ದ್ವಿತೀಯ ಪಿ.ಯು.ಸಿ. ದಾಖಲಾತಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ.

0
384

ಕೊಟ್ಟೂರು
ಕಳೆದ ವರ್ಷ ಸಾಕಷ್ಟು ಸಂಚಲನ ಮೂಡಿಸಿದ್ದ ಕೊಟ್ಟೂರಿನ ಶ್ರೀ ವೀರಭದ್ರೇಶ್ವರ ಎಜ್ಯುಕೇಷನ್ ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲೂಕು, ಇಟ್ಟಿಗಿ ಗ್ರಾಮದ ಶ್ರೀ ಪಂಚಮಸಾಲಿ ಪದವಿ ಪೂರ್ವ ಕಾಲೇಜು ಅಂತಿಮವಾಗಿ ಪ್ರಸಕ್ತ 2022-23ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಗೆ ದಾಖಲಾತಿ ಪಡೆಯಲು ಕಾನೂನಾತ್ಮಕವಾಗಿ ಒಪ್ಪಿಗೆ ಪಡೆದಿರುತ್ತದೆ. ರಿಟ್ ಅಫಿಲ್ ಸಂಖ್ಯೆ- 100141/2022ರ ದಿನಾಂಕ : 23-06-2022ರ ಧಾರವಾಡದ ಗೌರವಾನ್ವಿತ ಉಚ್ಛ ನ್ಯಾಯಾಲಯದ ದ್ವಿ ಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶದಲ್ಲಿ ಇಟ್ಟಿಗಿಯ ಶ್ರೀ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ಗೆ ದಾಖಲಾತಿ ಪಡೆಯಲು ಅನುಮತಿ ನೀಡಿ ಮಧ್ಯಂತರ ಆದೇಶ ನೀಡಿರುತ್ತದೆ. ಮಾನ್ಯ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಸಹ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಪ್ರವೇಶ ಪಡೆಯಲು ಅನುಮತಿ ನೀಡಿರುತ್ತಾರೆ. ಇತ್ತೀಚಿಗೆ ಪ್ರಕಟಗೊಂಡ 2022ರ ಮಾರ್ಚ್ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಮೊದಲ 10 ಸ್ಥಾನಗಳಲ್ಲಿ 3 ಸ್ಥಾನಗಳನ್ನು ಶ್ರೀ ಪಂಚಮಸಾಲಿ ಕಾಲೇಜಿನ ವಿದ್ಯಾರ್ಥಿಗಳು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇಟ್ಟಿಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ.ಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ನಿರ್ಧರಿಸಿದೆ. ಇಟ್ಟಿಗಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಗೆ ಅಡ್ಮಿಷನ್ ಪಡೆಯಬಹುದು ಎಂದು ಪ್ರಾಚಾರ್ಯರಾದ ಶ್ರೀ ದೇವರಾಜ ಬಳಿಗಾರ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here