ಸಮಾಜ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ.

0
195

ಕೊಟ್ಟೂರು:ಆಗಸ್ಟ್:15:-ತಾಲೂಕಿನ ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕನ್ನನಾಯಕನಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಮೃತ ಮಹೋತ್ಸವದ ವೇಳೆ ಗ್ರಾಮದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕುರಿತು ಶ್ರೀಮತಿ ರಾಧಿಕಾ ಪಂಪಾಪತಿ ಕಾರ್ಯದರ್ಶಿಗಳು ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆ ಇವರು ನಮ್ಮ ಸಂಸ್ಥೆಯು ಕಳೆದ 5 ವರ್ಷಗಳಿಂದ ಸಮಾಜ ಮುಖಿ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮ ಪುಣ್ಯ ಎಂದು ಸಂಸ್ಥೆಯ ಬಗ್ಗೆ ಮಾಹಿತಿ ತಿಳಿಸುತ್ತಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 96% ರಷ್ಟು ಗ್ರಾಮದ ಬಿ.ನಿರಂಜನ್ ತಂದೆ ಮರಿಕೆಂಚಪ್ಪ ಬಿ. ಇವರಿಗೆ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಮರುಳಪ್ಪ ಕೆ ಹಾಗೂ ಸಂಯೋಜಕ ಶಶಿಕಿರಣ ಕೆ ಇವರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು, ಹಾಗಾಗೇ ದ್ವಿತೀಯ ಪಿಯುಸಿ ಯಲ್ಲಿ ಶೇಕಡಾ 97 % ಗಳಿಸಿದ ಕುಮಾರಿ ನಯನ ಜಿ. ತಂದೆ ಹಾಲಪ್ಪ ಜಿ. ಇವರಿಗೆ ಸಂಸ್ಥೆಯ ಸಹಕಾರ್ಯದರ್ಶಿ ಶ್ರೀಮತಿ ಚೈತ್ರ ಇವರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು, ಅದೇ ರೀತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಪ್ರೌಢ ಹಂತಕ್ಕೆ ಹೋಗಿರುವ ಎಂಟನೇ ತರಗತಿಯ ವಿದ್ಯಾರ್ಥಿನಿಯಾರದ ಭವ್ಯ ಎಂ, ಸಿಂಧು ಜಿ, ಜಲಜಾಕ್ಷಿ ಇವರಿಗೆ ಶಾಲೆಯ ಎಸ್. ಡಿ.ಎಂ.ಸಿ. ಹಾಲಿ ಅಧ್ಯಕ್ಷರು,ಮಾಜಿ ಅಧ್ಯಕ್ಷರು, ಗ್ರಾಮಪಂಚಾಯಿತಿ ಸದಸ್ಯರು ಇವರುಗಳು ಪ್ರಶಸ್ತಿ ಪತ್ರ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here