ತತ್ವಪದ, ಕೂಡ್ಲಿಗಿ ಎಸ್.ಅಂಜಿನಮ್ಮ ರಂಗಗೀತೆಗಳು, ಸಿರಗುಪ್ಪ ಅಂಬಣ್ಣ ದಳವಾಯಿ, ಡಾ.ತಿಮ್ಮಣ್ಣ ಭೀಮರಾಯ ಶಾಸ್ತಿಯ ಸಂಗೀತ, ನಾಗರಹುಣಿಸಿ ದುರುಗೇಶ್ ವಚನ ಸಂಗೀತ, ಚಿತ್ರದುರ್ಗ ತಂಡದಿದ ಗೊರವರ ಕುಣಿತ, ಟಿ.ಕಲ್ಲಹಳ್ಳಿ ಮಹಿಳಾ ತಂಡದಿದ ಸೋಬಾನೆ ಪದ, ಚೌಡಾಪುರ ವೀರಣ್ಣ ಶಹನಾಯಿ ವಾದನ, ಸುಮಾ, ತಿಮ್ಮನಹಳ್ಳಿ ನಿಂಗರಾಜ ಭಾವಗೀತೆ, ಚಿತ್ರದುರ್ಗದ ಎಂ.ಕೆ.ಹರೀಶ್ ಅವರ ಜಾನಪದ ಗಾಯನ ಸೇರಿ ಹಿರೇಮಠ ಶಾಲಾ ವಿದ್ಯಾರ್ಥಿಗಳ ಜಾನಪದ ನೃತ್ಯ ವೈಭವ ಜನಮನ ಸೂರೆಗೊಂಡಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನ ಮಂಜೂರಾತಿ ಸಮಿತಿ ಸದಸ್ಯ ಚಿನ್ನೋಬನಹಳ್ಳಿ ಡಿ.ಒ ಮುರಾರ್ಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭೀಮಣ್ಣ ಗಜಾಪುರ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಸಂಸ್ಥಾಪಕ ತಿಮ್ಮನಹಳ್ಳಿ ನಿಂಗರಾಜ್, ಕೃಷಿ ಸಮಾಜದ ತಾಲೂಕು ಅಧ್ಯಕ್ಷ ಬಣವಿಕಲ್ಲು ಎರಿಸ್ವಾಮಿ, ಕನ್ನಡ ವಿವಿ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ.ತಿಮ್ಮಣ್ಣ ಭೀಮರಾಯ, ಪತ್ರಕರ್ತರಾದ ಹೂಡೇಂ ಕೃಷ್ಣಮೂರ್ತಿ, ಸಂಜೆವಾಣಿ ನಾಗರಾಜ, ಕಲಾವಿದ ಕ್ಯಾಷಿಯೋ ಕರಿಯಪ್ಪ, ಉಪನ್ಯಾಸಕ ಸ್ವಾಮಿ ವಿವೇಕಾನಂದ ಇತರರಿದ್ದರು.

ವರದಿ:-ಮಂಜುನಾಥ್, ಹೆಚ್

LEAVE A REPLY

Please enter your comment!
Please enter your name here