ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

0
111

ಶಿವಮೊಗ್ಗ ಏಪ್ರಿಲ್ 30 : ಬೀದರ್ ನ ನಂದಿನಗರದಲ್ಲಿ ದಿನಾಂಕ 28.04.2022 ರಂದು ಏರ್ಪಡಿಸಲಾಗಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡು.
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗವು ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಪದವಿ ಮಟ್ಟದಲ್ಲಿ ಮಾತ್ರವಲ್ಲದೆ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಐಸಿಎಆರ್-ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದಾರೆ. ಇದು ವೆಟರಿನರಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜಾಗಿದೆ.
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡಾ. ಸತೀಶ್.ಜಿ.ಎಮ್., ಸಹಾಯಕ ಪ್ರಾಧ್ಯಾಪಕರು ಇವರು ಶೈಕ್ಷಣಿಕ ವರ್ಷ 2019-20 ನೇ ಸಾಲಿನಲ್ಲಿ ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ಬಿ.ವಿ.ಎಸ್‍ಸಿ. ಮತ್ತು ಎ.ಎಚ್ ಸ್ನಾತಕ ಪದವಿ: ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಕನಿಕ ಯಾದವ್ ಇವರಿಗೆ 13, ಲಿಖಿತ ಬಿ.ಎನ್. ಇವರಿಗೆ 02, ಉರ್ಮಿಳ, ಎಸ್. ಇವರಿಗೆ 01, ರಜತ್ ಎಂ.ಎಸ್., ಇವರಿಗೆ 06 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಎಂ.ವಿ.ಎಸ್‍ಸಿ. ಸ್ನಾತಕೋತ್ತರ ಪದವಿ: ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ವಿಶ್ವನಾಥ ಯು., ಪ್ರಾಣಿ ಆಹಾರ ಶಾಸ್ತ್ರ ಇವರಿಗೆ 01, ಪ್ರಶಾಂತ.ಎಮ್.ಕೆ. ಪಶುವೈದ್ಯಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ 02, ರೇವಣ ಸಿದ್ಧಪ್ಪ ಯಡವಾಡ್ ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ಇವರಿಗೆ 02, ಮಹಮದ್ ಖಲೀಉಲ್ಲ ಪಶುವೈದ್ಯಕೀಯ ಜೀವರಸಾಯನಶಾಸ್ತ್ರ ಇವರಿಗೆ 02, ಪವಿತ್ರ.ಬಿ.ಎಸ್. ಪಶುವೈದ್ಯಕೀಯ ಸೂಕ್ಷ್ಮಜೀವಾಣು ಶಾಸ್ತ್ರ ಇವರಿಗೆ 03, ಮಣಿಕಂಠ.ಸಿ.ಎಲ್. ಪಶುವೈದ್ಯಕೀಯ ಔಷಧ ಮತ್ತು ವಿಷಶಾಸ್ತ್ರ ಇವರಿಗೆ 02, ಯಲ್ಲಪ್ಪ.ಕೆ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಸ್ತರಣಾ ಶಿಕ್ಷಣ ಇವರಿಗೆ 01, ಸುನೀಲ್ ಕುಮಾರ್.ಬಿ.ಎಸ್. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ 01 ಹಾಗೂ ಕಿರಣ್.ಹೆಚ್.ಜೆ. ಪಶುವೈದ್ಯಕೀಯ ರೋಗಶಾಸ್ತ್ರ ಇವರಿಗೆ 01 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು ಎಂದು ಕಾಲೇಜಿನ ಡೀನ್ ಡಾ. ಪ್ರಕಾಶ್ ನಡೂರ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here