ಕೊಟ್ಟೂರು:ಜುಲೈ:23:-
ಶೇಕಡ 100%ರಷ್ಟು ಫಲಿತಾಂಶ ಪಡೆದ ಇಂದು ಸಿ.ಬಿ.ಎಸ್.ಇ. ಶಾಲೆ.
ಕೊಟ್ಟೂರಿನ ಇಂದು ಸಿಬಿಎಸ್ಇ ಶಾಲೆಯು 2021-22ನೇ ಸಾಲಿನ ಸಿ.ಬಿ.ಎಸ್.ಇ. 10ನೇ ತರಗತಿ ಫಲಿತಾಂಶದಲ್ಲಿ ಶೇಕಡ 100%ರಷ್ಟು ಫಲಿತಾಂಶ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿ ಅಮೃತ ಹೆಚ್ ಎಸ್ 500ಕ್ಕೆ 488 (97.6%), ಅಂಕಗಳನ್ನು ಗಳಿಸುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾಳೆ. ವಿದ್ಯಾರ್ಥಿನಿ ಭೂಮಿಕ ಕೆ ಎ 500ಕ್ಕೆ 433 (86.6%), ವಿದ್ಯಾರ್ಥಿ ಸಾಯಿಕೃಷ್ಣ ಬಿ ಎಸ್ 500ಕ್ಕೆ 424 (84.8%), ವಿದ್ಯಾರ್ಥಿನಿ ಸೃಷ್ಟಿ ಹೆಚ್ ಜೆ 500ಕ್ಕೆ 413 (82.6%), ವಿದ್ಯಾರ್ಥಿ ಕೆ ಲಿಖಿತ್ ಕುಮಾರ್ 500ಕ್ಕೆ 411 (82.2%) ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದಿರುತ್ತಾರೆ.
ಶಾಲೆಗೆ ಅತ್ಯುತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಯ ಸಿಬ್ಬಂದಿ ವರ್ಗದವರಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ಬಳಗದಿಂದ ಶುಭ ಹಾರೈಸಿರುತ್ತಾರೆ.
ವರದಿ: ಶಿವರಾಜ್ ಕನ್ನಡಿಗ