ಕೊಟ್ಟೂರು ಸುತ್ತ ಮುತ್ತ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಸರ್ಕಾರಿ ಪದವಿ ಕಾಲೇಜ್ ಸ್ಥಾಪನೆಗೆ ಸ್ಥಳ ಪರಿಶೀಲನೆ

0
449

ಕೊಟ್ಟೂರು:ಜುಲೈ:11:-ತಾಲೂಕಿನ ಸುತ್ತ ಮುತ್ತ ವಿದ್ಯಾರ್ಥಿಗಳಿಗೆ ಅತ್ಯವಶ್ಯಕತೆ ಇರುವ ಸರ್ಕಾರಿ ಡಿಗ್ರಿ ಕಾಲೇಜ್ ಸ್ಥಾಪನೆಗೆ ಡಾ,ಶ್ರೀದೇವಿ ನೇತೃತ್ವದಲ್ಲಿ 06 ಜನ ಸದಸ್ಯರೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು ವೀಕ್ಷಣೆ ಮಾಡಲಾಯಿತು.

ಸರ್ಕಾರ ಪದವಿ ಕಾಲೇಜ್ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನ ಆದೇಶದ ಮೇರೆಗೆ ಡಾ,ಶ್ರೀದೇವಿ ಮತ್ತು ಇವರ ತಂಡದ ನೇತೃತ್ವದಲ್ಲಿ ತಾಲೂಕಿನ ಸುತ್ತ ಮುತ್ತಲಿನ ಕಾಲೇಜ್ ಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಶೀಲಿಸಿ ಈ ಭಾಗದ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಒಟ್ಟು 10 ಪದವಿ ಪೂರ್ವ ಕಾಲೇಜ್ ಇದ್ದು ಇದರಲ್ಲಿ ಸರ್ಕಾರಿ ಡಿಗ್ರಿ ಕಾಲೇಜ್ ಇಲ್ಲದೆ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲ ಉಂಟಾಗಿದೆ ಇದರಿಂದಾಗಿ ಅತೀ ಶೀಘ್ರದಲ್ಲೇ ಕಾಲೇಜು ಪ್ರಾರಂಭಿಸುವುದಾಗಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ,ಶ್ರೀದೇವಿಯವರು ತಾಲೂಕಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಹಾಗೂ ಮಾಧ್ಯಮ ವರ್ಗದವರಿಗೆ ಎಲ್ಲ ಕೆಳ ವರ್ಗದವರಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯುವ ಉದ್ದೇಶದ ಸಲುವಾಗಿ ಸರ್ಕಾರಿ ಡಿಗ್ರಿ ಕಾಲೇಜ್ ಅವಶ್ಯಕತೆ ತುಂಬಾನೇ ಮುಖ್ಯ ವಾಗಿದೆ ಇದರಿಂದಾಗಿ ಇಲ್ಲಿನ ವಾಸ್ತವ ಸ್ಥಿತಿ ಕುರಿತು ವರದಿ ನೀಡಿ ಮುಂದಿನ ವಾರದಲ್ಲೆ ಇದರ ಕೆಲಸ ಮಾಡಲು ಅನುಮತಿ ಪಡೆಯಲಾಗುವುದು ಹಾಗೂ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡದಲ್ಲೇ ಪ್ರಾರಂಭ ಮಾಡುವುದಾಗಿ ಹೇಳಲಾಯಿತು ಹಾಗೂ ಡಿಸೆಂಬರ್ ತಿಂಗಳ ಕೊನೆಯ ಹಂತದಲ್ಲಿ ತರಗತಿಗಳು ಪ್ರಾರಂಭಿಸುವುದಾಗಿ ತಿಳಿಸಿದರು

ಕಾಲೇಜು ಶಿಕ್ಷಣ ಇಲಾಖೆ ನೇಮಿಸಿರುವ ಸಮಿತಿ ಸದಸ್ಯರುಗಳಾಗಿರುವ ರಾಮಾಂಜನೇಯ ಕೆ.ಎನ್, ಬಿ.ಶೋಭ ರಾಣಿ, ಡಾ.ಶಾಂತಲ, ಡಾ.ಜ್ಞಾನಪ್ರಸೂನಾಂಬ, ಗುರುಬಸಪ್ಪ ಸಣ್ಣಕ್ಕಿ, ಶಿವಾನಂದ ರೆಡ್ಡಿ, ಸ್ಥಳೀಯರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಸೋಮಶೇಖರ್, ಹರಪನಹಳ್ಳಿ ಕೊಟ್ರೇಶ್, ಮೈದೂರು ಶಶಿಧರ, ಚಿತ್ರರಂಜನ್,ಮುನೆಗೌಡ , ಶಿವಕುಮಾರ್ ಮತ್ತಿತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here