ಜನಸಂಖ್ಯಾ ಸ್ಥಿರತೆ ಕಾಪಾಡದಿದ್ದರೆ ನಾನಾ ಸಮಸ್ಯೆಗಳಿಗೆ ರಹದಾರಿ ಮಾಡಿಕೊಟ್ಟಂತೆ; ಮುಖ್ಯ ಶಿಕ್ಷಕಿ ಸುಮನಾ.

0
729

ಸಂಡೂರು:ಜುಲೈ :11:-ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಆಯೋಜಿಸಲಾದ “ವಿಶ್ವ ಜನಸಂಖ್ಯಾ ದಿನಾಚರಣೆ-2022” ರ ಜಾಗೃತಿ ಜಾಥಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮನಾ ಅವರು ಚಾಲನೆ ನೀಡಿ ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡಲೇ ಬೇಕು, ಇಲ್ಲದಿದ್ದರೆ ಬಡತನ, ನಿರುದ್ಯೋಗ, ಆಹಾರ ,ವಸತಿ ಹೀಗೆ ಹಲವಾರು ಸಮಸ್ಯೆಗಳು ತಲೆದೋರಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾತನಾಡಿ ಜನಸಂಖ್ಯಾ ಸ್ಥಿರೀಕರಣ ಕಾಪಾಡಬೇಕಿದೆ ಪ್ರತಿ ಕುಟುಂಬಕ್ಕೆ ಗಂಡಾಗಲಿ ಹೆಣ್ಣಾಗಲಿ ಎರಡು ಮಕ್ಕಳ ಇರಬೇಕು, ಪುರಷ ಪ್ರಧಾನ ಸಮಾಜವೆಂಬ ಹೇಳಿಕೆಯಿಂದ ಗಂಡು ಮಗು ಜನಿಸುವವರೆಗೆ ಕಾದು ಕುಳಿತ ಎಷ್ಟೋ ಕುಟುಂಬಕ್ಕೆ ಐದಾರು ಹೆಣ್ಣು ಮಕ್ಕಳಾಗಿವೆ, ಹಲವಾರು ಮೌಢ್ಯತೆಗಳಿಗೆ ಮಣೆ ಹಾಕಿ ಹೆಚ್ಚೆಚ್ಚು ಮಕ್ಕಳನ್ನು ಪಡೆದರೆ ಕುಟುಂಬ ಪೋಷಣೆ ಹೊರೆಯಾಗಿ ಪರಿಣಮಿಸಲಿದೆ, ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಪಾಡಲು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ಐ.ಯು.ಡಿ, ಮಾಲಾ-ಎನ್, ಛಾಯ,ಇ-ಪಿಲ್ಸ್, ಅಂತರ ಚುಚ್ಚುಮದ್ದು, ಕಾಂಡೋಮ್ ಗಳು ಇವೆ, ಸರಿಯಾದ ಸಮಯದಲ್ಲಿ ಉಪಯೋಗಿಸಿ ಮಕ್ಕಳ ಅಂತರ ಕಾಪಾಡಿಕೊಂಡು ಎರಡು ಮಕ್ಕಳ ನಂತರ ಶಾಶ್ವತ ವಿಧಾನಗಳಾದ ಲ್ಯಾಪ್ರೋಸ್ಕೋಪಿಕ್ ಅಥವಾ ಟ್ಯುಬೆಕ್ಟಮಿ ಅಥವಾ ನೋಸ್ಕಾಲ್ ಪೆಲ್ ವ್ಯಾಸೆಕ್ಟಮಿ ಮಾಡಿಸಿಕೊಂಡಾಗ ಕುಟುಂಬ ನಿಯಂತ್ರಣ ಸಾಧ್ಯವಿದೆ,ಇಲಾಖೆ ಉಚಿತ ಶಿಬಿರಗಳನ್ನು ಆಯೋಜಿಸುತ್ತದೆ ಫಲಾನುಭವಿಗಳು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 1881 ರಲ್ಲಿ ಕುಟುಂಬ ಕಲ್ಯಾಣ ಕಾನ್ಸೆಪ್ಟ್ ಕೊಟ್ಟಿದ್ದೆ ಹೆಮ್ಮೆಯ ನಮ್ಮ ಮೈಸೂರು ರಾಜ್ಯ, ನಂತರ ಜಗತ್ತು 5 ಬಿಲಿಯನ್ ದಾಟಿದಾಗ 1989 ರಿಂದ ಜನಸಂಖ್ಯೆ ನಿಯಂತ್ರಣ ಮಾಡಲು “ವಿಶ್ವ ಜನಸಂಖ್ಯಾ ದಿನಾಚರಣೆ”ಯನ್ನು ಜುಲೈ 11 ರಂದು ಆಚರಿಸಿ ಜನಸಂಖ್ಯಾ ಹೊರೆಯಿಂದ ಉಂಟಾಗುವ ತೊಂದರೆಗಳನ್ನು ಅರ್ಥಮಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಜಗತ್ತು ಈಗ ಅಂದಾಜು 8 ಬಿಲಿಯನ್ ಗೆ ಸನಿಹದಲ್ಲಿದೆ, ಹೆಚ್ಚು ಜನಸಂಖ್ಯೆ ಹೊಂದಿರುವ ಹತ್ತು ದೇಶಗಳಲ್ಲಿ ಎರಡನೇ ದೇಶ ನಮ್ಮ ಭಾರತ,140 ಕೋಟಿ ಜನಸಂಖ್ಯೆ ಹೊಂದಿದೆ, ನೆರೆಯ ಚೀನಾ 145 ಕೋಟಿ ಹೊಂದಿ ಮೊದಲ ಸ್ಥಾನದಲ್ಲಿದೆ, ಈ ವರ್ಷ “ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ,ಉನ್ನತಿಯ ಹೊಸ ಅಧ್ಯಾಯ ಬರೆಯೋಣ” ಎಂಬ ಘೋಷವಾಕ್ಯದಡಿ ಕಾರ್ಯ ನಿರ್ವಹಿಸಿ ಜನಸಂಖ್ಯಾ ಸ್ಥಿರತೆ ಕಾಪಾಡೋಣ ಎಂದು ತಿಳಿಸಿದರು, ಜನಸಂಖ್ಯಾ ಸ್ಥೀರಿಕರಣ ಜಾಗೃತಿ ಕುರಿತು ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು,

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುಮನಾ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಾಲೆಯ ಸಹಶಿಕ್ಷಕರಾದ ಎಮ್.ಗಂಗಾಧರ್,ಮಂಜುಳಾ,ರೂಪಾ,ನೇತ್ರಾವತಿ, ಆರ್.ಕೆ.ಎಸ್.ಕೆ ಕೌನ್ಸಲರ್ ಪ್ರಶಾಂತ್, ಸಿ.ಹೆಚ್.ಓ ಉಮಾ,ಆಶಾ ಕಾರ್ಯಕರ್ತೆ ಬಸಮ್ಮ, ನೀಲಮ್ಮ, ಸುಶೀಲಮ್ಮ,ತಿಮ್ಮಕ್ಕ,ಪಕ್ಕೀರಮ್ಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here