ವೈಭವದಿಂದ ಜರುಗಿದ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ.

0
203

ಕೊಟ್ಟೂರು: ಅದ್ದೂರಿಯಾಗಿ ಜರುಗಿದ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕದ ನೆರೆದಿದ್ದ ಭಕ್ತ ಸ್ತೋಮದ ಮಧ್ಯೆ ಬುಧವಾರ ಸಂಜೆ ವೈಭವ ಪೂರ್ವಿತವಾಗಿ ನೆರವೇರಿತು.
ತಾಲ್ಲೂಕಿನ ಉಜ್ಜಿನಿ ಸದ್ಧರ್ಮಪೀಠದ ಈ
ಮಹೋತ್ಸವವನ್ನು ವೀಕ್ಷಿಸಲೆಂದೆ
ನಾಡಿನೆಲ್ಲೆಡೆ ಯಿಂದ ಭಕ್ತರು ಮಧ್ಯಾಹ್ನದ ವೇಳೆಗೆ ದೇವಾಸ್ಥಾನದ ಪ್ರಾಂಗಣದಲ್ಲಿ ಜಮಾವಣೆ ಗೊಂಡಿದ್ದರು.ಸಂಜೆಯ ಗೋಧೂಳಿ ಸಮಯದ ಸಂಜೆ 5.55 ರ ಸುಮಾರಿಗೆ ಈ ಶಿಖರ ತೈಲಾಭಿಷೇಕ ನೆರವೇರುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮ ಸ್ವಾಮಿಗೆ ಜಯ-ಜಯಕಾರ ಅರ್ಪಿಸಿ, ಬಾಳೆ ಹಣ್ಣುಗಳನ್ನು ರಶಿಯೋಪಾದಿಯಲ್ಲಿ ತೂರಿ ತಮ್ಮ ಭಕ್ತಿ ಸಮರ್ಪಿಸಿದರು.

ಶ್ರೀ ಸ್ವಾಮಿಯ ರಥೋತ್ಸವದ ನಂತರದ ಎರಡನೇ ದಿನದ ಸದ್ದರ್ಮಪೀಠದ ವಾರ್ಷಿಕ ಧಾರ್ಮಿಕ ಕೈಂಕರ್ಯದಂತೆ ಶಿಖರ ತೈಲಾಭಿಷೇಕ ನೆರವೇರಿತು.

ಎಂದಿನಂತೆ ಜರ್ಮಲಿ ಪಾಳೆಗಾರ ಮನೆತನದವರು ಮಣ್ಣಿನ ಕುಡಿಕೆಯಲ್ಲಿ ಕಳುಹಿಸಿದ್ದ. ತೈಲವನ್ನು ಆಯಾಗಾರ ಬಳಗದವರು ಶಿಖರದ ಮೇಲೆ ಸುರಿದರು.

ನಂತರ ಇತರ ಭಕ್ತರು ಡಬ್ಬಗಟ್ಟಲೆ ಭಕ್ತಿಯ ಕಾಣಿಕೆಯಾಗಿ ನೀಡಿದ ಎಣ್ಣೆಯನ್ನು ಅಡಿಯಿಂದ ಮುಡಿಯವರೆಗೆ ಎರೆಯಲಾಯಿತು.

ಶಾಪ ವಿಮೋಚನೆಯ ಕಾರಣಕ್ಕಾಗಿ ಜರ್ಮಲಿ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಗೆ ಎಣ್ಣೆಯನ್ನು ಕಳುಹಿಸಿ ಕೊಡುವ ಪದ್ಧತಿಯಂತೆ ಪಾಳೆಗಾರರ ಮನೆತನದ ಕೆಲವರು ಪಾದಯಾತ್ರೆ ಮೂಲಕ ಎರಡು
ಮಡಿಕೆಯ ಕೊಡಗಳಲ್ಲಿ ಎಣ್ಣೆಯನ್ನು ದೂರದ ಜರ್ಮನಿಯಿಂದ ಉಜ್ಜಿನಿಗೆ
ಬುಧವಾರ ಮಧ್ಯಾಹ್ನದ ವೇಳೆಗೆ ತಂದರು.
ನಂತರ ಎಣ್ಣೆಯನ್ನು ಸಧರ್ಮ ಪೀಠದ ಆಯಗಾರದ ಬಳಗದವರು ಬರ ಮಾಡಿ ಕೊಂಡು ಮೆರವಣಿಗೆ ಯೊಂದಿಗೆ ದೇವಾಲಯಕ್ಕೆ ತಂದರು.
1008 ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ ಎಣ್ಣೆ ಗಡೆಗಳಿಗೆ ಆಶೀರ್ವದಿಸಿ ಶಿಖರಕ್ಕೆ ಸಂಜೆ 5.55ವೇಳೆಯ ಸುಮಾರಿಗೆ ಹಸಿರು ನಿಶಾನೆ ತೋರಿದರು.
ಈ ಘಳಿಗೆ ಯಿಂದ ಮಜ್ಜನಗೊಳಿಸುವ ಕಾರ್ಯ ಸುಮಾರು ಮುಕ್ಕಾಲು ಗಂಟೆಯ ವರಗೆ ನಡಿಯಿತು.
ಎಣ್ಣೆಯ ವಾಜ್ಯನರಿಂದ ಶಿಬಿರ ಸಂಪೂರ್ಣ ಒದ್ದೆಯಾಗಿತು.
ಈ ಬಗೆಯ ಶಿಖರದ ಮೇಲೆ ನಿಂತು ಸುಮಾರು 20ಕ್ಕೂ ಹೆಚ್ಚಿನ ಆಯಗಾರದ ಬಳಗದವರು ಕೆಳಗೆ ಜಾರಿ ಬೀಳುವ ಅಪಾಯವನ್ನು ಲೆಕ್ಕಿಸದೆ ತೈಲಾಭಿಷೇಕವನ್ನು ನೆರವೇರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು . ನೆರೆದಿದ್ದ ಎಲ್ಲಾರನ್ನು ಬೆರಗು ಗೊಳಿಸಿತು. ವಿವಿಧ ಮಠದ ಶಿವಾಚಾರ್ಯ ಸ್ವಾಮೀಜಿಗಳು ಸೇರಿದಂತೆ ಅನೇಕ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here