ಬಸಿರಿ ಮರಕ್ಕೆ ಮರು ಜೀವ ನೀಡಿದ ವನಸಿರಿ ತಂಡ.

0
164

ರಾಯಚೂರು:ಜೂನ್:29:-ಗೋನವಾರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಸುಮಾರು 10-15 ವರ್ಷದ ಬಸಿರಿ ಮರವೊಂದು ಗಾಳಿಮಳೆಗೆ ಸಿಲುಕಿ ನೆಲಕ್ಕುರಳಿತ್ತು . ಅದನ್ನು ಕಂಡ ನಮ್ಮ ವನಸಿರಿ ಫೌಂಡೇಶನ್ ರುವಾರಿಗಳಾದ ಅಮರೇಗೌಡ ಮಲ್ಲಾಪೂರ ಅವರು ಶಿಕ್ಷಕರ ಜೊತೆಗೆ ಮರ ಬೀಳಲು ಕಾರಣವನ್ನು ತಿಳಿದು ಚರ್ಚಿಸಿ ಅದಕ್ಕೆ ಮತ್ತೆ ಮರುಜೀವ ನೀಡಲು ನಮ್ಮ ವನಸಿರಿ ತಂಡ ಮುಂದಾಯಿತು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರು ಶಿಕ್ಷಕರಿಗೆ,ಮಕ್ಕಳಿಗೆ, ಊರಿನ ಯುವಕರಿಗೆ ಈ ಮರಕ್ಕೆ ಬೇರುಗಳಿರುವುದರಿಂದ ಮತ್ತೆ ಅದು ಚಿಗುರುತ್ತದೆ,ಅದರಿಂದ ನಮಗೆ ಹೆಚ್ಚಿನ ಶುದ್ಧ ಗಾಳಿ ದೊರೆಯುತ್ತದೆ,ಮತ್ತು ಬೃಹತ್ತಾಗಿ ಬೆಳೆಯುತ್ತದೆ.ಬೇಸಿಗೆಕಾಲದಲಿ ಸುಮಾರು 40-50 ಜನರು ಕುಳಿತು ಕೂಡ ನೆರಳು ಪಡೆದು ವಿಶ್ರಾಂತಿ ಪಡೆಯಬಹುದು ಆದ್ದರಿಂದ ಈ ಮರಕ್ಕೆ ನಾವುಗಳೆಲ್ಲರೂ ಮರುಜೀವ ನೀಡೋಣ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವನಸಿರಿ ತಂಡದ ಸದಸ್ಯರು,ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು ಊರಿನ ಯುವಕರು ಅತ್ಯಂತ ಉತ್ಸಾಹಿಗಳಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಮರುಜನ್ಮ ನೀಡಿ ಹರ್ಷೋದ್ಗಾರ ಮೊಳಗಿದರು.

ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ತುಂಬಾ ಸಂತೋಷಗೊಂಡು ವನಸಿರಿ ತಂಡದ ಸದಸ್ಯರುಗಳಿಗೆ ದನ್ಯವಾದಗಳನ್ನು ತಿಳಿಸಿ ಬೀಳ್ಕೊಡಲಾಯಿತು.

ವರದಿ: ಅವಿನಾಶ್ ದೇಶಪಾಂಡೆ ✍️

LEAVE A REPLY

Please enter your comment!
Please enter your name here