ಸಂಡೂರು ತಾಲೂಕು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

0
387

ಸಂಡೂರು:ಅ:01:-31-07-2022 ರಂದು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಶಾಂತಿ ಸಮುದಾಯ ಭವನದಲ್ಲಿ, ಜೆನ್ ಮಾರ್ಷಲ್ ಆರ್ಟ್ಸ್ ಕರಾಟೆ ಸ್ಕೂಲ್ ಆಯೋಜಿಸಿದ್ದ ಮಳವಳ್ಳಿ ಓಪನ್ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಂಡೂರು ತಾಲೂಕು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಕರಾಟೆ ಪಂದ್ಯಾವಳಿಯ, ಕತಾ ವಿಭಾಗದಲ್ಲಿ 2-ಚಿನ್ನ (ವಿಷ್ಣು. ಬಿ, ಮದಿಹಾ. ಎಂ ), 2 -ಬೆಳ್ಳಿ (ಕೃಷ್ಣ. ಕೆ ಶಾರದಾ. ಕೆ), 3 -ಕಂಚಿನ (ಸುಮತಿ. ಕೆ, ಸಿಂಚನ. ಬಿ, ಪ್ರೀತಮ್. ಬಿ )ಪದಕಗಳು ಹಾಗೂ ಫೈಟಿಂಗ್ ವಿಭಾಗದಲ್ಲಿ 1-ಪ್ರಥಮ ಟ್ರೋಫಿ (ಸಿಂಚನ. ಬಿ ),4 -ದ್ವಿತೀಯ ಟ್ರೋಫಿ (ಸುಮತಿ. ಕೆ,ಪ್ರೀತಮ್. ಬಿ, ವಿಷ್ಣು. ಬಿ, ಶಾರದಾ. ಕೆ) ,2-ತೃತೀಯ (ಕೃಷ್ಣ. ಕೆ, ಮದಿಹಾ. ಎಂ ) ಟ್ರೋಫಿಗಳನ್ನು ಗೆಲ್ಲುವ ಮೂಲಕ ಒಂದು ಉತ್ತಮ ಸಾಧನೆಯನ್ನು ಮಾಡಿ ಸಂಡೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರು ಸೆನ್ಸ್ಯಿ ಶಿವಕುಮಾರ್ ಹೇಳಿದರು.

ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಈ ಕಾರ್ಯಕ್ರಮದಲ್ಲಿ ಸೆನ್ಸ್ಯಿ ಅಂಬರೀಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here