ಕೊಟ್ಟೂರು ತಾಲೂಕಿನಲ್ಲಿ ನುಲಿಯ ಚಂದಯ್ಯ ಜಯಂತಿಗೆ ಸಂಭ್ರಮ

0
204


ಕೊಟ್ಟೂರು:ಕಾಯಕಯೋಗಿ ದಾಸೋಹ ಶಿವಶರಣ ಶ್ರೀ ಶಿವಶರಣ ನೂಲಿಯ ಚಂದಯ್ಯ ಜಯಂತಿ ಸರ್ಕಾರ ವತಿಯಿಂದ ಆಚರಣೆ ಮಾಡುವ ಆದೇಶ ಹೊರಡಿಸಿದ್ದಕ್ಕೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ವಿಜಯನಗರ ಜಿಲ್ಲೆಯ ಸಮುದಾಯದವರು ಸಂತಸ ವ್ಯಕ್ತಪಡಿಸಿದೆ.

ಸರ್ಕಾರದ ಆದೇಶ ಹೊರಬೀಳುತ್ತಲೇ ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಘಟಕದ ಪದಾಧಿಕಾರಿಗಳು ಕೊರಚ ಕೊರಮ ಕೊರವ ಸಮುದಾಯದಗಳ ಒಕ್ಕೂಟ ಅವಿರತ ಹೋರಾಟ, ಹಾಗೂ ಎಡೆಬಿಡದ ಛಲ ಮತ್ತು ಸಮಾಜಿಕ ಬದ್ದತೆಯ ಫಲವಾಗಿ ಕಳೆದ ೩ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುಳುವ ಸಮಾಜದ ಬೇಡಿಕೆ ಈಡೇರಿದೆ. 12 ನೇ ಶತಮಾನದ ಸರ್ವಶ್ರೇಷ್ಟ ವಚನಕಾರರಲ್ಲೊಬ್ಬರಾದ ಲಿಂಗ, ಜಂಗಮ, ಕಾಯಕ ಸದ್ಭಾವಿ, ಶ್ರೀ ನುಲಿಯ ಚಂದಯ್ಯನವರ ಜಯಂತಿಯನ್ನು ಪ್ರತಿ ವರ್ಷ ನೂಲಿನ ಹುಣ್ಣಿಮೆಯ ದಿನದಂದು ಸರ್ಕಾರ ರಾಜ್ಯಾದ್ಯಾಂತ ರಜಾ ರಹಿತ ಸರ್ಕಾರಿ ಜಯಂತಿಯನ್ನಾಗಿ ಆಚರಣೆ ಮಾಡುವಂತೆ ಅಧಿಕೃತ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದೆ.

ಇದಕ್ಕೆ ಬೆಂಬಲ ಮತ್ತು ಸಂಪೂರ್ಣ ಸಹಕಾರ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸಚಿವರುಗಳಿಗೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಸಮಸ್ತ ಅಲೆಮಾರಿ ಕುಳುವ ಸಮಾಜದ ಬಂಧುಗಳ ಪರವಾಗಿ ಕುಳುವ ಮಹಾಸಂಘದ ರಾಜ್ಯ ಘಟಕ, ವಿಜಯನಗರ ಜಿಲ್ಲಾ ಯ ಕುಳುವ ಮಹಾ ಸಂಘದ ತಾಲೂಕು ಕೊಟ್ಟೂರು ಘಟಕ, ವತಿಯಿಂದ ಸಿಹಿ ಹಂಚಿ ಹೃತ್ಪೂರ್ವಕವಾದ ಅಭಿನಂದನೆಗಳು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳವ ಮಹಾ ಸಂಘದ ರಾಜ್ಯ ಉಪಾಕಾರ್ಯದರ್ಶಿ ಹಾಗೂ ವಿಜಯನಗರ ಜಿಲ್ಲಾ ಸಂಘಟನಾ ಉಸ್ತುವಾರಿ ಕೆ ಕೊಟ್ರೇಶ್.ಹಿರಿಯ ಮುಂಗಡ. ಕೆ ಹಾಲಪ್ಪ.ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್.ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಭಂಜತ್ರಿ. ಬೆಳ್ಳಿರಥದ ಸಿದ್ದಣ್ಣ. ಪರಶುರಾಮ್. ಈಶ್ವರ್. ಹನುಮಂತ.ಜಯಣ್ಣ.ಹನುಮಂತಪ್ಪ .ಕಾಂತಪ್ಪ.ರಾಮ.ಸಣ್ಣ ದ್ಯಾಮಪ್ಪ. ವೆಂಕಣ್ಣ. ಗಜಪುರ ಅಜ್ಜಪ್ಪ.ಇನ್ನು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here