ನೂತನವಾಗಿ ಮುಖ್ಯ ಶಿಕ್ಷಕರಾಗಿ ಆಗಮಿಸಿದ ವೈ.ಎಂ.ಈಶಪ್ಪ ಅವರಿಗೆ ಅದ್ದೂರಿ ಸ್ವಾಗತ

0
223

ಕೂಡ್ಲಿಗಿ: ಆಗಸ್ಟ್-5 ಇಂದು ತಾಲೂಕಿನ ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ವೈ.ಎಂ ಈಶಪ್ಪ ಆಗಮಿಸಿದರು. ಶಾಲೆಯ ಮಕ್ಕಳು ಸುಮಾರು 50ಕ್ಕೂ ಹೂಗುಚ್ಚಗಳನ್ನು ತಯಾರಿ ಮಾಡಿಕೊಂಡು ಬಂದು ಮುಖ್ಯ ಶಿಕ್ಷಕರಿಗೆ ಕೊಟ್ಟು ಚಪ್ಪಾಳೆ ಮುಖಾಂತರ ಸ್ವಾಗತಿಸಿದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ರುಕ್ಮಿಣಿಬಾಯಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಎಸ್ಡಿಎಂಸಿ ಅಧ್ಯಕ್ಷರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವ ಅಧಿಕಾರಿಗಳಾದ ಎಸ್ ಜಗದೀಶ್, ಜಿಲ್ಲಾ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎನ್.ಎಂ ಶ್ರೀಕಾಂತ್ ಹಾಗೂ ಇದೇ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಎಚ್.ಕರಿಬಸಪ್ಪ, ಎಸ್ಡಿಎಂಸಿ ಅಧ್ಯಕ್ಷರಾದ ರಾಜಶೇಖರ್ ಮತ್ತು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ರುಕ್ಮಿಣಿಬಾಯಿ. ಭೈರವ ಶೆಟ್ಟಿ, ಸುದರ್ಶನ್, ನಿಜಗುಣಪ್ಪ, ಸಿದ್ದೇಶ್, ಬಸವರಾಜ್, ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಈಶಪ್ಪ ಮಾತನಾಡಿ ಇಂಥಹ ಹಳ್ಳಿ ಶಾಲೆಯಲ್ಲಿ ಸೇವೆ ಮಾಡುವುದು ನಮ್ಮ ಪುಣ್ಯ ಈ ಶಾಲೆಯಲ್ಲಿ ಮಕ್ಕಳ ಶಿಸ್ತು ಹಾಗೂ ಶಿಕ್ಷಕರಲ್ಲಿ ಇರುವ ಒಗ್ಗಟ್ಟು, ಶಿಸ್ತನ್ನು ನಾನು ನಮ್ಮ ತಾಲ್ಲೂಕಿನಲ್ಲಿ ಎಲ್ಲಿ ನೋಡಿಲ್ಲ ರಾಮಸಾಗರ ಹಟ್ಟಿ ಶಾಲೆಯ ಬಗ್ಗೆ ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಅಧಿಕಾರಿಗಳು ಮಾತನಾಡುತ್ತಾರೆ. ಶಿಸ್ತು ಮತ್ತು ಶಿಕ್ಷಕರಲ್ಲಿ ಒಗ್ಗಟ್ಟು ತನ ರಾಮಸಾಗರ ಹಟ್ಟಿ ಶಾಲೆಯಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ ಎನ್ನುವ ವಿಚಾರ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳೇ ಮಾತನಾಡುತ್ತಾರೆ ಇಂಥ ಶಿಕ್ಷಕರ ಜೊತೆ ಮಕ್ಕಳ ಜೊತೆ ನಾನು ಕೆಲಸ ಮಾಡುವುದಕ್ಕೆ ತುಂಬಾ ಸಂತೋಷವಾಗುತ್ತದೆ, ಇನ್ನು ಈ ಶಾಲೆ ದೊಡ್ಡಮಟ್ಟದಲ್ಲಿ ಬೆಳೆಸುವುದಕ್ಕೆ ನಾನು ಪ್ರಯತ್ನ ಮಾಡುತ್ತೇನೆ. ಈ ಶಾಲೆಯನ್ನು ನೋಡಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಇನ್ನು ಈ ಶಾಲೆಯ ಮಕ್ಕಳು ನನ್ನ ಅದ್ದೂರಿಯಾಗಿ ಸ್ವಾಗತ ಮಾಡಿರುವುದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಎಂದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿಬಾಯಿ ಗ್ರೀನ್ ಪೆನ್ ಕೊಡುವುದರ ಮುಖಾಂತರ ಅಧಿಕಾರವನ್ನು ಹಸ್ತಾಂತರಿಸಿದರು ಮತ್ತು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜಿ.ಟಿ.ರಾಜಶೇಖರ್ ಅವರು ಮುಖ್ಯ ಶಿಕ್ಷಕರಿಗೆ ಶಾಲು ಹೂವಿನ ಹಾರ ಹಾಕಿ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಓಬಣ್ಣ, ಪುರುಷೋತ್ತಮ್, ರೇವಣ್ಣ, ಪಾಪಣ್ಣ, ಹಂಪಣ್ಣ ಮತ್ತು ಗ್ರಾಮದ ಹಿರಿಯರು ಯುವಕರು ಭಾಗವಹಿಸಿದ್ದರು.

ವರದಿ:-ಮಂಜುನಾಥ್. ಹೆಚ್.

LEAVE A REPLY

Please enter your comment!
Please enter your name here