ಯುವಸಮೂಹ ಶಿಕ್ಷಣದ ಹಿಂದೆ ಹೋದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ; ಡಿವೈಎಸ್ಪಿ. ಹರೀಶ್.

0
519

ಕೊಟ್ಟೂರು:ಜುಲೈ:18:-ಪಟ್ಟಣದಲ್ಲಿ ಭಾಗೀರಥಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ಪಿ.ಯು. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು, ಕಾರ್ಯಕ್ರಮವನ್ನು ಕೂಡ್ಲಿಗಿ ಡಿ.ವೈ.ಎಸ್.ಪಿ. ಹರೀಶ್ ಇವರು ಉದ್ಘಾಟಿಸಿ ಈಗಿನ ಯುವಸಮೂಹ ಶಿಕ್ಷಣದ ಹಿಂದೆ ಹೋದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು,ಹಾಗೆಯೇ ಪರೀಕ್ಷೆಯಲ್ಲಿ ಅನುತೀರ್ಣ ಆದರೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ, ಬದಲಾಗಿ ಸೋಲೆ ಗೆಲುವಿನ ಮೆಟ್ಟಿಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಉತ್ತಮ ವಿದ್ಯಾರ್ಥಿಯಾಗಿ ಜೀವನದಲ್ಲಿ ಸಾಧನೆ ಮಾಡಬಲ್ಲನು ಎಂದು ತಮ್ಮ ಜೀವನದಲ್ಲಿ ನಡೆದ ಘಟನೆಗಳು ಹಾಗೂ ತಾವು ಕಷ್ಟಪಟ್ಟು ಬೆಳೆದ ರೀತಿಯ ಬಗ್ಗೆ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಉನ್ನತ ಮಟ್ಟದ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕಂತೆ ಪರಿಶ್ರಮ ಪಡಬೇಕು ಹಾಗಾದಾಗ ಮಾತ್ರ ತಾವು ಅಂದುಕೊಂಡಿರುವ ಕನಸುಗಳು ನನಸಾಗಲು ಸಾಧ್ಯ ಎಂದು ತಮ್ಮ ಉದ್ಘಾಟನಾ ನುಡಿ ಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಟ್ಟೂರು ಪೊಲೀಸ್ ಠಾಣೆ ಯ ಸಬ್ ಇನ್ಸ್ಪೆಕ್ಟರ್ ವಿಜಯ ಕೃಷ್ಣ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಅವಶ್ಯಕತೆಗೆ ಅನುಗುಣವಾಗಿ ಮಾಡಿದಾಗ ಮಾತ್ರ ನಿಮ್ಮ ಜೀವನದಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಮ್ಮ ಹಿತನುಡಿಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲ ಶಿವನ ಗುತ್ತಿ ಪ್ರಾಂಶುಪಾಲರು ಭಾಗೀರಥಿ ಪದವಿ ಪೂರ್ವ ಕಾಲೇಜು ಕೊಟ್ಟೂರು ವಹಿಸಿದ್ದರು, ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎಸ್ ಶಿವನಗುತ್ತಿ ಅಭಿವೃದ್ಧಿ ಅಧಿಕಾರಿಗಳು ಭಾರತೀಯ ಜೀವ ವಿಮಾ ನಿಗಮ, ಶ್ರೀ ಚಟ್ರಿಕಿ ಬಸವರಾಜ್ ಅಧ್ಯಕ್ಷರು ಗಂಗೋತ್ರಿ ಕಾಲೇಜು,ಶ್ರೀ ಸಿ. ಬಿ.ರಜತ್ ಕಾರ್ಯದರ್ಶಿ ಗಂಗೋತ್ರಿ ಕಾಲೇಜು, ವೀಣಾ ಬಸವರಾಜ್ , ರಚನಾ ರಜತ್ ಇದ್ದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಶ್ರೀ ಶ್ಯಾಮ್ ರಾಜ್ ಟಿ. ಉಪನ್ಯಾಸಕರು ನುಡಿದರು,

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗುರುಸ್ವಾಮಿ,ಪ್ರಫುಲ್ ಚಂದ್ರ,ಪೂರ್ಣಚಂದ್ರ, ಮರುಳಪ್ಪ ಕೆ ಉಪಸ್ಥಿತಿ ಇದ್ದರು , ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವೀಣಾ ನಿರೂಪಿಸಿದರು,ಹೇಮಾ ಸ್ವಾಗತಿಸಿ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here