ಸಸಿ ನೆಡಿ ಸ್ಟೇಟಸ್ ಇಡಿ, ಪರಿಸರ ಸ್ನೇಹಿ ಸ್ನೇಹಿತರ ದಿನ ನಮ್ಮದಾಗಲಿ

0
101

ಭಾರತೀಯ ಯುವಕರು ಇಂದು ಬರೀ ಶೋಕಿಯ ಜೀವನವನ್ನು ನೆಡೆಸುತ್ತಿರುವುದು ಶೋಚನೀಯ ಹೌದು. ವಿದೇಶಿಯ ಆಚರಣೆಗಳು ಹಾಗೂ ವಸ್ತುಗಳಿಗೆ ಅತಿವೇಗವಾಗಿ ಅಂಟಿಕೊಳ್ಳುತ್ತಾರೆ,
ಈ ಬರದಲ್ಲಿ ದೇಶದ ಸಂಸ್ಕøತಿಯನ್ನೇ ಮರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಂತೂ ಕೇಳುವುದೇ ಬೇಡ ಈ ಡ್ಯಾಡಿ ಡೇ, ಮಮ್ಮಿ ಡೇ, ಲವರ್ಸ್ ಡೇ, ಫ್ರೆಂಡ್ ಶಿಪ್ ಡೇ ಗಳ ಹಾವಳಿ ಹೆಚ್ಚಾಗಿದೆ. ಇವುಗಳು ಯಾವುವೂ ಇಂದು ಅರ್ಥಪೂರ್ಣ ಆಚರಣೆಗಳಾಗಿ ಉಳಿದಿಲ್ಲ. ದಿನನಿತ್ಯ ಎಷ್ಟು ಜನ ಕಷ್ಟ ಸುಖಗಳನ್ನು ವಿಚಾರಿಸುತ್ತಾರೆ?‌ಆದರೂ ಸ್ನೇಹಿತರು ವರ್ಷದಲ್ಲಿ ಒಂದು ದಿನ ವಿಶ್ ಮಾಡಿ ತೋರಿಕೆಗೆಂದು ಸ್ಟೇಟಸ್ ನಲ್ಲಿ ಫೊಟೋ ಹಾಕುವರು, ನಾಳೆಯ ದಿನ ಅದೇ ಸ್ನೇಹಿತ ಅಥವಾ ಸ್ನೇಹಿತೆ ಹಣವಿಲ್ಲವೆಂದಾಗ ನೀವು ಕರೆಮಾಡಿದ ಸ್ನೇಹಿತರು ಬರಬಾತಾಗಿ ಕುಳಿತಿದ್ದಾರೆ ಎನ್ನುವರು. ಹೇಳಿ ಈ ತೋರಿಕೆಯ ಸ್ನೇಹ ಹಾಗೂ ಒಂದು ದಿನಕ್ಕೆ ಸೀಮಿತವಾದ ಸ್ನೇಹ ಬೇಕಾ….?
ಕಸದಿಂದ ರಸ ತೆಗೆಯುವ ಭಾರತೀಯರಿಗೆ ಪ್ರತಿಯೊಂದನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುವುದು ಗೊತ್ತು. ಪ್ರಸ್ತುತ ಈ ಯುವಕರ ಮನಸ್ಥಿತಿಯನ್ನು ಬದಲಾಯಿಸಲಂತು ಸಾಧ್ಯವೇ ಇಲ್ಲ. ವ್ಯವಸ್ಥೆ ಸರಿಯಾಗಬೇಕೆಂದರೆ ಏನಾದರು ಮಡಲೇ ಬೇಕಲ್ಲವಾ ಹೀಗೆ ಯೋಚಿಸಿ ಕುಳಿತಾಗ ಕಣ್ಣಮುಂದೆ ಸಿಕ್ಕೆದ್ದೇ ಅಲ್ಲೊಂದು ಸಾಲು ಇತ್ತು ಅದೇನೆಂದರೆ “ಸಸಿ ನೆಡಿ ಸೆಟಸ್ ಇಡಿ” ಹೌದು ಇದೊಂತರ ಪರಿಣಾಮಕಾರಿ ಆಲೋಚನೆ. ಯುವಕರು ಫೋಟೋಗಳಂತು ಸ್ಟೇಟಸ್ ಗಳಿಗೆ ಹಾಕದೇ ಇರಲಾರರು ಯಾವನೋ ಪುಣ್ಯಾತ್ಮ ಫಾರ್ವಡ್ ಮೆಸೇಜನ್ನು ಕಳಿಸುವನು ಅದು ಬಹುಬೇಗ ವೈರಲ್ ಆಗುವುದು. ಎಲ್ಲಿ ನೋಡಿದರೂ ವಿಭಿನ್ನ ರೀತಿಯ ಫೋಸ್ ನೀಡುವ ಫೋಟೋ ಹಾವಳಿ, ಇದನ್ನೇ ಸ್ವಲ್ಪ ಬದಲಾಯಿಸಿದರೆ ದೇಶದ ಪರಿಸರ ವ್ಯವಸ್ಥೆಯನ್ನೇ ಬದಲಾಯಿಸಬಹುದೆಂದು ತಿಳಿಯಿತು. ನಾವ್ಯಾಕೆ ಪರಿಸರ ಸ್ನೇಹಿ ಸ್ನೇಹಿತರ ದಿನ ಆಚರಿಸಬಾರದೆಂದು. ಪ್ರತಿಯೊಬ್ಬರು ತಮ್ಮ ಸುತ್ತಲಿರುವ ಖಾಲಿ ಜಾಗದಲ್ಲಿ ಒಂದು ಗಿಡ ನೆಡಬಹುದಲ್ಲವೇ?.

ಲೇಖನ:ಅವಿನಾಶ ದೇಶಪಾಂಡೆ ✍️
ಶಿಕ್ಷಕರು,ಸಿಂಧನೂರು

LEAVE A REPLY

Please enter your comment!
Please enter your name here