ತೋರಣಗಲ್ಲು ಗ್ರಾಮದಲ್ಲಿ “ವಿಶ್ವ ಶೌಚಾಲಯ ದಿನಾಚರಣೆ” ಕುರಿತು ಜಾಗೃತಿ,

0
186

ಸಂಡೂರು: ನ:21: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ “ವಿಶ್ವ ಶೌಚಾಲಯ ದಿನಾಚರಣೆ”ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,
ಈ ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ಮನೆಗೂ ಇರಬೇಕು,ಶೌಚಾಲಯದಲ್ಲೆ ಮಲ ವಿಸರ್ಜನೆಗೆ ಹೋಗ ಬೇಕು, ಪ್ರತಿಯೊಬ್ಬರೂ ಗೃಹ ಶೌಚಾಲಯ ಬಳಸುವುದರ ಮೂಲಕ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು, ಟೈಫಾಯಿಡ್, ಹೆಪಟೈಟಿಸ್ ನಂತಹ ಕಾಯಿಲೆಗಳನ್ನು ತಡೆಗಟ್ಟಬಹುದು, ಮತ್ತು ರಕ್ತ ಹೀನತೆಗೆ ಕಾರಣವಾಗುವ ಹುಳುಗಳ ಭಾದೆಯನ್ನು ತಪ್ಪಿಸ ಬಹುದು, ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಗೃಹ ಶೌಚಾಲಯ ಬಳಸುವುದು ಅವರ ಹಕ್ಕು ಎಂಬುದನ್ನು ಅರಿತುಕೊಳ್ಳಬೇಕು, ಗ್ರಾಮಗಳಲ್ಲಿ ಇಂದಿಗೂ ರಸ್ತೆಗಳ ಮೇಲೆ ಮಲವಿಸರ್ಜನೆ ಮಾಡುವುದು ಕಾಣುತ್ತೇವೆ, ಕೆಲವು ಗ್ರಾಮಗಳಲ್ಲಿ ಮಹಿಳೆಯರು ಕತ್ತಲಾಗುವುದನ್ನು ಕಾಯುತ್ತಾರೆ, ಕತ್ತಲಲ್ಲಿ ಹಾವು-ಚೇಳುಗಳ ಕಡಿತಕ್ಕೆ ಬಲಿಯಾಗಿರುವುದನ್ನು ಕೇಳಿದ್ದೇವೆ,

ಬಯಲು ಶೌಚದಿಂದ ಆರೋಗ್ಯದ ಮೇಲೆ ಆಗುವ ಹಾನಿಗಳನ್ನು ತಪ್ಪಿಸಲು 2001 ರಿಂದ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತಿದೆ, ವಿಶ್ವಸಂಸ್ಥೆ 2030 ರ ವೇಳೆಗೆ ಪ್ರತಿಯೊಬ್ಬರೂ ಸುರಕ್ಷಿತ ಶೌಚಾಲಯ ಹೊಂದುವ ಗುರಿಯನ್ನು ಇಟ್ಟುಕೊಂಡು ಕ್ರಮಗಳನ್ನು ಕೈಗೊಂಡಿದೆ, ಶೌಚಾಲಯ ಇಲ್ಲದವರು ಸರ್ಕಾರದಿಂದ ದೊರೆಯುವ ಅನುದಾನವನ್ನು ಬಳಕೆ ಮಾಡಿಕೊಂಡು ಗೃಹ ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು, ಕೆಲವರು ಶೌಚಾಲಯ ನಿರ್ಮಾಣ ಮಾಡಿಕೊಂಡರೂ ಬಳಸುವುದಿಲ್ಲ ಅಂತವರು ಬಯಲು ಶೌಚ ಮಾಡುವುದರಿಂದ ರೋಗಗಳು ಹರಡುತ್ತವೆ ಎಂಬುದುನ್ನು ಅರಿತು ಕೊಂಡು ಗೃಹ ಶೌಚಾಲಯ ಬಳಸಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಫೆಸಿಲಿಟೇಟರ್ ಬಸಮ್ಮ,ನೀಲಮ್ಮ,ಶ್ರೀದೇವಿ, ಸುಶೀಲಮ್ಮ, ತಿಮ್ಮಕ್ಕ,ತೇಜಮ್ಮ, ಪದ್ಮಾ,ಹುಲಿಗೆಮ್ಮ, ಆಶಾ, ರೇಖಾ,ವೆಂಕಟಲಕ್ಷ್ಮಿ,ಮತ್ತು ಗ್ರಾಮಸ್ಥರಾದ ಸುರೇಂದ್ರ, ನಾಗಾರ್ಜುನ,ಶಿವಪ್ರಸಾದ್,ರಂಗಮ್ಮ,ಪಾರ್ವತಿ, ರಾಧ,ಲಕ್ಷ್ಮೀದೇವಿ, ಸಾವಿತ್ರಿ, ನಾಗಮ್ಮ,ಮಾಲತಿ,ವೆನ್ನೆಲಾ,ಮಲ್ಲಮ್ಮ,ಹೊನ್ನೂರಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here