ಎಸ್ ಆರ್ ಹಿರೇಮಠ ಭೇಟಿಯಾದ ಹುಳ್ಳಿ ಪ್ರಕಾಶ್

0
152

ಬಳ್ಳಾರಿ ಸುನಾಮಿ ಪತ್ರಿಕೆಯ ಸಂಪಾದಕ ಹುಳ್ಳಿ ಪ್ರಕಾಶ್ ರವರು ಮಂಗಳವಾರ ಬೆಂಗಳೂರಿನಲ್ಲಿ ಜನಸಂಗ್ರಾಮ ಪರಿಷತ್ತಿನ ಹಿರಿಯ ಪ್ರಮುಖರಾದ ಎಸ್ಆರ್ ಹಿರೆಮಠ್, ರಾಘವೇಂದ್ರ ಕುಷ್ಟಗಿ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ

ಆಕ್ರಮ ಗಣಿಗಾರಿಕೆಯ ನಂತರ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಆಗಿರಬಹುದಾದ ಬದಲಾವಣೆ, ಸದ್ಯದ ಪರಿಸ್ಥಿತಿ ಕುರಿತಂತೆ ಚರ್ಚಿಸಿದರು

ಬಹುಮುಖ್ಯವಾಗಿ ಗಣಿಭಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಇರುವ ಹದಿನೆಂಟು ಸಾವಿರ ಕೋಟಿರೂಪಾಯಿಗಳನ್ನು ಸುಪ್ರಿಂಕೋರ್ಟ್ ಮಾರ್ಗಸೂಚಿ ಪ್ರಕಾರ ಹೇಗೆಲ್ಲ ವಿನಿಯೋಗಿಸಬಹುದು ಎನ್ನುವುದರ ಬಗ್ಗೆ ಇರ್ವರು ಮುಖಂಡರು ಸವಿವರವಾಗಿ ತಿಳಿಸಿದರು.ಗಣಿಭಾಧಿತರು ಮತ್ತು ಅವರು ವಾಸವಾಗಿರುವ ಪ್ರದೇಶಗಳ ಸರ್ವಾಂಗಿಣ ಪ್ರಗತಿಗಾಗಿಯೇ ಈ ಹಣ ವಿನಿಯೋಗವಾಗಬೇಕಾಗಿದೆಯೇ ಹೊರತು ಅನ್ಯ ಕಾರ್ಯಗಳಿಗಲ್ಲ ಈ ಕಾರಣಕ್ಕೇನೆ
ಆ ಭಾಗದ ಜನತೆಯಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಬಹು ಹೊತ್ತು ಚರ್ಚಿಸಿದರು

ನಿಜಕ್ಕೂ ಇದೊಂದು ಮಹತ್ವಪೂರ್ಣ ಭೇಟಿಯಾಗಿತ್ತು ಎಂಬುದಾಗಿ ಹಿರಿಯ ಪತ್ರಕರ್ತ ಹುಳ್ಳಿ ಪ್ರಕಾಶ್ ತಿಳಿಸಿದರು.

ಅಧಿಕಾರಿ ವರ್ಗ, ಪ್ರಜಾ ಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆ ಜೊತೆಗೆ ಪ್ರಾಮಾಣಿಕವಾಗಿ ಪ್ರಯತ್ನ ಪಡದೆ ಇರುವುದು ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಜನರ ಬದುಕಿಗೆ ಬೆಳಕಾಗಬೇಕಾದ ಆರ್ ಆಂಡ್ ಆರ್ ಯೋಜನೆ ಸಾಧಕ ಭಾದಕಗಳ ಕುರಿತು ಸರಣಿ ಲೇಖನಗಳನ್ನು ಬರೆಯುವುದಾಗಿ ಅವರು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here