ಇತಿಹಾಸ ಪುರುಷರ ಜೀವನ ಸಾಧನೆಗಳನ್ನು ಓದಿ ಅವರ ತತ್ವದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು – ಬಾಬು

0
109

ಕೋಲಾರ ನವೆಂಬರ್ 18 : ನಂ. 49-709
ಇತಿಹಾಸ ಪುರುಷರ ಜೀವನ ಸಾಧನೆಗಳನ್ನು ಓದಿ ಅವರ ತತ್ವದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕೋಲಾರ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ಅವರು ತಿಳಿಸಿದರು.
ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ 18 ವರ್ಷದ ಒಳಗಿನ ಮಕ್ಕಳಿಗಾಗಿ ಓದುವ ಬೆಳಕು ಯೋಜನೆಯಡಿ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಕೋವಿಡ್ 19 ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ದೂರವಾಗುತ್ತಿದೆ ಹಾಗಾಗಿ ಶಾಲಾ ಮಕ್ಕಳು ಈ ಬೆಳಕು ಅಭಿಯಾನದ ಅಡಿಯಲ್ಲಿ ಸದಸ್ಯತ್ವ ಪಡೆದು ವಿದ್ಯೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು . ಗ್ರಂಥಾಲಯದಲ್ಲಿ ಹಲವು ರೀತಿ ಪುಸ್ತಕಗಳು ಲಭ್ಯವಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್, ಅಬ್ದುಲ್ ಕಲಾಂ, ಗಾಂಧೀಜಿ ಸೇರಿದಂತೆ ಹಲವು ಹಾಗೆಯೇ ಈಗಾಗಲೇ ಆನ್ ಲೈನ್ ಶಿಕ್ಷಣದಿಂದ ವರಂಚಿತರಾಗದಂತೆ ನುರಿತ ಶಿಕ್ಷಣ ತಜ್ಞರ ಪಾಠ ಪ್ರವಚನಗಳನ್ನು ಶಾಲಾ ಮಕ್ಕಳಿಗೆ ಭೋದನೆ ಮಾಡಲು ಎಲ್ಲಾ ಶಾಲೆಗಳಲ್ಲಿ ಟಿವಿ ಗಳನ್ನು ಅಳವಡಿಸುವ ಮೂಲಕ ವಿದ್ಯಾಭ್ಯಾಸದ ಕಡೆ ಮಕ್ಕಳನ್ನು ಸೆಳೆಯಬೇಕಾಗಿದ್ದು ಎಂದರು.
ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಸದಸ್ಯತ್ವ ಪಡೆದು ಕನಿಷ್ಠ 2 ಪುಸ್ತಕಗಳನ್ನು ಪಡೆಯಬಹುದಾಗಿದೆ. ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 4 ರಿಂದ 6 ಘಂಟೆವರೆಗೆ ಶಾಲಾ ಮಕ್ಕಳು ಗ್ರಂಥಾಲಯದಲ್ಲಿ ಓದಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವೇಮಗಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಬಾಬು, ಗ್ರಂಥಪಾಲಕ ಸುಬ್ರಮಣಿ ಕೆ.ಎಸ್, ಕೋಲಾರ ತಾಲ್ಲೂಕು ಐಇಸಿ ಸಂಯೋಜಕ ಭಾಸ್ಕರ್ ಹಾಗೂ ಟಿಎಇ ಶ್ರೀನಿವಾಸ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here