ಮಲ್ಲಾಪುರ ಸರಕಾರಿ ಶಾಲೆಗೆ ಹೊಸ ಕಳೆ ತಂದ ಸಂಡೇ ಫಾರ್ ಸೋಶಿಯಲ್ ವರ್ಕ್ ತಂಡ

0
218

ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಸಂಡೇ ಪಾರ್ ಸೋಷಿಯಲ್‌ ವರ್ಕ (ನಮ್ಮ ನಡೆ ಸ್ವಚ್ಛತೆ ಕಡೆ) ನ 53ನೇ ಸೇವಾ ಕಾರ್ಯ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಅಭಿನಂದನ್ ಶಿಕ್ಷಣ ಸಂಸ್ಥೆ (ರಿ), ಸಹನಾ ಹಸಿರು ಸಿಂಧನೂರು, ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಗೋಮರ್ಶಿ,ಸ್ನೇಹಸಿರಿ ಟ್ರಸ್ಟ್ ಕಲ್ಮಂಗಿ, ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ (ರಿ) ಸಿಂಧನೂರು, ಸಿದ್ಧಗುರು ಫೌಂಡೇಶನ್ ಬೆಂಗಳೂರು, ಭೂ ಸಂರಕ್ಷಣಾ ವೇದಿಕೆ ಸಿಂಧನೂರು, ದೃಷ್ಟಿ ದೀಪ ಕಲಾಸೇವಾ ಟ್ರಸ್ಟ್ ಸಿಂಧನೂರು, ವನಸಿರಿ ಫೌಂಡೇಶನ್ ಸಿಂಧನೂರು, ವಿನಾಯಕ ಗೆಳೆಯರ ಬಳಗ ಮಲ್ಲಾಪೂರ ಸಂಸ್ಥೆಗಳ ಸಹಯೋಗದೊಂದಿಗೆ ಶಾಲೆಯ ಸ್ವಚ್ಚತೆ ಮತ್ತು ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ, LBK ಕಾಲೇಜಿನ ಪ್ರಚಾರ್ಯರಾದ ಶ್ರೀ ಪರುಶುರಾಮ ಅವರು ಮಾತನಾಡಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರ ತಂಡ ಇಡೀ ರಾಜ್ಯದೆಲ್ಲಡೆ ಸಸಿಗಳನ್ನು ನೆಟ್ಟು ಪೋಷಿಸುವ ಜೊತೆಗೆ ಜನರಲ್ಲಿ ಪರಿಸರ ಜಾಗೃತಿ ಊಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ತುಂಬಾ ಶ್ಲಾಘನೀಯ, ಜೊತೆಗೆ ಇಂದು ಈ ಸಂಡೇ ಪಾರ್ ಸೋಷಿಯಲ್ ವರ್ಕನ ಪ್ರತಿ ರವಿವಾರ ಅಭಿನಂದನ ಶಿಕ್ಷಣ ಸಂಸ್ಥೆ ಮಸ್ಕಿ ಹಾಗೂ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡು ನಮ್ಮ ನಡೆ ಸ್ವಚ್ಛತೆ ಕಡೆ ಎಂಬ ಗುರಿಯನ್ನಿಟ್ಟು ಗ್ರಾಮದ ಸರಕಾರಿ ಶಾಲೆಗಳ ಸ್ವಚ್ಛತೆಗೆ ಹೆಚ್ಚಿನ ಆಸಕ್ತಿವಹಿಸಿ ಮಕ್ಕಳಿಗೆ ಸ್ವಚ್ಛವಾದ ವಾತಾವರಣ ಮತ್ತು ಶುದ್ಧವಾದ ಗಾಳಿಯನ್ನು ಸೇವಿಸಿ ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿವಹಿಸಲಿ ಎಂದು ಮತ್ತು ಮಕ್ಕಳು ಆರೋಗ್ಯದಂದಿರಲು ಇಂತಹ ಕಾರ್ಯಗಳನ್ನು ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ, ಜೊತೆಗೆ ಹಲವಾರು ಸಂಘಸಂಸ್ಥೆಗಳು ಭಾಗವಹಿಸಿ ಸರಕಾರಿ ಶಾಲೆಗಳನ್ನ ಅಂದ ಚೆಂದವಾಗಿ ಕಾಣುವಂತೆ ಮಾಡುತ್ತಿರುವುದು ತುಂಬಾ ಸಂತೋಷ ಈ ಕಾರ್ಯದಲ್ಲಿ ಭಾಗಯಾದ ಎಲ್ಲಾ ಸಂಸ್ಥೆಗಳಿಗೂ ದನ್ಯವಾದಗಳು ಎಂದರು.

ನಂತರ ಮಾತನಾಡಿದ ಅಭಿನಂದನ ಶಿಕ್ಷಣ ಸಂಸ್ಥೆಯ ರುವಾರಿಗಳಾದ ಶಿವಪ್ರಸಾದ ಮಾತನಾಡಿ ಸರಕಾರಿ ಶಾಲೆಗಳಲ್ಲಿ ವನಸಿರಿ ಫೌಂಡೇಶನ್ ಸಸಿಗಳನ್ನು ಬೆಳಸಿ ಪೋಷಿಸುತ್ತಿರುವು ಸಂತೋಷದ ಸಂಗತಿ ಇದರ ಜೊತೆ ನಮ್ಮ 50ನೇ ಆವೃತ್ತಿಯ ಸೇವಾ ಕಾರ್ಯದಲ್ಲಿ ಭಾಗವಿಸಿದ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ತಂಡ ಹಾಗೂ ಸ್ನೇಹಸಿರಿ ಟ್ರಸ್ಟ ಇನ್ನೂ ಹಲವಾರು ಸಂಸ್ಥೆಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ಸಂಘಸಂಸ್ಥೆಗಳಿಗೆ ದನ್ಯವಾದಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ RL ರಮೇಶ ಬಾಬು ತುಮಕೂರು, ವೀರೇಶ ಸಾನಬಾಳ ಸಿಂಧನೂರು ಹಾಗೂ ಸಂಗಡಿಗರು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ರಾಜ್ಯದೆಲ್ಲಡೆ ಇನ್ನೂ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಲಿ ಎಂದು ತಗ್ಗು ತೋಡುವ ಮಷೀನ್ ನನ್ನು ವನಸಿರಿ ಫೌಂಡೇಶನ್ ಗೆ ಕೊಡುಗೆ ನೀಡಿದರು.

ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಶಾಲೆಯ SDMCಅದ್ಯಕ್ಷರಾದ ಶ್ರೀ ದುಗ್ಗಪ್ಪ, ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಅದ್ಯಕ್ಷರಾದ ಶ್ರೀ ಡಾ. ನವೀನ, ಸಹ ಕಾರ್ಯದರ್ಶಿಯಾದ ಚನ್ನವೀರನಗೌಡ,ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತ್ನಟ್ಟಿ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಸದಸ್ಯರಾದ ಯಲ್ಲಪ್ಪ ಮಾಸ್ಟರ್, ಆಶಾ ಕ್ಯಾತ್ನಟ್ಟಿ, ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ, ಅಮಿತಕುಮಾರ್ ಪುಟ್ಟಿ, ಬಸವರಾಜ ಬನ್ನಿಗಿಡ, ವೀರೇಶ ಸಾನಬಾಳ,ವನಸಿರಿ ತಂಡದ ಸದಸ್ಯರಾದ ಶರಣೇಗೌಡ ಹಡಗಿನಾಳ, ರಮೇಶ ಕುನ್ನಟಗಿ,ಚನಪ್ಪ ಕೆ.ಹೊಸಹಳ್ಳಿ,ಸಂಗೀತಾ ಸಾರಂಗ ಮಠ,ದ್ರಾಕ್ಷಾಯಣಿ ಗೋಮರ್ಶಿ, ವಿಜಯಲಕ್ಷ್ಮಿ, ಸಿಂದನೂರು ಭೂ ಸಂರಕ್ಷಣಾ ವೇದಿಕೆ ಅದ್ಯಕ್ಷ ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಕಲ್ಮಂಗಿ ಸ್ನೇಹಸಿರಿ ಟ್ರಸ್ಟ್ ಅದ್ಯಕ್ಷರಾದ ಶ್ರೀ ವಿಶ್ವನಾಥ ರಡ್ಡಿ ಕುಲಕರ್ಣಿ,ಕಾರ್ಯದರ್ಶಿ ಗಿರಿರಾಜ ಕುಲಕರ್ಣಿ,ಅಯ್ಯನಗೌಡ ಹೊಸಮನಿ,ಮಲ್ಲಿಕಾರ್ಜುನ ಹೊಸಗೌಡ್ರ, ರಮೇಶ ಉಳ್ಳಿ,ಶ್ರೀ ಬಸವರಾಜ ನಿಟ್ಟೂರು, ಶ್ರೀ ಪರಶುರಾಮ, ಶ್ರೀ ಯಮನಪ್ಪ, ಶ್ರೀ ಮಹಂಕಾಳೆಪ್ಪ,ಗ್ರಾಮ ಪಂಚಾಯತಿ ಸದಸ್ಯರುಗಳು, ಹಾಗೂ ವಿನಾಯಕ ಗೆಳೆಯರ ಬಳಗ, ಹಳೆಯ ವಿದ್ಯಾರ್ಥಿಗಳ ಬಳಗ ಹಾಗೂ ಮಲ್ಲಾಪೂರ ಗ್ರಾಮದ ಯುವಕರು ಉಪಸ್ಥಿತರಿದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here