ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರೌಢರಿಮೆ ಹೆಚ್ಚಿಸಿಕೊಳ್ಳಿ-ರಾಜೇಶ್ ಅಭಿಮತ

0
210

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಶಾಲೆಯಲ್ಲಿ “ಇಂದಿನ ದಿನಗಳು ಸ್ಪರ್ಧಾತ್ಮಕ ಯುಗದ, ದಿನಗಳು”vಮಕ್ಕಳು ಬಾಲ್ಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಪ್ರೌಢಹಿರಿಮೆಯನ್ನು ತೋರುತ್ತಿರುವುದು ಪ್ರಗತಿಯ ಸೂಚಕ ಎಂದು ಮಾತನಾಡುತ್ತಾ ಈ ಗ್ರಾಮದ ಚಂದ್ರಶೇಖರಪುರ ಸರ್ಕಾರಿ ಹೈಸ್ಕೂಲ್ ಸುಂದರ ಪರಿಸರದಲ್ಲಿ ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಸಂಪೂರ್ಣ ವ್ಯವಸ್ಥೆಯೊಂದಿಗೆ ಸಿದ್ಧಗೊಂಡಿರುವ ಶಾಲೆ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಎಲ್ಲಾ ಪೂರಕ ಸಾಮಗ್ರಿಯಿಂದ ಸುಸಜ್ಜಿತಗೊಂಡಿದೆ, ವೈಜ್ಞಾನಿಕ ಗಣಿತ ಪ್ರಯೋಗಾಲಯ ಸಾಂದರ್ಭಿಕವಾಗಿ ಸುಸಜ್ಜಿತವಾಗಿದ್ದು ಕ್ರೀಯಾಶೀಲ ಶಿಕ್ಷಕರ ಸಾಧನೆಗೆ ಕೈಗನ್ನಡಿಯಾಗಿದೆ” ಎಂದು ಬಿಎಡ್ ಪ್ರಶಿಕ್ಷಣಾರ್ಥಿ ರಾಜೇಶ್ ನುಡಿದರು. ಅವರು ಚಂದ್ರಶೇಖರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೂಡ್ಲಿಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಾಲೇಜ್.ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ನಿಕಟ ಸೇವಾ ಪೂರ್ವ ತರಬೇತಿ ಅಂಗವಾಗಿ ಬಿಳ್ಕೋಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಳಿಕ ಮಾತನಾಡಿದ ಪ್ರೌಢಶಾಲಾ ಮುಖ್ಯಗುರುಗಳಾದ ಜಗದೀಶ್ ಮಾತನಾಡಿ “ಬಹುಶಃ ಸಮಾಜದಲ್ಲಿ ಯಾವ ಶ್ರೀಮಂತನಿಗೂ ಸಿಗಲಾರದಷ್ಟು ಮರ್ಯಾದೆ ಶಿಕ್ಷಕನಿಗೆ ಸಿಗುತ್ತೆ.ಶಿಕ್ಷಕನದ್ದು, ಶಿಕ್ಷಣದ ಗುರಿಗಳು ಸಾಧಿತವಾಗಬೇಕಾದುದು ಮುಖ್ಯ ಶಿಕ್ಷಕನಿಂದಲೇ, ಆದ್ದರಿಂದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉತ್ತಮ ತರಬೇತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಆತ್ಮವಿಶ್ವಾಸದ ಬಗ್ಗೆ ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣದ ಕುರಿತು ವಿವರಣೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಲಕ್ಷ್ಮೀದೇವಿ ಕರ್ಣಂ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ಪೂರ್ವ ತರಬೇತಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಆತ್ಮವಿಶ್ವಾಸದ ಬಗ್ಗೆ ತಿಳಿಸುವ ಅಭಿಪ್ರೇರಣೆ ಕಾರ್ಯಕ್ರಮ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಿಎಡ್ ಶಿಕ್ಷಣ ಮಹಾವಿದ್ಯಾಲಯದ ಒಂದು ವಿನೂತನ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿ ಆಗುತ್ತದೆ” ಎಂದರು. ಕಾರ್ಯಕ್ರಮದಲ್ಲಿ ಚಂದ್ರಶೇಖರಪುರ ಪ್ರೌಢಶಾಲಾ ಮುಖ್ಯಗುರುಗಳಾದ ಜಗದೀಶ್.ಶಿಕ್ಷಕರಾದ ಲಕ್ಷ್ಮೀದೇವಿ ಕರ್ಣಂ.ಜಯಲಕ್ಷ್ಮೀ. ಈಶಪ್ಪ. ಶ್ರೀಕಾಂತ್. ಗೋವಿಂದಪ್ಪ. ರೇವಣ್ಣ. ರವೀಂದ್ರ. ದೈಹಿಕ ಶಿಕ್ಷಕರಾದ ಅರುಣ್ ಕುಮಾರ್. ಪ್ರಶಿಕ್ಷಣಾರ್ಥಿಗಳಾದ ಶಂಕರ್ ನಾಗ್. ರಾಜೇಶ್. ಮಾರೇಶ್. ಸೇರಿದಂತೆ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here