ಜಂಪ್ ರೋಪ್ ಡಬಲ್ ಡಚ್ ನಲ್ಲಿ ವಿಶ್ವದಾಖಲೆಗೆ ಸಾಕ್ಷಿಯಾದ ವಿಜಯನಗರ

0
97

ಹೊಸಪೇಟೆ:ಜುಲೈ:31: ಜಂಪ್ ರೋಪ್ ಡಬಲ್ ಡಚ್ ನಲ್ಲಿ ನಿರಂತರ 36ಗಂಟೆಗಳ ಹೊಸ ವಿಶ್ವದಾಖಲೆಗೆ ವಿಜಯನಗರ ಸಾಕ್ಷಿ ಯಾಯಿತು.

ಹೊಸಪೇಟೆಯ ಸಾಯಿಲೀಲಾ ರಂಗಮಂದಿರದಲ್ಲಿ‌ ಶನಿವಾರ ರಾತ್ರಿ 8ಗಂಟೆಗೆ ಈ ಹಿಂದೆ ಇದ್ದ 24ಗಂಟೆಗಳ ದಾಖಲೆಯನ್ನು ಬೆಳಿಗ್ಗೆ 8ಕ್ಕೆ ಅಳಿಸುವ ಮೂಲಕ ರಾತ್ರಿ 8ಗಂಟೆಗೆ36 ಗಂಟೆಗಳ ಹೊಸದಾಖಲೆ ಸೃಷ್ಟಿಸಿದರು ಆತಿಥ್ಯಯ ಕರ್ನಾಟಕ ಸೇರಿದಂತೆ ದಕ್ಷಿಣದ ತಮಿಳನಾಡು, ಕೇರಳ, ಆಂದ್ರಾ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ಉತ್ತರದ ಮಧ್ಯಪ್ರದೇಶ, ಗುಜರಾತ, ರಾಜಸ್ಥಾನ, ಚರ್ತೀಸಗಡ್, ಮೇಘಾಲಯ, ಪಾಂಡಿಚೆರಿ, ಆಸಂ, ಉತ್ತರಪ್ರದೇಶ, ಹರಿಯಾಣ ದೆಹಲಿ ರಾಜ್ಯದ 150 ಮಕ್ಕಳು ವಿಶ್ವದಾಖಲೆಯ ಕ್ಷಣದಲ್ಲಿ ತಮ್ಮದೇ ಹೊಸ ದಾಖಲೆಯನ್ನು ಬರೆದರು.

8 ಗಂಟೆಯಾಗುತ್ತಿದ್ದಂತೆ ಜಂಪ್ ರೋಪ್ ನ 150 ಕ್ರೀಡಾಪಟುಗಳು ಸೇರಿದಂತೆ ರಾಷ್ಟ್ರೀಯ ಕ್ರೀಡಾಪಟುಗಳು ಪರಸ್ಪರ ಆಲಿಂಗನ, ಬಾಣ ಬಿರುಸುಗಳ ಸಂಭ್ರಮದೊಂದಿಗೆ ದೇಶಭಕ್ತಿ ಗೀತೆಗಳು ನಿನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಭಾರತಕ್ಕೆ ಹೆಮ್ಮಯಾಗಿದ್ದರು ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವುದರಿಂದ ಕರ್ನಾಟಕದ ಕ್ರೀಡಾಪಟುಗಳು ಕನ್ನಡ ಧ್ವಜದೊಂದಿಗೆ ಹುಟ್ಟಿದರೇ ಕನ್ನಡನಾಡಲಿ ಹುಟ್ಟಬೇಕು ಎಂಬ ಗೀತೆಗೂ ದೇಶದ ಎಲ್ಕಾ ಭಾಗಗಳ ಕ್ರೀಡಾಪಟುಗಳನ್ನು ಒಳಗೊಂಡಂತೆ

ಬ್ಯಾಂಕ್ ಅಧ್ಯಕ್ಷ ಹಾಗೂ ಜಂಪ್ ರೋಪ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಫೆಡರೇಷನ್ ಸಹ ಕಾರ್ಯದರ್ಶಿ ಸಾಜೀದ್ ಖಾನ್, ನಿರ್ದೇಶಕ ಹಾಗೂ ವಿಕಾಸ ಬ್ಯಾಂಕ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ವಿಶ್ವದಾಖಲೆಯ ಕಾರ್ಯಕ್ರಮದ ಉಸ್ತುವಾರಿ ಅನಂತ ಜೋಶಿ, ಅಸೋಸಿಯೇಷನ್ ನಿರ್ದೇಶಕರಾದ ಕೆ.ದಿವಾಕರ, ರಮೇಶ ಪುರೋಹಿತ, ಪ್ರಧಾನ ಕಾರ್ಯದರ್ಶಿ, ವಿಶ್ವದಾಖಲೆಯ ಇವೇಂಟ್ ಸಿ.ಇ.ಓ ಸಾಗರ್ ಕಶ್ಯಪ್‌ ಪಾಲ್ಗೊಂಡಿದ್ದರು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here